ರಾ. ಸೇ. ಯೋ. ಬದುಕುವ ವಿದ್ಯೆ ಕಲಿಸುತ್ತದೆ

ಕಿನ್ನಿಗೋಳಿ : ರಾಷ್ಟ್ರೀಯ ಸೇವಾ ಯೋಜನೆಯು ಶಿಬಿರಗಳು ಬದುಕುವ ವಿದ್ಯೆಯನ್ನು ಕಲಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಶಿಬಿರಗಳನ್ನು ನಡೆಸಿದರೆ ಗ್ರಾಮೀಣ ಪ್ರದೇಶದ ಜನರ ಬದುಕು ಅವರ ಸಮಸ್ಯೆಗಳು ತಿಳಿಯಬಹುದು ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು
ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು, ಸುರತ್ಕಲ್ ಗೋವಿಂದದಾಸ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ನಡುಗೋಡು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಸುರತ್ಕಲ್ ಹಿಂದೂ ವಿದ್ಯಾದ್ಯಾಯನಿ ಸಂಘದ ಅಧ್ಯಕ್ಷ ಜನಾರ್ಧನ ಇ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಕಟೀಲು ಗ್ರಾಮಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ನಡುಗೋಡು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ತುಕಾರಾಮ ಸುವರ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಬಾಲಚಂದ್ರ ಭಟ್ ನಡುಗೋಡು, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಪುರುಶೋತ್ತಮ ಶೆಟ್ಟಿ ಕೊಡೆತ್ತೂರು, ಉದ್ಯಮಿ ಬಿ.ಆರ್. ಹರಿಚಂದ್ರ ಆಚಾರ್ಯ, ಗೋವಿಂದದಾಸ ಕಾಲೇಜು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಯಾದವ ದೇವಾಡಿಗ, ನಡುಗೋಡು ಶಾಲಾ ಮುಖ್ಯ ಶಿಕ್ಷಕಿ ಲಕ್ಷೀ ಶೆಟ್ಟಿ, ಯೋಜನೆಯ ಕಾರ್ಯಕ್ರಮಾಧಿಕಾರಿ ಪೈಕ ವೆಂಕಟರಮಣ, ಗೋವಿಂದದಾಸ ಕಾಲೇಜು ಪ್ರಿನ್ಸಿಪಾಲ್ ಲಕ್ಷೀ ಪಿ, ಘಟಕದ ನಾಯಕ ವರುಣ್ ಆಚಾರ್ಯ, ಘಟಕದ ನಾಯಕಿ ಸ್ವಾತಿ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-10221822

 

Comments

comments

Comments are closed.

Read previous post:
Haleyangadi-10221802
ಸ್ವಚ್ಚ ಪಡುಪಣಂಬೂರು

  ಕಿನ್ನಿಗೋಳಿ : ಧಾರ್ಮಿಕ ಕ್ಷೇತ್ರವು ಭಕ್ತರಿಗೆ ಶಾಂತಿಯನ್ನು ನೀಡುವ ತಾಣವಾಗಿರುವುದರಿಂದ ಸ್ವಚ್ಚತೆಗೆ ವಿಶೇಷ ಆದ್ಯತೆ ನೀಡುವುದರೊಂದಿಗೆ ಭಕ್ತರ ಮೂಲಕ ಪರಿಸರವನ್ನು ಜಾಗೃತಿ ಮೂಡಿಸುವ ಕೆಲಸವು ಇದರೊಂದಿಗೆ ನಡೆಯಬೇಕು...

Close