ಶರತ್ ಶೆಟ್ಟಿ ಸನ್ಮಾನ

ಕಿನ್ನಿಗೋಳಿ : ಜಿಲ್ಲೆಯ ಪತ್ರಕತ್ರಮಿತ್ರರ ಮತ್ತು ಮೂಲ್ಕಿ ಪತ್ರಕರ್ತರ ಸಮೂಹದಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಶರತ್ ಶೆಟ್ಟಿ ಕಿನ್ನಿಗೋಳಿ ಹೇಳಿದರು ಅವರು ಮೂಲ್ಕಿಯ ಅಧಿದನ್ ಸಭಾ ಭವನದಲ್ಲಿ ಮೂಲ್ಕಿ ವಲಯ ಪತ್ರಕರ್ತರ ಸಮೂಹದ ವತಿಯಿಂದ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿ ಗ್ರಾಮೀಣ ಪತ್ರಕರ್ತರೇ ತುಂಬಿರುವ ಮೂಲ್ಕಿ ಪತ್ರಕರ್ತರ ಸಂಘ ಹಿಂದಿನಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ, ಜಿಲ್ಲಾ ಪತ್ರಕತ್ರರ ಸಂಘದ ಸದಸ್ಯರಾಗಿದ್ದವರಿಗೆ ಆರೋಗ್ಯ ವಿಮೆ ಪ್ರಾರಂಭಿಸಲಾಗಿದೆ ಅದರ ಸದುಪಯೋಗವನ್ನು ಪಡೆಯಿರಿ, ಪತ್ರಕತ್ರರಿಗೆ ಯಾವುದೇ ಭದ್ರತೆ ಇಲ್ಲ ಮತ್ತು ಪತ್ರಕರ್ತರ ವಿವಿಧ ಸಮಸ್ಯೆಗಳ ನಿವಾರಣೆ ಬಗ್ಗೆ ಆಕ್ಟೋಬರ್ ೧೪ ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳೂರಿಗೆ ಭೇಟಿ ನೀಡುವ ಸಂದರ್ಭ ಮನವಿ ಸಲ್ಲಿಸಲಾಗುದು ಎಂದರು. ಕಾರ್ಯಕ್ರಮದಲ್ಲಿ ನೂತನವಾಗಿ ಪ್ರಾರಂಭಗೊಂಡ ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ಜತೆ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಹರಿಪ್ರಸಾದ್ ನಂದಳಿಕೆಯವರನ್ನು ಗೌರವಿಸಲಾಯಿತು. ಈ ಸಂದರ್ಭ ಮೂಲ್ಕಿ ವಲಯ ಪತ್ರಕರ್ತರ ಸಮೂಹದ ಅಧ್ಯಕ್ಷ ಮಿಥುನ್ ಕೊಡೆತ್ತೂರು, ನಿಶಾಂತ್ ಶೆಟ್ಟಿ ಕಿಲೆಂಜೂರು, ಸರ್ವೋತಮ್ ಅಂಚನ್, ಲೋಕೇಶ್ ಸುರತ್ಕಲ್, ಹರೀಶ್ ಹೆಜ್ಮಾಡಿ, ಬಾಗ್ಯವನ್ ಸನೀಲ್, ಬಾಲಕೃಷ್ಣ ಪೂಜಾರಿ ಉಚ್ಚಿಲ, ರಘನಾಥ ಕಾಮತ್ ಕೆಂಚನಕೆರೆ, ಯಶವಂತ್ ಐಕಳ, ಪ್ರಕಾಶ್ ಮೂಲ್ಕಿ, ಸಂತೋಷ್ ಕಾಪು, ಪುನೀತ್ ಕೃಷ್ಣ, ರೋಶನ್ ಕಿರೆಂ. ಚರಣ್ ಸೂಡ ಮತ್ತಿತರರು ಇದ್ದರು.

Kinnigoli-10171801

Comments

comments

Comments are closed.

Read previous post:
Paavanje-10151801
ಪಾವಂಜೆ : ಪ್ರಕೃತಿ ಮತ್ತು ಸಂಸ್ಕೃತಿ

ಪಾವಂಜೆ : ತುಳುನಾಡಿನ ಸಂಸ್ಕ್ರತಿ ಹಾಗೂ ಆಚರಣೆಗಳು ಜಗತ್ತಿಗೆ ಮಾದರಿಯಾಗಿದೆ. ಸಂತ್ರಪ್ತ ಬದುಕು ಕೃಷಿ ಬದುಕಾಗಿದೆ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಜವಬ್ದಾರಿ ನಮ್ಮದಾಗಿದೆ ಎಂದು...

Close