ತೋಕೂರು : ಸಂಸದೀಯ ಸ್ಥಾಯಿ ಸಮಿತಿ ಭೇಟಿ

ಕಿನ್ನಿಗೋಳಿ : ದೇಶದ ಗ್ರಾಮೀಣಾಭಿವೃದ್ಧಿ ಕ್ಷೇತ್ರದ ಆಧ್ಯಯನಕ್ಕಾಗಿ ನೇಮಿಸಿದ ಸಂಸದೀಯ ಸ್ಥಾಯಿ ಸಮಿತಿಯ ತಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸುತ್ತಿರುವ ಅಧ್ಯಯನಕ್ಕಾಗಿ ಶನಿವಾರ ಪಡಪಣಂಬೂರು ಪಂಚಾಯಿತಿ ಹಾಗೂ ತೋಕೂರು ಕಿಂಡಿಅಣೆಕಟ್ಟು ವಿಗೆ ಭೇಟಿ ನೀಡಿ ಅಲ್ಲಿನ ಆಡಳಿತ ಹಾಗೂ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿತು.
ಕೇಂದ್ರ ಸರ್ಕಾರದಿಂದ ಜಾರಿಗೊಂಡಿರುವ ಮಹಾತ್ಮಗಾಂಧಿ ಉದ್ಯೋಗ ಖಾತರಿ ಹೇಗಿದೆ, ಉಜ್ವಲ ಯೋಜನೆಯಲ್ಲಿ ಎಷ್ಟು ಮಂದಿ ಫಲಾನುಭವಿಗಳು, ಕುಡಿಯುವ ನೀರಿನ ಸಮಸ್ಯೆಗೆ ಹೇಗೆ ಪರಿಹಾರ, ಬಿಎಸ್‌ಎನ್‌ಎಲ್ ಸಂಪರ್ಕದಿಂದ ಯಾವುದೇ ದೋಷವಿದೆಯೇ, ಪಂಚಾಯಿತಿಯ ಆಡಳಿತ ವೇಗ ಹೇಗಿದೆ ಇತ್ಯಾದಿ ಪ್ರಶ್ನೆಗಳನ್ನು ಕೇಳಿದ್ದು, ದೆಹಲಿಯಿಂದ ಮೂಲ್ಕಿ ಹೋಬಳಿಯ ಪಡುಪಣಂಬೂರು ಪಂಚಾಯಿತಿಗೆ ಆಗಮಿಸಿದ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರು ಉತ್ತರ ದಾಖಲಿಸಿದರು.
ಸಮಿತಿಯ ಅಧ್ಯಕ್ಷ ಡಾ.ಪಿ.ವೇಣುಗೋಪಾಲ್ ನೇತೃತ್ವದಲ್ಲಿ 14 ಮಂದಿ ಲೋಕಸಭಾ ಸದಸ್ಯರು, 4 ಮಂದಿ ಲೋಕಸಭಾ ಕಾರ್ಯದರ್ಶಿಗಳು ಹಾಗೂ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿದ್ದರು.
ಪಂಚಾಯಿತಿಗೆ ಸಿಕ್ಕ ಗೌರವಗಳು, ಸಿಬ್ಬಂದಿಗಳ ಸಮವಸ್ತ್ರದ ಶಿಸ್ತು, ಸ್ವಚ್ಚತೆಗೆ ಕ್ರಮ, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ, ಗ್ರಾಮಸ್ಥರು ಭೇಟಿ ನೀಡುವ ಕಚೇರಿಯ ವಾತಾವರಣ, ತೋಕೂರಿನಲ್ಲಿ ನಿರ್ಮಿಸಿರುವ ಎರಡು ಕಿಂಡಿ ಅಣೆಕಟ್ಟನ್ನು ವೀಕ್ಷಿಸಿದರು, ನರೇಗಾ ಯೋಜನೆಯಲ್ಲಿನ ಅನುಷ್ಠಾನ, ಅಣೆಕಟ್ಟು ನಿರ್ಮಾಣದ ನಂತರ ನೀರಿನ ಒಳ ಅರಿವು ಹೆಚ್ಚಿರುವ ಬಗ್ಗೆಯೂ ವಿವರಣೆ ಪಡೆದರು.
ಸಮಿತಿಯಲ್ಲಿ ಲೋಕಸಭಾ ಸದಸ್ಯರಾದ ಕೀರ್ತಿ ಆಜಾದ್, ಹರಿಶ್ಚಂದ್ರ ಚೌವಣ್, ಜಿ. ಗಂಗಾರಾಜು, ಡಾ. ಯಶವಂತ್ ಸಿಂಗ್, ಜುಗಲ್ ಕಿಶೋರ್ ಶರ್ಮಾ, ಶಾಂತಾ ಚೆತ್ರಿ, ಶಂಸೇರ್ ಸಿಂಗ್ ಡಿಲ್ಲೋ, ಜಾವೆದ್ ಅಲಿ ಖಾನ್, ಎ.ಕೆ.ಸೆಲ್ವರಾಜ್, ಲಾಲ್ ಸಿಂಗ್ ವಡೋಡ್ಲಾ, ನಾರಾಯಣ ಲಾಲ್ ಪಂಚಾರಿಯಾ, ನರನ್‌ಭಾಯಿ ಜೆ. ರಾತ್ವಾ, ಮೌಸಮ್ ನೂರ್, ಲೋಕಸಭಾ ಕಾರ್ಯದರ್ಶಿಗಳಾದ ಅಭಿಜಿತ್ ಕುಮಾರ್, ಸತೀಶ್‌ಕುಮಾರ್, ಅತುಲ್ ಸಿಂಗ್, ಕಿಶೋರ್ ಕುಮಾರ್, ಬೆಂಗಳೂರಿನ ಪಂಚಾಯಿತಿ ರಾಜ್ ಆಯುಕ್ತ ಆಲೋಕ್, ಜಿಲ್ಲಾ ಪಂಚಾಯಿತಿಯ ಜಂಟಿ ನಿರ್ದೇಶಕ ಮಹೇಶ್, ಸಿಇಒ ಡಾ. ಸೆಲ್ವಮಣಿ, ಪಡುಪಣಂಬೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮೋಹನ್‌ದಾಸ್, ಸದಸ್ಯರಾದ ಹೇಮನಾಥ ಅಮೀನ್ ತೋಕೂರು, ಪಿಡಿಒ ಅನಿತಾ ಕ್ಯಾಥರಿನ್, ಕಾರ್ಯದರ್ಶಿ ಲೋಕನಾಥ ಭಂಡಾರಿ, ಮತ್ತಿತರ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

Kinnigoli-10291802

 

Comments

comments

Comments are closed.

Read previous post:
Kinnigoli-10291801
ಕಿನ್ನಿಗೋಳಿ :ನರೇಗಾ ಯೋಜನೆ ವೀಕ್ಷಣೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ನರೇಗಾ ಯೋಜನೆಯ ಪ್ರಗತಿ ವೀಕ್ಷಿಸಲು ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಪಾಶಿ ಸಹಿತ ಅಧಿಕಾರಿಗಳ ತಂಡ ಬೇಟಿ ನೀಡಿದರು. ಈ...

Close