ಶಿಕ್ಷಣದಿಂದ ಸಕಾರಾತ್ಮಕ ಚಿಂತನೆ ಸಾಧ್ಯ

ಕಿನ್ನಿಗೋಳಿ : ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುತ್ತಿರುವುದಲ್ಲದೆ ಪ್ರತಿಯೊಬ್ಬ ವ್ಯಕ್ತಿಗೂ ಬೇಕಾದ ಜೀವನ ಕೌಶಲ್ಯ ಹಾಗೂ ಸಾಹಸ ಪ್ರವೃತ್ತಿಯನ್ನು ಪ್ರೇರೇಪಿಸುತ್ತಿರುವುದರಿಂದ ಚಿಕ್ಕ ವಯಸ್ಸಿನಿಂದಲೇ ಉತ್ತಮ ಮಾನವೀಯ ಮೌಲ್ಯ ಬೆಳೆಸಿಕೊಂಡು ಶ್ರೇಷ್ಠ ನಾಗರಿಕ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಕಿರೆಂ ಚರ್ಚ್ ಧರ್ಮಗುರು ರೆ.ಪಾ. ವಿಕ್ಟರ್ ಡಿಮೆಲ್ಲೋ ಹೇಳಿದರು.
ಮಂಗಳೂರು ಮೌಂಟ್ ಕಾರ್ಮೆಲ್ ಸಿಬಿಎಸ್‌ಸಿ ಹೈಸ್ಕೂಲು ಹಾಗೂ ಮಂಗಳೂರು ಲೇಡಿಹಿಲ್ ವಿಕ್ಟೋರಿಯಾ ಹೈಸ್ಕೂಲು ಇದರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಕಿನ್ನಿಗೋಳಿ ಸಮೀಪದ ಗುತ್ತಕಾಡು ಪೊಯಿಮಣ್ಣು ಲಾರೆನ್ಸ್ ಡಿಸೋಜ ಅವರ ಮನೆಯಲ್ಲಿ ನಡೆದ ಶಿಬಿರದಲ್ಲಿ ಮಾತನಾಡಿದರು.
ಹಣ್ಣಿನ ಬೆಳೆ, ಆರೋಗ್ಯಪೂರ್ಣ ಸಾವಯವ ಕೃಷಿಗೆ ಒತ್ತುಕೊಡಬೇಕು. ಪಠ್ಯದ ಜೊತೆಗೆ ಪಠ್ಯೇತರವಾಗಿ ಪರಿಸರ ಸಂರಕ್ಷಣೆಯ ಒಲವು ತೋರಬೇಕು ಸ್ವಚ್ಚ ಪರಿಸರ ಸ್ವಚ್ಚ ಆರೋಗ್ಯ ವಿದ್ಯಾರ್ಥಿ ದೆಸೆಯಿಂದಲೇ ಬದುಕನ್ನು ಧೈರ್ಯವಾಗಿ ಎದುರಿಸಬೇಕು ಎಂದು ಪ್ರಗತಿಪರ ಕೃಷಿಕ ಎಡ್ವರ್ಡ್ ರೆಬೆಲ್ಲೊ ಕೃಷಿ ಬಗ್ಗೆ ಉಪನ್ಯಾಸ ಪ್ರಾತ್ಯಕ್ಷಿತೆ ನೀಡಿ ಮಾತನಾಡಿದರು.
ಮೂರು ದಿನಗಳ ಕಾಲ ನಡೆದ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವ, ಸ್ವಚ್ಚತಾ ಅಭಿಯಾನ, ಯೋಗ, ಶ್ರಮದಾನ, ಹಳ್ಳಿ ಜೀವನ, ಕೃಷಿಪಾಠ ಹಾಗೂ ಸಾಹಸದ ಬಗ್ಗೆ ತಿಳಿ ಹೇಳಲಾಯಿತು.
ಈ ಸಂದರ್ಭ ಕಿರೆಂ ಚರ್ಚ್ ರೋಸಾ ವಾಳೆಯ ಗುರಿಕಾರ ವಿನ್ನಿಡಿಸೋಜ, ಲಾರೆನ್ಸ್ ಡಿಸೋಜ, ಸ್ಕೌಟ್ಸ್ ಮತ್ತು ಗೈಡ್ಸ್ ಕ್ಯಾಪ್ಟನ್ ವಿಲ್ಮಾ ಡಿಸೋಜ, ಅನಿತ ಮರಿಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-10171804

Comments

comments

Comments are closed.

Read previous post:
Kinnigoli-10171803
ಗುತ್ತಕಾಡು : ಚಂಡಿಕಾ ಯಾಗ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಗುತ್ತಕಾಡು ಶಾಂತಿನಗರ ಶ್ರೀ ಮೂಕಾಂಬಿಕಾ ದೇವಳದಲ್ಲಿ ೩೭ ನೇ ವರ್ಷದ ನವರಾತ್ರಿ ಮಹೋತ್ಸವದ ಅಂಗವಾಗಿ ಚಂಡಿಕಾ ಯಾಗ ನಡೆಯಿತು.

Close