ಹಳೆಯಂಗಡಿ ಬಿಲ್ಲವ ಸಭಾ ಭವನ ಶಿಲಾನ್ಯಾಸ

ಹಳೆಯಂಗಡಿ : ಒಂದೇ ಜಾತಿ,ಮತ ದೇವರೆಂದು ಸಾರಿದಂತಹ ಬ್ರಹ್ಮಶ್ರೀ ನಾರಾಯಣ ಗುರುಗಳು ಸಂದೇಶವನ್ನು ಅನುಷ್ಠಾನಗೊಳಿಸಿದಾಗ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಎಲ್ಲಾ ಸಮುದಾಯವನ್ನು ಪ್ರೀತಿಸುವ ಗುಣವನ್ನು ಬೆಳೆಸುವಲ್ಲಿ ಸಮುದಾಯ ಭವನ ವೇದಿಕೆಯಾಗಲಿ ಎಂದು ಕೇರಳ ವರ್ಕಾಡಿಯ ಶಿವಗಿರಿ ಮಠದ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಹೇಳಿದರು.
ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ವಠಾರದಲ್ಲಿ ಭಾನುವಾರ ಜರಗಿದ ಸುಮಾರು ೮ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಂಘದ ನೂತನ ಭವ್ಯ ಸಮುದಾಯ ಭವನದ ಶಿಲಾನ್ಯಾಸ ನೆರವೇರಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅಶೀರ್ವಚನ ಮಾತನಾಡಿದರು.
ದ.ಕ. ಲೋಕಸಭಾ ಸದಸ್ಯ ನಳಿನ್‌ಕುಮಾರ್ ಕಟೀಲು ಮಾತನಾಡಿ ಭಗವಂತನು ಎಲ್ಲಾ ಸಮುದಾಯಕ್ಕೂ ಸಲ್ಲುವವ ಎಂದು ಸಾರಿದ ನಾರಾಯಣಗುರುಗಳು ಅದನ್ನು ಅಕ್ಷರಶಃ ಪಾಲಿಸಿದರು, ಶಿಕ್ಷಣ ಮತ್ತು ಸಾಮಾಜಿಕ ಬದ್ಧತೆಯ ಸಿದ್ದಾಂತದಿಂದ ಅವರು ಜಗತ್ತಿಗೆ ಕ್ರಾಂತಿಕಾರಿ ಯುಗಪುರುಷ ಎಂದು ಹೇಳಿದರು.
ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಮುದಾಯ ಭವನದ ನೀಲನಕ್ಷೆ ಹಾಗೂ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ರಾಜಶೇಖರ ಕೋಟ್ಯಾನ್, ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು, ಸಸಿಹಿತ್ಲು ಸಸಿಹಿತ್ಲು ಸಾರಂತಾಯ ಗರೋಡಿಯ ವಿನ ಕಾಂತು ಲಕ್ಕಣ ಗುರಿಕಾರ ಯಾನೆ ಯಾದವ ಜಿ ಬಂಗೇರ, ಕುದ್ರೋಳಿ ಕ್ಷೇತ್ರದ ಎಚ್.ಎಸ್.ಸಾಯಿರಾಂ, ಬಿಲ್ಲವ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಎನ್ ಟಿ ಪೂಜಾರಿ, ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬ್ಯೆಲ್, ಮುಂಬ್ಯೆ ಬಿಲ್ಲವ ಅಸೋಸಿಯೇಶನ್ ನ ಉಪಾಧ್ಯಕ್ಷ ಹರೀಶ್ ಅಮೀನ್, ಉದ್ಯಮಿಗಳಾದ ಸಿ ಬಿ ಕರ್ಕೇರ, ಮಹಾಬಲ ಪೂಜಾರಿ ಕಡಂಬೋಡಿ, ಯಾದವ ಕೋಟ್ಯಾನ್ ಪೆರ್ಮುದೆ, ಸುಚೀಂದ್ರ ಅಮೀನ್, ಪ್ರಕಾಶ್ ಶೆಟ್ಟಿ ಹಳೆಯಂಗಡಿ, ದಿವಾಕರ್ ಮಂಗಳೂರು, ಕಲ್ಲಾಪು ವೀರಭದ್ರ ದೇವಳದ ಅಧ್ಯಕ್ಷ ಎಂ ವೀರಪ್ಪ ಶೆಟ್ಟಿಗಾರ್, ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ದೇವಾಡಿಗ, ಹಳೆಯಂಗಡಿ ವಿಠೋಭ ಭಜನಾ ಮಂದಿರದ ಅಧ್ಯಕ್ಷ ಡಾ ಶಿವಾನಂದ ಪ್ರಭು, ಕಟ್ಟಡ ಸಮಿತಿಯ ಅಧ್ಯಕ್ಷ ಮೋಹನ್ ಎಸ್ ಸುವರ್ಣ, ಶಾಂತಾ ಆರ್ ಅಮೀನ್, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್, ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ, ಪಡುಪಣಂಬೂರು ಪಂಚಾಯತ್ ಅಧ್ಯಕ್ಷ ಮೋಹನ್ ದಾಸ್, ಕೆಮ್ರಾಲ್ ಪಂಚಾಯತ್ ಅಧ್ಯಕ್ಷ ನಾಗೇಶ್ ಅಂಚನ್, ಮೂಡಾ ಮಾಜಿ ಸದಸ್ಯ ವಸಂತ್ ಬೆರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.
ಡಾ.ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿದರು, ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಸಾಲ್ಯಾನ್ ಪ್ರಸ್ತಾವನೆಗೈದರು, ಅಧ್ಯಕ್ಷ ಮೋಹನ್ ಎಸ್. ಸುವರ್ಣ ವಂದಿಸಿದರು, ಸಂಘದ ಪ್ರಧಾನ ಕಾರ್ಯದರ್ಶಿ ಕಲ್ಲಾಡಿ ಹಿಮಕರ್ ಸುವರ್ಣ ಮತ್ತು ರಶ್ಮಿ ಶರತ್ ಕಾರ್ಯಕ್ರಮ ನಿರೂಪಿಸಿದರು.
Haleyangadi-10291801 Haleyangadi-10291802 Haleyangadi-10291803

Comments

comments

Comments are closed.

Read previous post:
Kinnigoli-10291806
ಪ್ರಕೃತಿ ಪ್ರೇಮ ನಮ್ಮಲ್ಲಿರಬೇಕು

 ಕಿನ್ನಿಗೋಳಿ : ಸರ್ವ ಧರ್ಮ ಸಮನ್ವಯದ ಮಾನವೀಯ ಮೌಲ್ಯ, ಸ್ವಾರ್ಥ ರಹಿತ ಪರರ ಬಗ್ಗೆ ಸಹೃದಯದ ಜೀವನ ಹಾಗೂ ಪ್ರಕೃತಿ ಪ್ರೇಮ ನಮ್ಮಲ್ಲಿರಬೇಕು ಎಂದು ಮಂಗಳೂರು ಧರ್ಮ ಪ್ರಾಂತ್ಯದ...

Close