ಆಳ್ವಾಸ್ ವಿದ್ಯಾರ್ಥಿಗಳು : ಪಡುಪಣಂಬೂರು ಗ್ರಾ. ಪಂ. ಅಧ್ಯಯನ

ಕಿನ್ನಿಗೋಳಿ: ಪಡುಪಣಂಬೂರು ಗ್ರಾಮ ಪಂಚಾಯಿತಿಯ ತೋಕೂರು ಕಿಂಡಿ ಅಣೆಕಟ್ಟು, ವಿವಿಧ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಶಾಲೆಗಳು ಹಾಗೂ ಪಂಚಾಯಿತಿಯ ಆದಾಯದಲ್ಲಿಯೇ ನಿರ್ಮಿಸಿದ ವಿವಿಧ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಲು ಮೂಡಬಿದಿರೆಯ ಆಳ್ವಾಸ್‌ನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಾಹಿತಿಗಳನ್ನು ಸಂಗ್ರಹಿಸಿದರು.
ಮಾಹಿತಿ ಸಂಗ್ರಹಿಸಿದ ವಿದ್ಯಾರ್ಥಿಗಳಲ್ಲಿ ನಿವೇದಿತಾ ಮಾಧ್ಯಮದೊಂದಿಗೆ ಮಾತನಾಡಿ “ಗ್ರಾಮ ಪಂಚಾಯಿತಿಗಳ ಆಡಳಿತದ ಕಾರ್ಯ ವೈಖರಿಯಿಂದ ಜನರು ಪಂಚಾಯಿತಿಗೆ ಬೆಂಬಲಿಸುವಂತಹ ವಾತಾವರಣ ನಿರ್ಮಾಣವಾದಲ್ಲಿ ಮಾತ್ರ ಪಂಚಾಯಿತಿಯ ಗೌರವ ಹೆಚ್ಚಿಸಬಹುದು ಎಂದರು.
ರಾಜ್ಯದ ಗಾಂಧೀ ಗ್ರಾಮ ಪುರಸ್ಕಾರ ಪಡೆದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ವಿಶೇಷ ವರದಿಯೊಂದನ್ನು ಎಸೈನ್‌ಮೆಂಟ್‌ನಂತೆ ರೂಪಿಸುವ ಉದ್ದೇಶದಿಂದ ಈ ಬಾರಿ ಪಡುಪಣಂಬೂರು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದರು.
ಶಿಲ್ಪಾ ಅವರು ವಿವಿಧ ದಾಖಲೆಗಳ ಮಾಹಿತಿ ನೀಡಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್, ಉಪಾಧ್ಯಕ್ಷೆ ಸುರೇಖಾ ಕರುಣಾಕರ್ ಬೆಳ್ಳಾಯರು, ಸದಸ್ಯ ಹೇಮನಾಥ ಅಮೀನ್ ತೋಕೂರು, ಪಿಡಿಒ ಅನಿತಾ ಕ್ಯಾಥರಿನ್, ಕಾರ್ಯದರ್ಶಿ ಲೋಕನಾಥ ಭಂಡಾರಿ, ನರೇಗಾ ಯೋಜನೆಯ ನಮಿತಾ, ಸಿಬ್ಬಂದಿ ದಿನಕರ್ ಪಂಚಾಯಿತಿಯ ವಿವಿಧ ಕಾರ್ಯ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು.
Kinnigoli-10311802

 

Comments

comments

Comments are closed.

Read previous post:
Kinnigoli-10311801
ಶಿಕ್ಷಕ ವೃತ್ತಿ ಪವಿತ್ರ ಸೇವೆ

ಕಿನ್ನಿಗೋಳಿ: ಶಿಕ್ಷಕ ವೃತ್ತಿ ಪವಿತ್ರ ಸೇವೆ ಮಕ್ಕಳನ್ನು ಪ್ರೀತಿಸುವ ಈ ಸೇವೆ ಭಗವಂತನಿಗೆ ಸಮರ್ಪಿತವಾಗಿದೆ ಎಂದು ಸಸಿಹಿತ್ಲು ಶ್ರಿ ಭಗವತೀ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ವಾಮನ ಇಡ್ಯಾ...

Close