ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕ್ರತ ವಿರಾರ್ ಶಂಕರ ಶೆಟ್ಟಿ

ಕಿನ್ನಿಗೋಳಿ : ಅಂದಿನ ಬಡತನದ ದಿನಗಳಲ್ಲಿಯೂ ನಮ್ಮ ತಾಯಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು ಅದುವೇ ನನಗೆ ಪ್ರೇರಣೆಯಾಗಿದೆ. ವಿದ್ಯೆ ಬುದ್ದಿ ಕೊಟ್ಟ ಗುರುಗಳು ಮತ್ತು ಜನರ ಸಹಕಾರದಿಂದ ಸಮಾಜಸೇವೆಯಲ್ಲಿ ಈ ಮಟ್ಟಕ್ಕೆ ಬೆಳೆಯಲು ಸಾದ್ಯವಾಯಿತು. ಎಂದು ಮುಂಬೈ ಉದ್ಯಮಿ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕ್ರತ ವಿರಾರ್ ಶಂಕರ ಶೆಟ್ಟಿ ಸಂಕಯ್ಯಬೆನ್ನಿ ಹೇಳಿದರು
ಶುಕ್ರವಾರ ಬಳಕುಂಜೆ ಸಂತಪೌಲರ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಧ್ಯಕ್ಷ ದಿನೇಶ್ ಪುತ್ರನ್ ಮಾತನಾಡಿ ವಿರಾರ್ ಶಂಕರ್ ಶೆಟ್ಟಿಯವರು ಸಮಾಜಸೇವೆಯಲ್ಲಿ ಮಾದರಿ, ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದವರು, ಧಾರ್ಮಿಕ ಕ್ಷೇತ್ರದಲ್ಲಿಯೂ ಅವರ ಕೊಡುಗೆ ಅನನ್ಯ ಎಂದರು.
ಈ ಸಂದರ್ಭ ವಿರಾರ್ ಶಂಕರ ಶೆಟ್ಟಿ ಮತ್ತು ರತಿ ಎಸ್ ಶೆಟ್ಟಿ ದಂಪತಿಯವರನ್ನು ಸನ್ಮಾನಿಸಲಾಯಿತು.   ಬಳ್ಕುಂಜೆ ಸಂತಪೌಲರ ಚರ್ಚ್ ಪ್ರಧಾನ ಧರ್ಮಗುರು ಮೈಕಲ್ ಡಿಸಿಲ್ವಾ ಅಧ್ಯಕ್ಷತೆ ವಹಿಸಿದ್ದರು.
ಉಳೆಪಾಡಿ ಉಮಾಮಹೇಶ್ವರೀ ಮಹಾಮ್ಮಾಯಿ ದೇವಳ ಧರ್ಮದರ್ಶಿ ಮೋಹನ್ ದಾಸ್ ಸುರತ್ಕಲ್, ತಾಲೂಕು ಪಂಚಾಯಿತಿ ಸದಸ್ಯೆ ರಶ್ಮೀ ಆಚಾರ್ಯ, ಬಳ್ಕುಂಜೆ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಭಾಕರ ಶೆಟ್ಟಿ, ಮಮತಾ ಪೂಂಜ, ಪ್ರಸಾದ್ ಶೆಟ್ಟಿ, ಬಳಕುಂಜೆಗುತ್ತು ನಾರಾಯಣ ಮಣೈ, ಕವತ್ತಾರು ದೊಡ್ಡಣ್ಣ ಶೆಟ್ಟಿ. ಚಿತ್ತರಂಜನ್ ಶೆಟ್ಟಿ, ಸಯ್ಯದ್ ಅಲಿ ಕರ್ನಿರೆ, ಬಳ್ಕುಂಜೆ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ನೆಲ್ಸನ್ ಲೋಬೋ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಸುಕುಮಾರ್ ಪ್ರಸ್ತಾವನೆಗೈದರು, ಎಸ್.ಡಿ.ಎಂ.ಸಿ ಅಧ್ಯಕ್ಷ ದಿನಕರ್ ಶೆಟ್ಟಿ ಅಭಿನಂದನಾ ಭಾಷಣಗೈದರು ಶಿಕ್ಷಕಿ ಹೆಲೆನ್ ಸ್ವಾಗತಿಸಿದರು. ಅನಿತಾ ಕಾರ್ಯಕ್ರಮ ನಿರೂಪಿಸಿದರು.
Kinnigoli-11031805

 

Comments

comments

Comments are closed.

Read previous post:
Kinnigoli-11031804
ಪೆರುವೋಡಿ ನಾರಾಯಣ ಭಟ್ಟರಿಗೆ ಪುರಸ್ಕಾರ

ಕಿನ್ನಿಗೋಳಿ : ಯಕ್ಷಗಾನದ ಖ್ಯಾತ ಹಾಸ್ಯಗಾರ, ಸಾಧಕ ಪೆರವೋಡಿ ನಾರಾಯಣ ಭಟ್ ಹಾಗೂ ಅವರ ಪತ್ನಿ ಸಾವಿತ್ರೀ ಚಿವರನ್ನು ಪಾವಂಜೆಯ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ...

Close