ಪ್ರಕೃತಿ ಪ್ರೇಮ ನಮ್ಮಲ್ಲಿರಬೇಕು

 ಕಿನ್ನಿಗೋಳಿ : ಸರ್ವ ಧರ್ಮ ಸಮನ್ವಯದ ಮಾನವೀಯ ಮೌಲ್ಯ, ಸ್ವಾರ್ಥ ರಹಿತ ಪರರ ಬಗ್ಗೆ ಸಹೃದಯದ ಜೀವನ ಹಾಗೂ ಪ್ರಕೃತಿ ಪ್ರೇಮ ನಮ್ಮಲ್ಲಿರಬೇಕು ಎಂದು ಮಂಗಳೂರು ಧರ್ಮ ಪ್ರಾಂತ್ಯದ ನೂತನ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹ ಹೇಳಿದರು.
ಪಕ್ಷಿಕೆರೆ ವಾರ್ಷಿಕ ಹಬ್ಬದ ಸಂದರ್ಭ ಭಾನುವಾರ ಪಕ್ಷಿಕೆರೆ ಗಣೇಶ ಕಲಾ ಮಂಟಪದಲ್ಲಿ ಪಕ್ಷಿಕೆರೆ ಹತ್ತು ಸಮಸ್ತರ ಪೌರ ಸಮ್ಮಾನ ಕಾರ್ಯಕ್ರಮ ಸ್ವೀಕರಿಸಿ ಮಾತನಾಡಿದರು.
ಕಿನ್ನಿಗೋಳಿ ವಲಯ ಧರ್ಮಗುರು ರೆ. ಫಾ. ಮ್ಯಾಥ್ಯೂ ವಾಸ್, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಕೆ. ಸೀತರಾಮ ಶೆಟ್ಟಿ ಹಾಗೂ ಪಕ್ಷಿಕೆರೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಒಟ್ಟು ಸೇರಿ ಬಿಳಿ ಪಾರಿವಾಳ ಹಾರಿ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಕ್ಕಿಮುಡಿಯ ಮೇಲೆ ಬಿಷಪ್ ಅವರನ್ನು ಕುಳ್ಳಿರಿಸಿ ಅಕ್ಕಿ ಮುಡಿ ಕಟ್ಟುವ ಬೆಳ್ಳಿಯ ಕೊದಂಟಿ ಹಾಗೂ ಬಿಷಪರ ಪರಿಸರ ಕಾಳಜಿಯ ಬಗ್ಗೆ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭ ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ಧರ್ಮಗುರು ರೆ. ಫಾ. ಮೆಲ್ವಿನ್ ನೊರೋನ್ಹಾ ಅಧ್ಯಕ್ಷತೆ ವಹಿಸಿದ್ದರು.
ಪಕ್ಷಿಕೆರೆ ಚರ್ಚ್ ಸಹಾಯಕ ಧರ್ಮಗುರು ಫಾ. ರಾಹುಲ್ ಡೆಕ್ಸ್‌ಟರ್, ಸುರಗಿರಿ ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ಚರಣ್ ಜೆ. ಶೆಟ್ಟಿ, ದ. ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್ ಬೊಳ್ಳೂರು, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್, ವಿನಾಯಕ ಮಿತ್ರ ಮಂಡಳಿಯ ಅಧ್ಯಕ್ಷ ಉಮೇಶ್, ಪಕ್ಷಿಕೆರೆ ರಿಕ್ಷಾ ಯೂನಿಯನ್ ಅಧ್ಯಕ್ಷ ಜಗದೀಶ ಕಾಪಿಕಾಡ್, ರಿಕ್ಷಾ ಯಾನಿಯನ್ ಪಕ್ಷಿಕೆರೆ ಚರ್ಚ್ ಸ್ಟಾಪ್ ಅಧ್ಯಕ್ಷ ನಾರಾಯಣ ಶೆಟ್ಟಿಗಾರ್, ಪಕ್ಷಿಕೆರೆ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜಾಕ್ಸನ್ ಸಲ್ಡಾನ್ಹ, ಕಾರ್ಯದರ್ಶಿ ಕರೊಲ್ ಮತ್ತಿತರರು ಉಪಸ್ಥಿತರಿದ್ದರು.
ಪಕ್ಷಿಕೆರೆ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಧನಂಜಯ ಶೆಟ್ಟಿಗಾರ್ ಸ್ವಾಗತಿಸಿದರು. ಉಪನಾಸ್ಯಕಿ ಅರ್ಪಿತಾ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಪರಮಾನಂದ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.
Kinnigoli-10291805 Kinnigoli-10291806 Kinnigoli-10291807

Comments

comments

Comments are closed.

Read previous post:
Kinnigoli-10291804
ಕಿನ್ನಿಗೋಳಿ ಆರೋಗ್ಯ ತಪಾಸಣಾ ಶಿಬಿರ

ಕಿನ್ನಿಗೋಳಿ : ಸಂಘ ಸಂಸ್ಥೆಗಳು ವಾರ್ಷಿಕೋತ್ಸವದಂತ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ ಆರೋಗ್ಯ ಶಿಬಿರಗಳು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಮಾಜ ಮುಖಿ ಕೆಲಸಕಾರ್ಯಗಳನ್ನು ಮಾಡಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ...

Close