ತೋಕೂರು ಐಟಿಐ : ಉದಯ ಕುಮಾರ್ ವಿದಾಯ ಸಮಾರಂಭ

ಕಿನ್ನಿಗೋಳಿ : ಮುಲ್ಕಿ ರಾಮಕೃಷ್ಣ ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆ ತಪೋವನ, ತೋಕೂರು ಕಛೇರಿ ಆಧೀಕ್ಷಕರಾಗಿ ಮೂವತ್ತಮೂರು ವರ್ಷಗಳ ಸೇವೆಯನ್ನು ಪೂರೈಸಿ ನಿವೃತ್ತಿ ಹೊಂದಿದ ಉದಯ ಕುಮಾರ್ ಮತ್ತು ಅವರ ಧರ್ಮಪತ್ನಿ ಜಯನಂದಿನಿ ಅವರಿಗೆ ಬೀಳ್ಗೊಡುಗೆ ಸಮಾರಂಭ ನೆರೆವೇರಿತು. ಈ ಸಂದರ್ಭ ಗುರುದೇವ್ ಮೆನ್ಸ್ ವೇರ್ ಮಾಲಕ ಹಾಗೂ ಗುರುದೇವ್ ಇಂಜಿನಿಯರ್ ವರ್ಕ್ಸ್ ಪಾಲುದಾರರಾದ ಕೃಷ್ಣ ಆರ್. ಕೋಟ್ಯಾನ್, ಸಂಸ್ಥೆಯ ಪ್ರಾಚಾರ್ಯ ಶ್ರೀ ವೈ.ಎನ್. ಸಾಲ್ಯಾನ್, ತರಬೇತಿ ಅಧಿಕಾರಿ ಲಕ್ಷ್ಮೀಕಾಂತ್, ಉದ್ಯೋಗಾಧಿಕಾರಿ ರಘುರಾಮ್ ರಾವ್, ಎನ್.ಎಸ್.ಎಸ್. ಅಧಿಕಾರಿ ಹರಿ ಹೆಚ್., ಪ್ರಥಮ ದರ್ಜೆ ಸಹಾಯಕ ಹರೀಶ್ಚಂದ್ರ ದೇವಾಡಿಗ, ವಿಶ್ವನಾಥ್ ರಾವ್, ಶಿವರಾಮ ದೇವಾಡಿಗ, ಸಂಸ್ಥೆಯ ನಿವೃತ್ತ ಕಛೇರಿ ಅಧೀಕ್ಷಕರಾದ ಸಂಜೀವ ದೇವಾಡಿಗ ಮತ್ತು ಶಿಕ್ಷಕ ವೃಂದದವರು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kinnigoli-11031802

Comments

comments

Comments are closed.

Read previous post:
Kinnigoli-11031801
ವಿರಾರ್ ಶಂಕರ ಶೆಟ್ಟಿ ಸನ್ಮಾನ

ಬಳ್ಕುಂಜೆ :  ಬಳ್ಕುಂಜೆ ವಿಠೋಭ ಭಜನಾ ಮಂಡಳಿಯಲ್ಲಿ ನಡೆದ ಮಂಡಳಿಯ ಮಹಾಸಭೆಯಲ್ಲಿ ಅಮೇರಿಕಾದ ಅಕ್ಕ ಸಮ್ಮೇಳನದಲ್ಲಿ ಗೌರವ ಪಡೆದ ಹಿನ್ನಲೆಯಲ್ಲಿ ವಿರಾರ್ ಶಂಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು....

Close