ಚಂದ್ರಶೇಖರ ನಾನಿಲ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸನ್ಮಾನ

ಕಿನ್ನಿಗೋಳಿ : ಮೂಲ್ಕಿ ಬಳಿಯ ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿನ್ನಲೆ ಹಳೆಯಂಗಡಿಯಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಹಳೆಯಂಗಡಿ ನಾಗರಿಕರ ಪರವಾಗಿ ಹಳೆಯಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ವಸಂತ ಬೆರ್ನಾಡ್ ಅವರು ವಿಶೇಷವಾಗಿ ಗೌರವಿಸಿದರು. ಈ ಸಂದರ್ಭದಲ್ಲಿ ಚಂದ್ರಶೇಖರ ನಾನಿಲ್ ಅವರು ಪಾವಂಜೆಯ ದೇವಸ್ಥಾನಗಳಿಗೆ ಹಾಗೂ ಹಳೆಯಂಗಡಿ ಬ್ರಹ್ಮಶ್ರಿ ನಾರಾಯಣಗುರು ಮಂದಿರಕ್ಕೆ ಭೇಟಿ ನೀಡಿ ಪ್ರಸಾದ ಸ್ವಿಕರಿಸಿದರು. ಹಿರಿಯ ಕೃಷಿಕ ತಿಮ್ಮಪ್ಪ ಅಮೀನ್, ಜಯಶ್ರಿ ನಾನಿಲ್, ಪ್ರಜ್ವಲ್ ನಾನಿಲ್, ಪ್ರತೀಕ್ ನಾನಿಲ್, ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್, ಸಮಾಜ ಸೇವಕ ಶಶೀಂದ್ರ ಎಂ. ಸಾಲ್ಯಾನ್, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ಅಜೀಜ್, ಹಮೀದ್ ಸಾಗ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಸಾವಿತ್ರಿ ಡಿ. ಸುವರ್ಣ, ಹಳೆಯಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಯಶೋಧರ ಸಾಲ್ಯಾನ್, ಮಾಜಿ ಅಧ್ಯಕ್ಷರುಗಳಾದ ಮೋಹನ್ ಸುವರ್ಣ, ರಮೇಶ್ ಬಂಗೇರ, ಬ್ರಿಜೇಶ್‌ಕುಮಾರ್, ಶರತ್ ಸಾಲ್ಯಾನ್, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಗಣೇಶ್ ಜಿ. ಬಂಗೇರ, ಉಪಾಧ್ಯಕ್ಷ ರಾದ ಜಯ ಜಿ. ಸುವರ್ಣ, ಜೈಕೃಷ್ಣ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಹಿಮಕರ್ ಟಿ. ಸುವರ್ಣ ಕಲ್ಲಾಡಿ, ಸಹ ಕಾರ್ಯದರ್ಶಿ ದೀಪಕ್ ನಾನಿಲ್, ಕಟ್ಟಡ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-11031803

 

Comments

comments

Comments are closed.

Read previous post:
Kinnigoli-11031802
ತೋಕೂರು ಐಟಿಐ : ಉದಯ ಕುಮಾರ್ ವಿದಾಯ ಸಮಾರಂಭ

ಕಿನ್ನಿಗೋಳಿ : ಮುಲ್ಕಿ ರಾಮಕೃಷ್ಣ ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆ ತಪೋವನ, ತೋಕೂರು ಕಛೇರಿ ಆಧೀಕ್ಷಕರಾಗಿ ಮೂವತ್ತಮೂರು ವರ್ಷಗಳ ಸೇವೆಯನ್ನು ಪೂರೈಸಿ ನಿವೃತ್ತಿ ಹೊಂದಿದ ಉದಯ ಕುಮಾರ್ ಮತ್ತು ಅವರ...

Close