ಮೂಲ್ಕಿ : ಪ್ರತಿಭಾ ಪ್ರದರ್ಶನ

ಮೂಲ್ಕಿ: ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಸಶಕ್ತರಾದಲ್ಲಿ ಮಾತ್ರ ಸಮಾಜದಲ್ಲಿ ಮುನ್ನಡೆಯಲು ಸಾಧ್ಯ, ಅವರಲ್ಲಿನ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯನ್ನು ಸೃಷ್ಟಿಸಿ ಅವಕಾಶ ನೀಡುತ್ತಿರುವ ಮೂಲ್ಕಿ ಬಿಲ್ಲವ ಸಂಘದ ಕಾರ್ಯ ಮಾದರಿಯಾಗಿದೆ ಎಂದು ಅಖಿಲ ಭಾರತ ಬಿಲ್ಲವ ಮಹಿಳಾ ವಿಭಾಗದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ ಹೇಳಿದರು.
ಅವರು ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಶ್ರೀ ನಾರಾಯಣಗುರು ಮಹಿಳಾ ಮಂಡಳಿಯ ವಿಶೇಷ ಪ್ರತಿಭಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಮೂಲ್ಕಿ ಯುವವಾಹಿನಿಯ ನಿಕಟಪೂರ್ವ ಅಧ್ಯಕ್ಷೆ ರಕ್ಷಿತಾ ವೈ. ಕೋಟ್ಯಾನ್ ಮಾತನಾಡಿ, ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಸಮಾಜ ಸೇವೆ ಪರೋಕ್ಷ ಕಾರಣವಾಗಿದೆ. ವಿದ್ಯಾವಂತೆಯಾದರೂ ಸಮಾಜ ಮುಖಿ ಚಿಂತನೆ ಮಾಡುವ ಸಾಮಾಜಿಕ ಕರ್ತವ್ಯದ ಜ್ಞಾನವು ಬೆಳೆಸಿಕೊಳ್ಳಬೇಕು ಎಂದರು.
ಮೂಲ್ಕಿ ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆಯ ಸಂಚಾಲಕ ಹೆಚ್.ವಿ.ಕೋಟ್ಯಾನ್, ರಂಗ ನಿರ್ದೇಶಕ ಪರಮಾನಂದ ಸಾಲ್ಯಾನ್ ಸಸಿಹಿತ್ಲು, ಶಿಕ್ಷಕಿ ರಶ್ಮಿ ಹರಿಮದನ್ ಕಾರ್ನಾಡು, ಶ್ರೀ ನಾರಾಯಣಗುರು ಮಹಿಳಾ ಮಂಡಳಿಯ ಅಧ್ಯಕ್ಷ ಅಂಬಾವತಿ ಎನ್. ಅಂಚನ್ ಉಪಸ್ಥಿತರಿದ್ದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಹ ಕೋಶಾಧಿಕಾರಿ ವಾಮನ ಕೋಟ್ಯಾನ್ ನಡಿಕುದ್ರ ವಂದಿಸಿದರು, ಪ್ರಧಾನ ಕಾರ್ಯದರ್ಶಿ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂಲ್ಕಿ ಶ್ರೀ ನಾರಾಯಣಗುರು ಮಹಿಳಾ ಮಂಡಳಿಯ ಕಲಾವಿದರಿಂದ ಪರಮಾನಂದ ಸಾಲ್ಯಾನ್ ಸಸಿಹಿತ್ಲು ಅವರು ನಿರ್ದೇಶಿಸಿ “ಬಾಲೆಗು ಒಲಿನ ಭ್ರಾಮರಿ” ಗೀತಾ ನಾಟಕ ಪ್ರದರ್ಶನಗೊಂಡಿತು.

Mulki-10241802

Comments

comments

Comments are closed.

Read previous post:
Mulki-10241801
ಚೆನ್ನೈ ಬಂಟ್ಸ್ ಸಂಘದ ವತಿಯಿಂದ ವಿದ್ಯಾರ್ಥಿ ವೇತನ

ಮೂಲ್ಕಿ: ಮೂಲ್ಕಿಯ ಶಾರದಾ ಇನ್ಫ್ರಾ ಡಿಸೈನ್ ಪ್ರೈ. ಇಂಡಿಯಾ ಲಿಮಿಟೆಡ್‌ನ ಕಾರ್ನಾಡು ಕಛೇರಿಯಲ್ಲಿ ಚೆನ್ನೈ ಬಂಟ್ಸ್ ಸಂಘದ ವತಿಯಿಂದ ಕೊಡಮಾಡಿದ ವಿದ್ಯಾರ್ಥಿ ವೇತನವನ್ನು ಸಂಸ್ಥೆಯ ಆಡಳಿತ ನಿರ್ದೇಶಕ...

Close