ಉಳೆಪಾಡಿ ಶರನ್ನವರಾತ್ರಿ

ಕಿನ್ನಿಗೋಳಿ : ಧಾರ್ಮಿಕ ಕೇಂದ್ರಗಳು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಉಳೆಪಾಡಿ ದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಳದಲ್ಲಿ ನಡೆದ ಶರನ್ನವರಾತ್ರಿ ಪ್ರಯುಕ್ತ ನಡೆದ ಧರ್ಮಸಮನ್ವಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುರತ್ಕಲ್ ಶಾಸಕ ಡಾ. ವೈ. ಭರತ್ ಶೆಟ್ಟಿ ಮಾತನಾಡಿ ಇಲ್ಲಿನ ದೇವಳ ಸಾಮೂಹಿಕ ಉಚಿತ ಮದುವೆ, ಆರೋಗ್ಯ ಶಿಬಿರಗಳಂತಹ ಸಮಾಜಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭ ಮುಂಬಯಿ ಉದ್ಯಮಿ ಅಮೇರಿಕಾದ ಅಕ್ಕ ಪುರಸ್ಕಾರ ವಿಜೇತ ವಿರಾರ್ ಶಂಕರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಮೂಲ್ಕಿ ಸೀಮೇ ಅರಸರಾದ ದುಗ್ಗಣ್ಣ ಸಾವಂತ ಅರಸರು,ನ್ಯಾಯವಾದಿ ಕೆ. ಶಂಭು ಶರ್ಮ, ಕೆ. ಬಿ. ಬಲರಾಜ ರೈ ಕೊಡಿಯಾಲ್‌ಗುತ್ತು, ಮಂಗಳೂರು ಯುವಜನ ಸೇವಾ ಸಂಘದ ಅಧ್ಯಕ್ಷ ತುಕಾರಾಂ ಬಂಗೇರ, ಮಾಜಿ ಕಸಾಪ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಚೇತಾನ ಮೋಹನದಾಸ ಸುರತ್ಕಲ್, ಶ್ರೀಶ, ದಿವ್ಯ, ನಾರಾಯಣ ಶೆಟ್ಟಿ ಉಳೆಪಾಡಿ, ಕೃಷ್ಣ ಶೆಟ್ಟಿ, ಮಂಗಳೂರುರು ತಾಲೂಕು ಪಂಚಾಯಿತಿ ಸದಸ್ಯರಾದ ದಿವಾಕರ ಕರ್ಕೇರಾ, ರಶ್ಮಿ ಆಚಾರ್ಯ ಅಶ್ವಥ್ ಶಾಂತಿಪಲ್ಕೆ ಮತ್ತಿತರರು ಉಪಸ್ಥಿತರಿದ್ದರು.
ಉಳೆಪಾಡಿ ದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಳದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಸ್ವಾಗತಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಶರನ್ನವರಾತ್ರಿ ಆರಾಧನೆ ಪ್ರಯುಕ್ತ ಸಾಮೂಹಿಕ ಚಂಡಿಕಾ ಯಾಗ ನಡೆಯಿತು
Kinnigoli-10221802

Comments

comments

Comments are closed.

Read previous post:
Kinnigoli-10221801
ಯುಗಪುರುಷ 72ನೇ ದಸರಾ-ದೀಪಾವಳಿ ವಿಶೇಷಾಂಕ ಬಿಡುಗಡೆ

 ಕಿನ್ನಿಗೋಳಿ : ಯುಗಪುರುಷ ಮಾಸಪತ್ರಿಕೆಯ 72ನೇ ದಸರಾ-ದೀಪಾವಳಿ ವಿಶೇಷಾಂಕವನ್ನು ವಿಜಯದಶಮಿಯ ಸಂದರ್ಭ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವೀ ಸನ್ನಿಧಿಯಲ್ಲಿ ದೇವಳದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಬಿಡುಗಡೆಗೊಳಿಸಿದರು.ಈ...

Close