ಕೆರೆಕಾಡು : ಹಾವು ಕಡಿದು ಸಾವು

ಕಿನ್ನಿಗೋಳಿ : ಕಿನ್ನಿಗೊಳಿ ಸಮೀಪದ ಕೆರೆಕಾಡಿನಲ್ಲಿ ವಿಷಜಂತುವೊಂದು ಕಡಿದು ಯುವತಿ ಸಾವನ್ನಪ್ಪಿದ ಘಟನೆ ನಡೆದಿದೆ. ಸಾವನ್ನಪಿದ ಯವತಿಯನ್ನು ಕೆರೆಕಾಡು ನಿವಾಸಿ ಶ್ವೇತ(17) ಎಂದು ಗುರುತಿಸಲಾಗಿದೆ. ಶ್ವೇತ ಅವರು ಶುಕ್ರವಾರ ಸಂಜೆ ಮನೆಯ ಬಳಿ ಕೆಲಸ ಮಾಡುತ್ತಿರುವ ಸಂದರ್ಭ ವಿಷಜಂತು ಶ್ವೇತ ಅವರ ಕಾಲಿಗೆ ಕಡಿದಿದೆ. ಕೂಡಲೇ ಕಿನ್ನಿಗೋಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕೆರೆಕಾಡು ನಿವಾಸಿ ಪುರಂದರ ವಿಮಲ ದಂಪತಿಗಳ ಪುತ್ರಿಯಾದ ಶ್ವೇತ ಮೂಲ್ಕಿ ಜೂನಿಯರ್ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾರೆ. ಮುಲ್ಕಿ ಠಾಣೆಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

comments

Comments are closed.

Read previous post:
Kateel-03111802
ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ದಶಮ ಕಲಾಪರ್ವ

ಕಟೀಲು : ಶ್ರೀ ದುರ್ಗಾ ಮಕ್ಕಳ ಮೇಳದ ದಶಮ ವಾರ್ಷಿಕ ಕಲಾಪರ್ವ ತಾ. 4ರ ಬೆಳಿಗ್ಗಿನಿಂದ ರಾತ್ರಿವರೆಗೆ ಕಟೀಲಿನ ಸರಸ್ವತೀ ಸದನದಲ್ಲಿ ನಡೆಯಲಿದೆ. ಬೆಳಗ್ಗೆ ಚೌಕಿ ಪೂಜೆ,...

Close