ಪಂಚಾಯಿತಿ ಕಾವಲು ಸಮಿತಿ ಬಲವರ್ಧನ

ಕಿನ್ನಿಗೋಳಿ : ಮಕ್ಕಳ ಹಾಗೂ ಮಹಿಳೆಯರ ಮಾರಾಟ ಹಾಗೂ ಸಾಗಾಟವನ್ನು ತಡೆಯುವಲ್ಲಿ ಗ್ರಾಮ ಪಂಚಾಯಿತಿಯ ಪಾತ್ರ ಮಹತ್ತರ ಎಂದು ಜಿಲ್ಲಾ ಮಟ್ಟದ ತರಬೇತುದಾರೆ ಕಸ್ತೂರಿ ಬೊಳವಾರ್ ತಿಳಿಸಿದರು.
ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು, ಐಕಳ ಗ್ರಾಮ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಇವುಗಳ ಜಂಟಿ ಸಹಯೋಗದಲ್ಲಿ ಆಯೋಜಿಸಲಾದ ಪಂಚಾಯಿತಿ ಕಾವಲು ಸಮಿತಿಯ ಸದಸ್ಯರಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಜ್ಞಾ ಸಲಹಾ ಕೇಂದ್ರದ ಯೋಜನಾ ಸಂಯೋಜಕ ವಿಲಿಯಂ ಸ್ಯಾಮುವೆಲ್ ಪ್ರಸಾವನೆಗೈದರು.
ಐಕಳ ಪಂಚಾಯಿತಿ ಅಧ್ಯಕ್ಷ ದಿವಾಕರ್ ಚೌಟ ಅಧ್ಯಕ್ಷತೆ ವಹಿಸಿದ್ದರು.
ಅಂಗನವಾಡಿ ಮೇಲ್ವಿಚಾರಕಿ ಕಾತ್ಯಾಯಿನಿ, ಐಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಂದರಿ ಆರ್ ಸಾಲಿಯನ್, ಪಿಡಿಒ ನಾಗರತ್ನ, ಪ್ರಜ್ಞಾ ಸಲಹಾ ಕೇಂದ್ರದ ರೇಶ್ಮ ಜೋಗಿ ಉಪಸ್ಥಿತರಿದ್ದರು.
ಮೇವಿಸ್ ಡಿಸೋಜ ಸ್ವಾಗತಿಸಿದರು, ನಿರ್ಮಲ ವಂದಿಸಿದರು. ವಲಯ ಸಂಯೋಜಕ ಪ್ರದೀಪ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Comments

comments

Comments are closed.