ರೋಟರಿ ವಲಯ 1ರ ಸಾಂಸ್ಕ್ರತಿಕ ಸ್ಪರ್ಧೆ-2018

ಕಿನ್ನಿಗೋಳಿ : ಸ್ಪರ್ಧಾ ಮನೋಬಾವನೆಯಿದ್ದಲ್ಲಿ ಭವಿಷ್ಯದಲ್ಲಿ ಯಶಸ್ಸು ಸಾಧ್ಯ. ಊರಿನ ಸಮಸ್ಯೆಗಳನ್ನು ಬಗೆಹರಿಸಲು ಕೂಡು ಕುಟುಂಬದಂತಿರುವ ರೋಟರಿಯಂತಹ ಸಂಘ ಸಂಸ್ಥೆಗಳಿಂದ ಸಾಧ್ಯ ಎಂದು ರಂಗ ನಟ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ ಹೇಳಿದರು.
ಭಾನುವಾರ ಕಿನ್ನಿಗೋಳಿ ರೋಟರಿ ರಜತ ಭವನದಲ್ಲಿ ನಡೆದ ರೋಟರಿ 3181 ವಲಯ 1ರ ರೋಟರಿ ಕ್ಲಬ್‌ಗಳ ಸಾಂಸ್ಕೃತಿಕ ಸ್ಪರ್ಧೆ 2018ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಕೆ.ಬಿ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಹೇಮಂತ್ ಎನ್ ಶೆಟ್ಟಿಗಾರ್ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯ ಹಸ್ತ ನೀಡಲಾಯಿತು.
ವಲಯ 1ರ ಅಸಿಸ್ಟೆಂಟ್ ಗವರ್ನರ್ ಮೊಹಮ್ಮದ್ ಅಸ್ಲಾಂ, ವಲಯ ಸೇನಾನಿ ಜೆರಾಲ್ಡ್ ಮಿನೇಜಸ್, ವಲಯ ಸಾಂಸ್ಕ್ರತಿಕ ಚೇರ‍್ಮನ್ ಶರತ್ ಶೆಟ್ಟಿ, ಕ್ಲಬ್ ಸಾಂಸ್ಕ್ರತಿಕ ಚೇರ‍್ಮನ್ ರಾಜೇಶ್ ಕೆಂಚನಕೆರೆ ಉಪಸ್ಥಿತರಿದ್ದರು.
ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಕೆ.ಬಿ. ಸುರೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು

Kinnigoli-10141801

 

Comments

comments

Comments are closed.

Read previous post:
Kateel-10131814
ಕಟೀಲು ನವರಾತ್ರಿ ತೃತೀಯ ದಿನದ ಮೆರವಣಿಗೆ

ಕಟೀಲು : ಕಟೀಲು ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿಯ 33 ನೇ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆಯು ಶುಕ್ರವಾರ ರಾತ್ರಿ ಕಟೀಲು ಪದವಿಪೂರ್ವ ಕಾಲೇಜಿನಿಂದ ಹೊರಟು ಅಜಾರು ಮೂಲಕ...

Close