ವಿಜಯಾ ಕಾಲೇಜು : ವಾಲಿಬಾಲ್ ಪಂದ್ಯಾಟ

ಮೂಲ್ಕಿ : ದ.ಕ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಮೂಲ್ಕಿ ವಿಜಯಾ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟದ ಪ್ರಥಮ ಪ್ರಶಸ್ತಿಯನ್ನು ಮಂಗಳೂರು ಗ್ರಾಮಾಂತರ (ಆಳ್ವಾಸ್ ತಂಡ) ಗಳಿಸಿದೆ.
ಸಮಾರೋಪ ಸಮಾರಂಭ: ಮುಖ್ಯ ಅತಿಥಿಯಾಗಿದ್ದ ಮೂಲ್ಕಿ ಠಾಣಾ ಪೋಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭ ಮಾತನಾಡಿ, ಸೋಲು ಗೆಲುವು ಸಾಮಾನ್ಯ, ಸೋಲನ್ನು ಸವಾಲಾಗಿ ಸ್ವೀಕರಿಸಿ ತಪ್ಪನ್ನು ವಿಶ್ಲೇಶಿಸಿ ಗೆಲುವಿನತ್ತ ಚಿತ್ತವಿರಿಸಿದರೆ ಉನ್ನತಿ ಸಾಧ್ಯ. ಗೆದ್ದವರು ತಮ್ಮ ಪ್ರಶಸ್ತಿಯ ಬಗ್ಗೆ ಹಿಗ್ಗದೆ ಉಳಿವಿಗೆಗಾಗಿ ನಿರಂತರ ಸಾಧನೆ ಮಾಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪಮೀದಾ ಬೇಗಂ ವಹಿಸಿದ್ದರು. ಪದವಿ ಕಾಲೇಜು ಪ್ರಾಂಶುಪಾಲ ಡಾ. ಕೆ.ನಾರಾಯಣ ಪೂಜಾರಿ, ಯುವ ಉದ್ಯಮಿ ಯೋಗೀಶ್ ಕೋಟ್ಯಾನ್, ಕಾಲೇಜು ದೈಹಿಕ ಶಿಕ್ಷಕ ನಿರ್ದೇಶಕರಾದ ಕೆ.ಎಲ್.ಸಿದ್ದರಾಮಣ್ಣ ಮತ್ತು ನವೀನ್ ಎಸ್, ವಿದ್ಯಾರ್ಥಿ ನಾಯಕ ತಿವಿಕ್ರಮ ಭಾಗವತ್,ಕ್ರೀಡಾ ಕಾರ್ಯದರ್ಶಿ ರಕ್ಷಿತ್ ಉಪಸ್ಥಿತರಿದ್ದರು.
ಕೆ.ಎಲ್.ಸಿದ್ದರಾಮಣ್ಣ ಸ್ವಾಗತಿಸಿದರು. ದೈಹಿಕ ಶಿಕ್ಷಕ ಹರಿಶ್ಚಂದ್ರ ಸಿರೂಪಿಸಿದರು. ನವೀನ್ ಪೂಜಾರಿ ವಂದಿಸಿದರು.
ಫಲಿತಾಂಶ: ವಾಲಿಬಾಲ್ ಪ್ರಥಮ ಪ್ರಶಸ್ತಿ (ಬಾಲಕರು) ಮಂಗಳೂರು ಗ್ರಾಮಾಂತರ(ಆಳ್ವಾಸ್) ದ್ವಿತೀಯ: ಮಂಗಳೂರು ನಗರ(ಸೈಂಟ್ ಅಲೋಶಿಯಸ್)ಉತ್ತಮ ಹೊಡೆತಗಾರ: ಯೋಗೀಶ್ (ಆಳ್ವಾಸ್), ಉತ್ತಮ ಪಾಸರ್:ಲೋಕೇಶ್(ಆಳ್ವಾಸ್),ಆಲ್ ರೌಂಡರ್: ಧಿರೀನ್ (ಸೈಂಟ್ ಅಲೋಶಿಯಸ್).
ವಾಲಿಬಾಲ್ ಪ್ರಥಮ ಪ್ರಶಸ್ತಿ (ಬಾಲಕಿಯರು) ಮಂಗಳೂರು ಗ್ರಾಮಾಂತರ(ಆಳ್ವಾಸ್) ದ್ವಿತೀಯ: ಬೆಳ್ತಂಗಡಿ ತಾಲೂಕು(ಎಸ್‌ಡಿಎಂ ಉಜಿರೆ) ಬೆಸ್ಟ್ ಪಾಸರ್:ಆರತಿ(ಆಳ್ವಾಸ್), ಉತ್ತಮ ಹೊಡೆತ: ತೇಜಸ್ವಿ(ಆಳ್ವಾಸ್), ಆಲ್ ರೌಂಡರ್: ಚಿತ್ರಾ (ಎಸ್‌ಡಿಎಂ ಉಜಿರೆ).
Mulki-10171802

Comments

comments

Comments are closed.

Read previous post:
Mulki-10171801
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ನವರಾತ್ರಿ ಮಹೋತ್ಸವ

ಮೂಲ್ಕಿ: ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆಯುವ ನವರಾತ್ರಿ ಮಹೋತ್ಸವದ ದಾರ್ಮಿಕ ಕಾರ್ಯಕ್ರಮವನ್ನು ಭಾರತೀಯ ಜೀವ ವಿಮಾ ನಿಗಮದ ಮೂಲ್ಕಿ ಶಾಖೆಯ ಹಿರಿಯ ಶಾಖಾಧಿಕಾರಿ ಚಂದ್ರ ಚಾಲನೆ...

Close