ಕಿನ್ನಿಗೋಳಿ ಆರೋಗ್ಯ ತಪಾಸಣಾ ಶಿಬಿರ

ಕಿನ್ನಿಗೋಳಿ : ಸಂಘ ಸಂಸ್ಥೆಗಳು ವಾರ್ಷಿಕೋತ್ಸವದಂತ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ ಆರೋಗ್ಯ ಶಿಬಿರಗಳು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಮಾಜ ಮುಖಿ ಕೆಲಸಕಾರ್ಯಗಳನ್ನು ಮಾಡಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಜೆ. ಬಿ. ಫ್ರೆಂಡ್ಸ್ ಕಿನ್ನಿಗೋಳಿ ಹಾಗೂ ಮಾತಾ ಅಮೃತಮಯಿ ಮಠ ಮಂಗಳೂರು ಶಾಖೆ ಇವರ ವತಿಯಿಂದ ಭಾನುವಾರ ಕಿನ್ನಿಗೋಳಿ ಬಾಬಾಕೋಡಿ ಮೈಕಲ್ ಪಿಂಟೋ ಮನೆಯ ವಠಾರದಲ್ಲಿ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಮಂಗಳೂರು ಮಾತಾ ಅಮೃತಮಯಿ ಮಠದ ವೈದ್ಯರಾದ ಡಾ. ಸುಚಿತ್ರಾ, ಡಾ. ದೇವದಾಸ್, ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಿಹಾಲ್ ಪಿಂಟೋ, ಮೈಕಲ್ ಪಿಂಟೋ, ಲಿಲ್ಲಿ ಪಿಂಟೋ ಉಪಸ್ಥಿತರಿದ್ದರು.
ಜೆ. ಬಿ. ಫ್ರೆಂಡ್ಸ್‌ನ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಶ್ರೀಶ ಸರಾಪ್ ಐಕಳ ಕಾರ್ಯಕ್ರಮ ನಿರೂಪಿಸಿದರು.

Kinnigoli-10291804

Comments

comments

Comments are closed.

Read previous post:
Kinnigoli-10291803
ಸಸಿಹಿತ್ಲು ಹೊಸಕ್ಕಿ ನಡಾವಳಿ ಮಹೋತ್ಸವ

ಸಸಿಹಿತ್ಲು : ಸಸಿಹಿತ್ಲು ಶ್ರಿ ಭಗವತೀ ದೇವಳದಲ್ಲಿ ವರ್ಷಂಪ್ರತಿ ಪರಂಪರೆಯಂತೆ ನಡೆಯುವ ಹೊಸಕ್ಕಿ ನಡಾವಳಿ ಮಹೋತ್ಸವದ ಪೂರ್ವಭಾವಿಯಾಗಿ ಶನಿವಾರ ಕದಿಕೆ ಭಂಡಾರ ಮಂದಿರದಿಂದ ಭಂಡಾರ ಸಹಿತ ಆಗಮಿಸಿ, ಮಹೋತ್ಸವಕ್ಕೆ...

Close