ನವೆಂಬರ್ 1 : ಪಾವಂಜೆ ದೇವಳದಲ್ಲಿ ಯಕ್ಷಸಮಾರಾಧನೆ

 ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಶಾರಧ್ವತ ಯಜ್ಞಾಂಗಣದಲ್ಲಿ ನವೆಂಬರ್ 1 ರ ಬೆಳಿಗ್ಗೆಯಿಂದ ರಾತ್ರಿ ತನಕ ಪಾವಂಜೆ ಸತ್ಯಕಥಾಮೃತ ಯಕ್ಷಸಮಾರಾಧನೆ ನಡೆಯಲಿದೆ.
ವೇದಕೃಷಿಕ ಕೆ. ಎಸ್. ನಿತ್ಯಾನಂದ ಸ್ವಾಮೀಜಿಯವರ ಕಥಾ ಸಂವಿಧಾನದಿಂದ ಗಣೇಶ ಕೊಲಕಾಡಿ ರಚಿಸಿರುವ ಶ್ರೀ ಸವನ ಗೋವರ್ಧನ ಯಕ್ಷಗಾನ ಪ್ರಸಿದ್ಧ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ. ಬೆಳಿಗ್ಗೆ ನಾಂದೀ ನಾದವನ್ನು ಯಕ್ಷಗಾನ ಕಲಾವಿದರು ಪ್ರದರ್ಶಿಸಲಿದ್ದು ಕೋಡಿ ಮನೆ ವಾಸು ಭಟ್ಟ ಪುರಸ್ಕಾರವನ್ನು ಯಕ್ಷಗಾನದ ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ಟರಿಗೆ ನೀಡಿ ಗೌರವಿಸಲಾಗುವುದು.

Kinnigoli-10311803

 

Comments

comments

Comments are closed.

Read previous post:
Kinnigoli-10311802
ಆಳ್ವಾಸ್ ವಿದ್ಯಾರ್ಥಿಗಳು : ಪಡುಪಣಂಬೂರು ಗ್ರಾ. ಪಂ. ಅಧ್ಯಯನ

ಕಿನ್ನಿಗೋಳಿ: ಪಡುಪಣಂಬೂರು ಗ್ರಾಮ ಪಂಚಾಯಿತಿಯ ತೋಕೂರು ಕಿಂಡಿ ಅಣೆಕಟ್ಟು, ವಿವಿಧ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಶಾಲೆಗಳು ಹಾಗೂ ಪಂಚಾಯಿತಿಯ ಆದಾಯದಲ್ಲಿಯೇ ನಿರ್ಮಿಸಿದ ವಿವಿಧ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಲು...

Close