ಕಟೀಲು : ಶ್ರೀ ದೇವರ ಶೇಷವಸ್ತ್ರ ವಿತರಣೆ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ  ನವರಾತ್ರಿ ಮಹೋತ್ಸವದ ವಿಶೇಷ ದಿನವಾದ ಲಲಿತಾ ಪಂಚಮಿ ಸೋಮವಾರ ನಡೆಯಿತು. ಪ್ರತೀ ವರ್ಷದಂತೆ ಈ ವರ್ಷವೂ ರಾತ್ರಿ ಅನ್ನಪ್ರಸಾದ ಸ್ವೀಕರಿಸುವ ಮಹಿಳಾ ಭಕ್ತರಿಗೆ ದುರ್ಗೆಯ ಶೇಷವಸ್ತ್ರವನ್ನು ನೀಡಲಾಯಿತು. ಸಾವಿರಾರು ಭಕ್ತರು ಸಂಜೆ 5 ರಿಂದಲೇ ಸರದಿ ಪ್ರಾರಂಭವಾಗಿದ್ದು, ಭೋಜನ ಶಾಲೆಗೆ ಹೋಗಲು ದೇವಸ್ಥಾನದ ಬಸ್ ನಿಲ್ದಾಣ ಕುದ್ರುಮೂಲಕ ಸರದಿ ವ್ಯವಸ್ಥೆ ಮಾಡಲಾಗಿತ್ತು. ದೇವಳದಲ್ಲಿ ದೇವರ ದರ್ಶನ ಹಾಗೂ ಅನ್ನ ಪ್ರಸಾದ ಸ್ವಿಕರಿಸಲು ವ್ಯವಸ್ಥೆ ಕಲ್ಪಿಸಲಾಗಿದ್ದು. ಕಟೀಲು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದ ಮತ್ತಿತರ ಸ್ವಯಂ ಸೇವಕರು ಪಾಲ್ಗೊಂಡರು, ಶೇಷವಸ್ತ್ರ ವಿತರಣೆಯಲ್ಲಿ ದೇವಳದ ಮುಕ್ತೇಸರರು, ಅರ್ಚಕರು, ಮತ್ತು ಸಿಬಂಧಿ ವರ್ಗದವರು ಪಾಲ್ಗೊಂಡರು.

Kateel-17101801 Kateel-17101802 Kateel-17101803

Comments

comments

Comments are closed.

Read previous post:
Kinnigoli-10141803
ಪಕ್ಷಿಕೆರೆ ರಕ್ತದಾನ ಶಿಬಿರ

ಕಿನ್ನಿಗೋಳಿ : ರಕ್ತದಾನದಿಂದ ಮತ್ತೊಬ್ಬರಿಗೆ ಜೀವದಾನ ಮಾಡಲು ಸಹಕಾರಿಯಾಗುವಂತಹ ಸೇವಕಾರ್ಯಗಳನ್ನು ಸಂಘ ಸಂಸ್ಥೆಗಳು ಹಮ್ಮಿಕೊಳ್ಳಬೇಕು ಎಂದು ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಧನಂಜಯ ಶೆಟ್ಟಿಗಾರ್ ಹೇಳಿದರು....

Close