ಅಂಬಾ ಪ್ರಶಸ್ತಿ 2018 ಪ್ರಧಾನ

ಕಿನ್ನಿಗೋಳಿ : ಸಮಾಜ ಸೇವಕರು ಹಾಗೂ ಕ್ರೀಡಾ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಸಾಹಿತಿ ಕೆ. ಗಣೇಶ್ ಮಲ್ಯ ಹೇಳಿದರು.
ಕಿನ್ನಿಗೋಳಿ ಶ್ರೀ ರಾಮಮಂದಿರಲ್ಲಿ ಅಂಬಾ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯಲ್ಲಿ ನಡೆದ ಅಂಬಾ ಪ್ರಶಸ್ತಿ – ೨೦೧೮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು. ಕಿನ್ನಿಗೋಳಿ ಜಿ. ಎಸ್. ಬಿ ಎಸೋಸಿಯೇಶನ್ ಅಧ್ಯಕ್ಷ ಕೆ. ಅಚ್ಚುತ ಮಲ್ಯ ಅಧ್ಯಕ್ಷತೆ ವಹಿ ಮಾತನಾಡಿ ಪ್ರತಿಷ್ಠಾನದ ಮೂಲಕ ಸಮಾಜದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳು ನಡೆಯಬೇಕು ಇತರ ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಿಯಾಗಬೇಕು ಎಂದು ಹೇಳಿದರು.
ಈ ಸಂದರ್ಭ ಅಂತರಾಷ್ಟ್ರೀಯ ಪವರ್ ಲಿಪ್ಟರ್ ಕ್ರೀಡಾ ಪಟು ಮಂಜುನಾಥ ಮಲ್ಯ ಅವರಿಗೆ ಅಂಬಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅಂಬಾ ಪ್ರತಿಷ್ಠಾನದ ಅಧ್ಯಕ್ಷ ಕೆ. ಪುಂಡಲೀಕ ಮಲ್ಯ ಅವರನ್ನು ಗೌರವಿಸಲಾಯಿತು.
ಹಿರಿಯ ಸಾಹಿತಿ ಉಮೇಶ್ ರಾವ್ ಎಕ್ಕಾರು, ಸಮಾಜ ಸೇವಕ ಸದಾನಂದ ಮಲ್ಯ, ಮಂಗಳೂರು ಅರಿವಳಿಕೆ ತಜ್ಞ ಡಾ. ಪ್ರಶಾಂತ ಮಲ್ಯ, ಜಿ. ಎಸ್. ಬಿ. ಮಹಿಳಾ ಮಂಡಳಿಯ ಅಧ್ಯಕ್ಷೆ ಭಾರತೀ ಶೆಣೈ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಕೆ. ಪಿ ಮಲ್ಯ ಪ್ರಸ್ತಾವನೆಗೈದು ಸ್ವಾಗತಿಸಿದರು. ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.
Kinnigoli-10221823

Comments

comments

Comments are closed.

Read previous post:
Kinnigoli-10221822
ರಾ. ಸೇ. ಯೋ. ಬದುಕುವ ವಿದ್ಯೆ ಕಲಿಸುತ್ತದೆ

ಕಿನ್ನಿಗೋಳಿ : ರಾಷ್ಟ್ರೀಯ ಸೇವಾ ಯೋಜನೆಯು ಶಿಬಿರಗಳು ಬದುಕುವ ವಿದ್ಯೆಯನ್ನು ಕಲಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಶಿಬಿರಗಳನ್ನು ನಡೆಸಿದರೆ ಗ್ರಾಮೀಣ ಪ್ರದೇಶದ ಜನರ ಬದುಕು ಅವರ ಸಮಸ್ಯೆಗಳು ತಿಳಿಯಬಹುದು ಎಂದು...

Close