ಸ್ವಚ್ಚ ಪಡುಪಣಂಬೂರು

 

ಕಿನ್ನಿಗೋಳಿ : ಧಾರ್ಮಿಕ ಕ್ಷೇತ್ರವು ಭಕ್ತರಿಗೆ ಶಾಂತಿಯನ್ನು ನೀಡುವ ತಾಣವಾಗಿರುವುದರಿಂದ ಸ್ವಚ್ಚತೆಗೆ ವಿಶೇಷ ಆದ್ಯತೆ ನೀಡುವುದರೊಂದಿಗೆ ಭಕ್ತರ ಮೂಲಕ ಪರಿಸರವನ್ನು ಜಾಗೃತಿ ಮೂಡಿಸುವ ಕೆಲಸವು ಇದರೊಂದಿಗೆ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿಯ ಸಂಯೋಜನೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮೂಡು ತೋಟದ ಬಳಿಯ ಕೋರ್ದಬ್ಬು ದೈವಸ್ಥಾನದ ವಠಾರದಲ್ಲಿ ಭಾನುವಾರ ನಡೆದ ಸ್ವಚ್ಚ ಪಡುಪಣಂಬೂರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಡುಪಣಂಬೂರು ಪಂಚಾಯಿತಿ ಅಧ್ಯಕ್ಷ ಮೋಹನದಾಸ್, ಸದಸ್ಯರಾದ ಕುಸುಮಾ ಚಂದ್ರಶೇಖರ್, ಹರಿಪ್ರಸಾದ್, ಕಲ್ಲಾಪು ವೀರಭದ್ರ ಮಹಮ್ಮಾಯಿ ವಾಚನಾಲಯದ ಅಧ್ಯಕ್ಷ ಶಂಕರ್ ಶೆಟ್ಟಿಗಾರ್, ಶ್ರೀ ಕೋರ್ದಬ್ಬು ದೈವಸ್ಥಾನದ ಆಡಳಿತ ಮಂಡಳಿ ಹಾಗೂ ಶ್ರೀ ಕೋರ್ದಬ್ಬು ತನ್ನಿಮಾನಿಗ ಮಹಿಳಾ ಸಮಿತಿಯ ಸದಸ್ಯರಾದ ಕುಸುಮಾ, ಜಯಲಕ್ಷ್ಮೀ ಶೆಟ್ಟಿ , ಶೋಭಾ ಶೆಟ್ಟಿ ,ವಾರಿಜ, ರಮ್ಯ , ನಮಿತ , ಶೃತಿ , ಭಾರತಿ , ಕುಶಲ , ಜಲಜ, ವಿಜಯ , ಶಾಂತ ಶೆಟ್ಟಿಗಾರ್ , ಸುಲೋಚನ, ಸೀತು, ಶಾಂಭವಿ , ಶೋಭಾ, ಲಲಿತ, ಆಶಾ ಕಾರ್ಯಕರ್ತೆ ವನಜ, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮೋಹಿನಿ, ಶರಣ್, ರೋಶ್ನಿ, ಶ್ರಾವ್ಯ, ಗ್ರಾಮಸ್ಥರಾದ ಶಿವರಾಮ ಶೆಟ್ಟಿ, ವಿನೇಶ್ ಶೆಟ್ಟಿ, ರಾಜೇಶ್, ಅಶ್ವಥ್ಥ ಶೆಟ್ಟಿ, ಭುಜಂಗ ಶೆಟ್ಟಿ, ಮಾಧವ ಶೆಟ್ಟಿ, ಶಶಿಧರ , ಜನಾರ್ದನ ಪಡುಪಣಂಬೂರು, ದಯಾನಂದ ಶೆಟ್ಟಿಗಾರ್, ಶಂಕರ ಶೆಟ್ಟಿ , ಪ್ರಕಾಶ್ ಆಚಾರ್ಯ, ಶಿವರಾಜ್ ಶೆಟ್ಟಿಗಾರ್, ಅಖಿಲ್ ಗುಜರನ್, ಅಭಿಷೇಕ್ ಗುಜರನ್, ಶೇಖರ ಶೆಟ್ಟಿ, ಮೋಹನ್ ಶೆಟ್ಟಿಗಾರ್, ಶಂಭು ಶೆಟ್ಟಿ, ಪ್ರವೀಣ್ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪಂಚಾಯಿತಿ ಕಾರ್ಯದರ್ಶಿ ಲೋಕನಾಥ ಭಂಡಾರಿ ಸ್ವಾಗತಿಸಿದರು, ಸಿಬ್ಬಂದಿ ದಿನಕರ್ ವಂದಿಸಿದರು.

Haleyangadi-10221802

Comments

comments

Comments are closed.

Read previous post:
Haleyangadi-10221801
ಹಳೆಯಂಗಡಿ ಸ್ವಚ್ಚತಾ ಅಭಿಯಾನ

ಹಳೆಯಂಗಡಿ : ಮಂಗಳೂರು ನೆಹರು ಯುವ ಕೇಂದ್ರ, ಮಂಗಳೂರು ಅಮಲ ಭಾರತ, ಬೋಳಾರ ಅಮೃತಾನಂದಮಯಿ ಮಠದ ಸಹಕಾರದಲ್ಲಿ ಹಳೆಯಂಗಡಿಯ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾವಿನಾಯಕ ರಜತಾ ಸೇವಾ...

Close