ಕಟೀಲು : ಅಷ್ಟಬಂಧ ಪೂರ್ವಭಾವಿ ಸಭೆ

ಕಟೀಲು : ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಷ್ಟಬಂಧ, ಬ್ರಹ್ಮಕಲಶೋತ್ಸವ ನಡೆಸುವ ಸಲುವಾಗಿ ಪ್ರಮುಖರ ಪೂರ್ವಭಾವಿ ಸಭೆ ಕಟೀಲು ದೇಗುಲದಲ್ಲಿ ಭಾನುವಾರ ನಡೆಯಿತು.
ಸಾಂಸದ ನಳಿನ್ ಕುಮಾರ್ ಮಾತನಾಡಿ ಕಟೀಲು ಕ್ಷೇತ್ರದ ಅಭಿವೃದ್ಧಿಗೆ ಮೂರು ಬಾರಿ ಮಾಸ್ಟರ್ ಪ್ಲಾನ್ ಆಗಿದ್ದರೂ, ಮತ್ತೊಮ್ಮೆ ಅಧಿಕಾರಿಗಳ ಸಭೆಯನ್ನು ಶಾಸಕರು ಹಾಗೂ ಕಟೀಲು ದೇಗುಲದ ಆಡಳಿತ ಮಂಡಳಿಯೊಂದಿಗೆ ನಡೆಸಿ ಅಭಿವೃದ್ಧಿ ಕಾರ‍್ಯದಲ್ಲಿ ಪ್ರಯತ್ನಿಸೋಣ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ದೇಗುಲದ ಒಳಗಿನ ಜೀರ್ಣೋದ್ಧಾರದೊಂದಿಗೆ ಹೊರಗಿನ ಅಭಿವೃದ್ಧಿಯೂ ಅಷ್ಟೇ ಮುಖ್ಯವಾಗಿದೆ. ಪಾರ್ಕಿಂಗ್, ಶೌಚಾಲಯ, ವಸತಿಗೃಹ ಮುಂತಾದ ಯಾತ್ರಾರ್ಥಿಗಳಿಗೆ ಮೂಲಭೂತ ಸೌಕರ‍್ಯಗಳನ್ನು ಒದಗಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಅಗತ್ಯವಾಗಿದೆ ಎಂದರು.
ಬರುವ ಜನವರಿಯಲ್ಲಿ ಅಷ್ಟಬಂಧ ನಡೆಸಿ, ಚಿನ್ನದ ಧ್ವಜಸ್ತಂಭ ಮುಂತಾದ ಜೀರ್ಣೋದ್ಧಾರ ಕಾರ‍್ಯಗಳ ಬಳಿಕ 2020ರಲ್ಲಿ ಬ್ರಹ್ಮಕಲಶೋತ್ಸವವನ್ನು ನಡೆಸುವುದೆಂದು ಸಭೆಗೆ ತಿಳಿಸಲಾಯಿತು.
ಮಾಜಿ ಸಚಿವ ಅಮರನಾಥ ಶೆಟ್ಟಿ, ಆನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಸನತ್ ಕುಮಾರ ಶೆಟ್ಟಿ, ಅರ್ಚಕರಾದ ಆಸ್ರಣ್ಣ ಸಹೋದರರು, ತಂತ್ರಿಗಳು, ದೇಗುಲಕ್ಕೆ ಸಂಬಂಧಿಸಿದ ಅತ್ತೂರು ಕೊಡೆತ್ತೂರು ಮಾಗಣೆಯ ಮನೆತಗಳ ಪ್ರಮುಖರು ಉಪಸ್ಥಿತರಿದ್ದರು.
Kateel10241501

Comments

comments

Comments are closed.

Read previous post:
Pakshikere10231802
ಪಕ್ಷಿಕೆರೆ ಉಚಿತ ಸಾಮೂಹಿಕ ವಿವಾಹ 2018

ಕಿನ್ನಿಗೋಳಿ : ಯುವಜನರನ್ನು ಧಾರ್ಮಿಕ ಶಿಸ್ತು ಸಂಸ್ಕಾರ ನೀಡಿ ಬೆಳೆಸುವ ಕರ್ತವ್ಯ ನಮ್ಮದಾಗಬೇಕು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಿ ಅವರಿಗೆ ಜೀವನದ ಯಶಸ್ಸಿನ ದಾರಿ ತೋರಿಸಬೇಕು ಎಂದು...

Close