ನರೇಗಾ ಯೋಜನೆಯಲ್ಲಿ ನಿರ್ವಹಣೆಯೂ ಪ್ರಾಮುಖ್ಯ

ಕಿನ್ನಿಗೋಳಿ: ಮಹಾತ್ಮಗಾಂ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಜನರ ಸಹಭಾಗಿತ್ವದಲ್ಲಿ ನಡೆದು ಕಿಂಡಿ ಅಣೆಕಟ್ಟು ಕಾಮಗಾರಿಯಂತಹ ಯೋಜನೆಗೆ ನಿರ್ವಹಣೆಯೂ ಅಗತ್ಯವಿದೆ. ಮಂಗಳೂರಿನಲ್ಲಿ ಆದ ಉತ್ತಮ ಪ್ರಗತಿ ಉಡುಪಿಯಲ್ಲೂ ಆಗಬೇಕು ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಕಾರಿ ಶಿವಾನಂದ ಕಾಪಶಿ ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿಯ ತೋಕೂರಿನಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟನ್ನು ಅಧಿಕಾರಿಗಳ ಸಹಿತ ಭೇಟಿ ನೀಡಿ ಪರಿಶೀಲನೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯಲ್ಲಿ ಗ್ರಾಮಸ್ಥರೇ ಮೂಲ ಸೌಕರ್ಯಕ್ಕೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಲು ಸಾಧ್ಯವಿದೆ. ಕಿಂಡಿ ಅಣೆಕಟ್ಟು ಅತೀ ಅಗತ್ಯವಿರುವಲ್ಲಿ ನಿರ್ಮಿಸಿದಲ್ಲಿ ಆ ಭಾಗದ ಕುಡಿಯುವ ನೀರಿನ ಬವಣೆ ಹಾಗೂ ಕೃಷಿ ಚಟುವಟಿಕೆಗೆ ಪೂರಕ ಎಂದರು.
ಪಡುಪಣಂಬೂರು ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಹಾಗೂ ಅಭಿವೃದ್ಧಿ ಅಧಿಕಾರಿ ಅನಿತಾ ಕ್ಯಾಥರಿನ್ ಕಿಂಡಿ ಅಣೆಕಟ್ಟಿನ ನಿರ್ಮಾಣ ಹಾಗೂ ಅದರ ನಿರ್ವಹಣೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಮಂಗಳೂರು ತಾಲೂಕು ಸಹಾಯಕ ನಿರ್ದೇಶಕ ಎ. ಸದಾನಂದ, ಪಂಚಾಯಿತಿ ನರೇಗಾ ನಿರ್ವಹಣೆಯ ನಮಿತಾ, ಸಿಬ್ಬಂದಿ ದಿನಕರ್ ಯೋಜನೆಯ ಜಾಬ್ ಕಾರ್ಡ್, ಗ್ರಾಮಸ್ಥರ ಸಹಭಾಗಿತ್ವದ ಹಂತದ ಬಗ್ಗೆ ಮಾಹಿತಿ ನೀಡಿದರು.
ಉಡುಪಿ ಜಿಲ್ಲಾ ಪಂಚಾಯಿತಿ ಇಂಜಿನಿಯರ್‌ನ ವಿಭಾಗದ ಅಕಾರಿಗಳು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ತಾಲೂಕು ಕಾರ್ಯನಿರ್ವಾಹಣಾಧಿಕಾರಿಗಳು ಭಾಗವಹಿಸಿದ್ದರು.

Thokur-10251801

 

Comments

comments

Comments are closed.

Read previous post:
Kateel10241502
ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆ

ಕಿನ್ನಿಗೋಳಿ : ಮೈಸೂರು ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ, ಕಟೀಲು ಪ್ರಾಥಮಿಕ ಶಾಲೆಯ ತನ್ವಿ (ತೃತೀಯ ಸ್ಥಾನ), ಕಟೀಲು ಪ್ರೌಢಶಾಲೆಯ ಶ್ರೇಯ (ಪ್ರಥಮ ಸ್ಥಾನ), ಕಟೀಲು ಪ್ರೌಢಶಾಲೆಯ ನಂದಿನಿ...

Close