ಮೂಲ್ಕಿ ಶಾರದಾ ಮಹೋತ್ಸವ

ಮೂಲ್ಕಿ: ಜಾತಿ ಪಂಥಗಳನ್ನು ಬದಿಗಿಟ್ಟು ಒಗ್ಗಾಟದಾಗ ಹಿಂದೂ ಸಮಾಜ ಬಲಿಷ್ಠವಾಗುತ್ತದೆ.ಸಾರ್ವಜನಿಕ ಶಾರದಾ ಮಹೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಒಗ್ಗಟಾಗಲು ಪ್ರಯತ್ನಿಸಬೇಕೆಂದು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ ಹೇಳಿದರು. ಮೂಲ್ಕಿಯ ಹಿಂದೂ ಯುವ ಸೇನೆ ಘಟಕದ ಆಶ್ರಯದಲ್ಲಿ ಮೂಲ್ಕಿಯ ಪುನರೂರು ಕಾಂಪ್ಲೆಕ್ಸ್ ಬಳಿಯ ಶಿವಾಜಿ ಮಂಟಪದಲ್ಲಿ ನಡೆಯುತ್ತಿರುವ ೨೦ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಅಂಗವಾಗಿ ಆದಿತ್ಯವಾರದಂದು ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಅಧ್ಯಕ್ಷತೆಯನ್ನು ಮೂಲ್ಕಿಯ ಹಿಂದೂ ಯುವ ಸೇನೆ ಘಟಕದ ಅಧ್ಯಕ್ಷ ಸತೀಶ್ ಗೇರುಕಟ್ಟೆ ವಹಿಸಿದ್ದು ಜಯ ಕರ್ನಾಟಕ ಸಂಸ್ತೆಯ ಮೂಲ್ಕಿ ಘಟಕದ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಸಂಸ್ತೆಯ ಪದಾಽಕಾರಿಗಳು ಉಪಸ್ತಿತರಿದ್ದರು.ಬಳಿಕ ಉಡುಪಿಯ ಅಭಿನಯ ಕಲಾವಿದರು ತಂಡದಿಂದ *ಬರಂದೆ ಕುಲ್ಲಯೆ*ತುಳು ನಾಟಕ ಪ್ರದರ್ಶನ ನೆರವೇರಿತು.

Mulki-10171803

Comments

comments

Comments are closed.

Read previous post:
Mulki-10171802
ವಿಜಯಾ ಕಾಲೇಜು : ವಾಲಿಬಾಲ್ ಪಂದ್ಯಾಟ

ಮೂಲ್ಕಿ : ದ.ಕ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಮೂಲ್ಕಿ ವಿಜಯಾ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟದ ಪ್ರಥಮ ಪ್ರಶಸ್ತಿಯನ್ನು...

Close