ಶಿಕ್ಷಕ ವೃತ್ತಿ ಪವಿತ್ರ ಸೇವೆ

ಕಿನ್ನಿಗೋಳಿ: ಶಿಕ್ಷಕ ವೃತ್ತಿ ಪವಿತ್ರ ಸೇವೆ ಮಕ್ಕಳನ್ನು ಪ್ರೀತಿಸುವ ಈ ಸೇವೆ ಭಗವಂತನಿಗೆ ಸಮರ್ಪಿತವಾಗಿದೆ ಎಂದು ಸಸಿಹಿತ್ಲು ಶ್ರಿ ಭಗವತೀ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ವಾಮನ ಇಡ್ಯಾ ಹೇಳಿದರು.
ಸಸಿಹಿತ್ಲು ಭಗವತೀ ದೇವಳದ ಬಳಿಯಲ್ಲಿ ನಡೆದ ಸಸಿಹಿತ್ಲು ರಂಗ ಸುದರ್ಶನ ಸಂಸ್ಥೆ ಯ ಗುರು ನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಪಡುಪಣಂಬೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರತಿ ಎಕ್ಕಾರು ಅವರನ್ನು ಸನ್ಮಾನಿಸಲಾಯಿತು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯೆ ಮಾಲತಿ ಡಿ. ಕೋಟ್ಯಾನ್ ಉಪಸ್ಥಿತರಿದ್ದರು.
ರಂಗ ಸುದರ್ಶನ ಸಂಸ್ಥೆಯ ನಿರ್ದೇಶಕ ಪರಮಾನಂದ ಸಾಲಿಯಾನ್ ಸ್ವಾಗತಿಸಿ, ಪ್ರಸ್ತಾವನೆಗೈದರು, ವ್ಯವಸ್ಥಾಪಕರಾದ ಲೋಲಾಕ್ಷಿ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.
ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ರಂಗಸುದರ್ಶನ ಕಲಾವಿದರಿಂದ ಬಾಲೆಗ್ ಒಲಿಯಿನ ಭ್ರಾಮರಿ ತುಳು ಪೌರಾಣಿಕ ನಾಟಕ ಪ್ರದರ್ಶನ ಗೊಂಡಿತು.
Kinnigoli-10311801

Comments

comments

Comments are closed.

Read previous post:
Haleyangadi-10291801
ಹಳೆಯಂಗಡಿ ಬಿಲ್ಲವ ಸಭಾ ಭವನ ಶಿಲಾನ್ಯಾಸ

ಹಳೆಯಂಗಡಿ : ಒಂದೇ ಜಾತಿ,ಮತ ದೇವರೆಂದು ಸಾರಿದಂತಹ ಬ್ರಹ್ಮಶ್ರೀ ನಾರಾಯಣ ಗುರುಗಳು ಸಂದೇಶವನ್ನು ಅನುಷ್ಠಾನಗೊಳಿಸಿದಾಗ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಎಲ್ಲಾ ಸಮುದಾಯವನ್ನು ಪ್ರೀತಿಸುವ ಗುಣವನ್ನು ಬೆಳೆಸುವಲ್ಲಿ ಸಮುದಾಯ...

Close