ಪಾವಂಜೆ : ಪ್ರಕೃತಿ ಮತ್ತು ಸಂಸ್ಕೃತಿ

ಪಾವಂಜೆ : ತುಳುನಾಡಿನ ಸಂಸ್ಕ್ರತಿ ಹಾಗೂ ಆಚರಣೆಗಳು ಜಗತ್ತಿಗೆ ಮಾದರಿಯಾಗಿದೆ. ಸಂತ್ರಪ್ತ ಬದುಕು ಕೃಷಿ ಬದುಕಾಗಿದೆ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಜವಬ್ದಾರಿ ನಮ್ಮದಾಗಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಪಾವಂಜೆ ನಿನಾದ ರಂಗ ಮಂದಿರದ ವಠಾರದ ನಂದಿನಿ ನದಿ ತಟದಲ್ಲಿ ರಾಮಪ್ಪ ಪೂಜಾರಿ ಕಟ್ಟಪುಣಿಯ ಪಾವಂಜೆಯ ಅಗೋಳಿ ಮಂಜಣ ಜಾನಪದ ಕೇಂದ್ರ, ಹಳೆಯಂಗಡಿ ಲಯನ್ಸ್ ಕ್ಲಬ್, ಸುರತ್ಕಲ್ ಗೋವಿಂದದಾಸ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಪ್ರಕೃತಿ ಮತ್ತು ಸಂಸ್ಕೃತಿ ಎಂಬ ಅಧ್ಯಯನ ಶಿಬಿರದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳ ಸಹಿತ ಹಿರಿಯ-ಕಿರಿಯರು, ಕೃಷಿ ಬದುಕನ್ನು ಅನಾವರಣಗೊಳಿಸಿ, ನದಿ ಪರಂಪರೆಯನ್ನು ಅನುಭವಿಸಿದರು.
ಮಂಗಳೂರಿನ ಯುವವಾಹಿನಿ ಕೇಂದ್ರ ಅಧ್ಯಕ್ಷ ಜಯಂತ್ ನಡುಬೈಲ್ ಅಧ್ಯಕ್ಷತೆ ವಹಿಸಿದ್ದರು.
ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಅಡ್ವೆ ಪುರುಷೋತ್ತಮ ವಿದ್ಯಾರ್ಥಿಗಳಿಗಾಗಿ ಪ್ರಕೃತಿ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿದರು.
ಕೃಷಿ ಮತ್ತು ಪರಿಸರ ಚಿಂತಕ ಡಾ| ನರೇಂದ್ರ ರೈ ದೇರ್ಲ ದಿಕ್ಸೂಚಿ ಭಾಷಣದಲ್ಲಿ, ಪ್ರಕೃತಿಯಲ್ಲಿ ದೈವತ್ವ ಕಂಡುಕೊಂಡ ತುಳುನಾಡಿನ ಜನರು ಜೀವನದಲ್ಲಿ ಶಿಸ್ತು, ನಿಷ್ಠೆ, ಪ್ರಾಮಾಣಿಕತೆ ಅಳವಡಿಸಿಕೊಂಡಿದ್ದಾರೆ ಎಂದರು.
ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಮೆಲ್ವಿನ್ ಮೆಂಡೋನ್ಸಾ ಎಸ್. ಜೆ, ಅವರು ತೆನೆಯನ್ನು ಕೃಷಿಕ ತಿಮ್ಮಪ್ಪ ಅಮೀನ್ ಅವರಿಂದ ಜೋಡಿ ದೋಣಿಯಲ್ಲಿ ತಂದಿರುವುದನ್ನು ತೆಂಗಿನಮರಕ್ಕೆ ಕಟ್ಟಲಾಯಿತು.
ಸದಾಶಿವ ಕರ್ಕೇರ ಅವರಿಂದ ವಿದ್ಯಾರ್ಥಿಗಳಿಗಾಗಿ ಜಲವೇದಿಕೆಯನ್ನು ನಿರ್ಮಿಸಲಾಗಿತ್ತು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಚಂದ್ರಶೇಖರ ನಾನಿಲ್ ಹೊಳೆಗೆ ಗಾಳ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಾಜಿ ಶಾಸಕ ಕಾಪ್ಟನ್ ಗಣೇಶ್ ಕಾರ್ನಿಕ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಕಡಂಬೋಡಿ ಮಹಾಬಲ ಪೂಜಾರಿ, ರಾಜಾರಾಮ್ ಸಾಲ್ಯಾನ್, ಮಾಜಿ ಮೇಯರ್ ರಜನಿ ದುಗ್ಗಣ್ಣ, ರಾಮಚಂದ್ರ ಬೈಕಂಪಾಡಿ, ಶೈಲೇಶ್ ಸುವರ್ಣ, ಕುಸುಮಾ ಕಡಂಬೋಡಿ, ಜಯಂತಿ ಸಂಕಮಾರ್, ಅನು, ಭವ, ವಿಜಯಕುಮಾರ್ ಕುಬೆವೂರು, ಭಾಸ್ಕರ ಸಾಲ್ಯಾನ್, ಜಯಂತಿ ಸಂಕಮಾರ್, ಕಲ್ಲೂರು ನಾಗೇಶ್, ಕೆ.ಕೆ.ಪೇಜಾವರ್, ಗೋವಿಂದದಾಸ ಕಾಲೇಜು ವೈಸ್ ಪ್ರಿನ್ಸಿಪಾಲ್ ಸುನೀತಾ, ಎನ್‌ಎಸ್‌ಎಸ್‌ನ ಯೋಜನಾಧಿಕಾರಿ ವೆಂಕಟರಮಣ ಭಟ್, ಹಳೆಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಯಶೋಧರ ಸಾಲ್ಯಾನ್, ಕಾರ್ಯಕ್ರಮ ಸಂಯೋಜಕ ಡಾ| ಗಣೇಶ್ ಅಮೀನ್ ಸಂಕಮಾರ್ ಉಪಸ್ಥಿತರಿದ್ದರು.

Paavanje-10151801 Paavanje-10151802 Paavanje-10151803

 

Comments

comments

Comments are closed.

Read previous post:
Kinnigoli--10151817
ಉಳೆಪಾಡಿ ಚಂಡಿಕಾ ಯಾಗ

ಕಿನ್ನಿಗೋಳಿ : ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಳದಲ್ಲಿ ನವರಾತ್ರಿಯ ಅಂಗವಾಗಿ ಚಂಡಿಕಾಯಾಗ ನಡೆಯಿತು.  

Close