ಯಕ್ಷಗಾನ ಪ್ರಿಯರ ಮನಸೂರೆಗೊಂಡ ಕಲಾಪರ್ವ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ ಭಾನುವಾರ ದಿನವಿಡೀ ಸಂಪನ್ನಗೊಂಡ ಶ್ರಿ ದುರ್ಗಾಮಕ್ಕಳ ಮೇಳದ ಕಲಾಪರ್ವದಲ್ಲಿ ಯಕ್ಷಗಾನದ ವೈವಿಧ್ಯಗಳ ಪ್ರದರ್ಶಿಸಿದ ಮಕ್ಕಳು ಯಕ್ಷಗಾನ ಪ್ರೇಮಿಗಳ ಮನತಣಿಸಿದರು.
ಚೌಕಿಪೂಜೆಯ ಬಳಿಕ ವಿನ್ಯಾಸ್, ಚ್ಯವನ, ಭುವನ್, ಡಿಂಪಲ್ ಕೋಡಂಗಿ ವೇಷದಲ್ಲಿ ಕುಣಿದರೆ, ಅಪರ್ಣಾ ಧನಲಕ್ಷ್ಮಿ ಬಾಲಗೋಪಾಲರಾಗಿ, ಸೃಷ್ಟಿ, ಅನುಷಾ ಮುಖ್ಯ ಸ್ತ್ರೀವೇಷದಲ್ಲಿ, ಅಚಿಂತ್ಯಾ ಹೊಗಳಿಕೆ ವೇಷದಲ್ಲಿ ಕುಣಿದರು. ಯಕ್ಷಗಾನ ಪೂರ್ವರಂಗದ ಷಣ್ಮುಖ ಸುಬ್ರಾಯವನ್ನು ಮೇಘ, ಅರ್ಧನಾರೀಶ್ವರನಾಗಿ ವೈಷ್ಣವಿ, ವಿಶಿಷ್ಟವಾದ ಚಪ್ಪರಮಂಚ ನಾಟ್ಯವನ್ನು ಐಶ್ವರ್ಯ ಪ್ರದರ್ಶಿಸಿದರು. ಚಂದಭಾಮಾವನ್ನು ಚೈತನ್ಯ. ಶ್ರಾವ್ಯಾ, ಅರೆಪಾವಿನಾಟದಲ್ಲಿ ಅನನ್ಯಾ ವೈಶಾಲಿ ಭಾಗವಹಿಸಿದರು. ಪೀಠಿಕೆ ಸ್ತ್ರೀವೇಷದಲ್ಲಿ ಧನುಷ್ ಧನ್ಯಾ ಗಮನ ಸೆಳೆದರು. ದೇವೇಂದ್ರನ ಒಡ್ಡೋಲಗದಲ್ಲಿ ನವ್ಯಾ. ದುರ್ಗಾಶ್ರೀ, ಅಪರ್ಣಾ,ಧನಲಕ್ಷ್ಮೀ, ವೈಶಾಲಿ. ಮೇಘ, ಚೈತನ್ಯ, ಅನುಷಾ. ಕೃತಿಕಾ ದೇವೇಂದ್ರನ ಒಡ್ಡೋಲಗ ಪ್ರದರ್ಶಿಸಿದರು. ಇದರಲ್ಲಿ ದೇವಲೋಕದ ಅಪ್ಸರೆಯರ ನಾಟ್ಯ, ಮುನಿಗಳ ಸ್ತುತಿಯಂತಹ ಪ್ರಯೋಗಗಳನ್ನು ಅಳವಡಿಸಲಾಗಿತ್ತು. ಸ್ವಸ್ತಿಕ್ ಪರಂಪರೆಯ ಹನೂಮಂತನ ಒಡ್ಡೋಲಗದೊಂದಿಗೆ ಮೆಚ್ಚುಗೆ ಪಡೆದರು.
ಕೃಷ್ಣನ ಒಡ್ಡೋಲಗವನ್ನು ಸೃಷ್ಟಿ, ಡಿಂಪಲ್, ಯತೀಕ್ಷ, ಮನು, ಮನ್ವಿತ್, ಸ್ವಯಂ, ಅಶ್ವಿನ್, ಮನೀಷ್  ಚಂದವಾಗಿಸಿದರು.
ಶಶಿಪ್ರಭೆ ಒಡ್ಡೋಲಗ ಚೈತನ್ಯ ಮೇಘ ಪ್ರೀತಿಕಾರಿಂದ ರೈಸಿತು. ಗಣೇಶ್ ರಾವ್ ಹೆಣ್ಣುಬಣ್ಣ ಒಡ್ಡೋಲಗವನ್ನು ನಡೆಸಿಕೊಟ್ಟರೆ ಪಾಂಡವರ ಒಡ್ಡೋಲಗದಲ್ಲಿ ಆಶಿತಾ, ವಿಶ್ವನಾಥ, ಕೃತಿಕಾ, ದುರ್ಗಾಶ್ರೀ, ಪ್ರೀತಿಕಾ ನವ್ಯ ಸಮರ್ಥವಾಗಿ ಕುಣಿದು ಗಮನ ಸೆಳೆದರು. ಮೇಘ ಮತ್ತು ವೈಶಾಲಿ ರಾಮನ ಒಡ್ಡೋಲಗವನ್ನು ಪ್ರದರ್ಶಿಸಿದರು. ಕಿರಾತನ ಒಡ್ಡೋಲಗದಲ್ಲಿ ಪ್ರೀತೇಶ್, ಕಾರ್ತಿಕ್, ಪ್ರಹ್ಲಾದ್, ಕಾರ್ತಿಕ್, ಪೂರ್ವಿ, ಚ್ಯವನ್, ಪಾರ್ಥ, ಲೇಖನ್, ವಿಖ್ಯಾತ್, ಪ್ರಜ್ವೇಶ್, ವಿನ್ಯಾಸ್, ಹಾರ್ವಿ, ಸಾನ್ವಿ, ಮನೀಷ್, ಮಾನಿಖ್, ಆದಿತ್ಯ, ನಮಿತ್, ಅಶ್ವಿನ್ ಹಾಗೂ ರಚನ್ ಭಾಗವಹಿಸಿ ಗಮನ ಸೆಳೆದರು. ಇದಲ್ಲದೆ ಮಕ್ಕಳ ಮೇಳದ ಕಲಾವಿದರಿಂದ ನಡೆದ ಶಕ್ರಾರಿ ಹಾಗೂ ಕುಶಲವ ಯಕ್ಷಗಾನ ಬಯಲಾಟವನ್ನು ತುಂಬಿದ ಸಭೆ ಆನಂದಿಸಿತು. ವಾಲಿಮೋಕ್ಷ ತಾಳಮದ್ದಲೆಯನ್ನು ನಡೆಸಿಕೊಟ್ಟ ಚಿಣ್ಣರು ಸೃಷ್ಟಿ ದೇವಿ ಆದರ್ಶ. ಸ್ವಸ್ತಿಕ್ ಸೃಜನ್, ಪ್ರಣಮ್ಯ, ದೇವೀಪ್ರಸಾದ, ಶಿಫಾಲಿ, ಧನುಷ್ ಮತ್ತು ಅನನ್ಯಾ. ಗಾನವೈಭವವನ್ನು ಪ್ರಿಯದರ್ಶಿನಿ, ವಿಶ್ವಾಸ್, ಶ್ರೀರಕ್ಷಾ, ಮನೀಷ್, ವಿಘ್ನೇಶ್, ಸವಿನಯ, ಪೂಜಾ ನಡೆಸಿಕೊಟ್ಟರು.
ಎರಡು ಮೂರು ವರುಷಗಳಲ್ಲಿ ಕಲಿತ ಯಕ್ಷಗಾನದ ವಿವಿಧ ಪ್ರಕಾರಗಳನ್ನು ಪ್ರದರ್ಶೀಸಿದ ಎಳೆಯರು ಯಕ್ಷಗಾನದ ಭವಿತವ್ಯದ ಭರವಸೆಗೆ ಸಾಕ್ಷಿಗಳಾದರು.
ಪರಂಪರೆಯ ನಾಟ್ಯಗಳನ್ನು ಪ್ರದರ್ಶಿಸುವ ಏಕೈಕ ಮಕ್ಕಳ ಯಕ್ಷಗಾನ ಮೇಳವಾಗಿ ಗುರುತಿಸಿಕೊಂಡಿರುವ ಕಟೀಲಿನ ಶ್ರೀ ದುರ್ಗಾ ಮಕ್ಕಳ ಮೇಳದ ಕಲಾಪರ್ವದ ಸಭಾಕಾರ್ಯಕ್ರಮದಲ್ಲಿ ಸಾಧಕ ಕಲಾವಿದರಿಗೆ ಸಂಮಾನ, ಗುರುವಂದನೆ, ಪ್ರಶಸ್ತಿ ಪತ್ರ ವಿತರಣೆ ನಡೆಯಿತು.
Kateel-05111802 Kateel-05111803 Kateel-05111804 Kateel-05111805 Kateel-05111806 Kateel-05111807 Kateel-05111808 Kateel-05111809 Kateel-051118010 Kateel-051118011

Comments

comments

Comments are closed.

Read previous post:
Kateel-05111801
ಶ್ರೀ ದುರ್ಗಾ ಮಕ್ಕಳ ಮೇಳದ ಪ್ರಶಸ್ತಿ

ಕಟೀಲು:  ಶ್ರೀ ದುರ್ಗಾ ಮಕ್ಕಳ ಮೇಳದ ದಶಮ ವಾರ್ಷಿಕ ಕಲಾಪರ್ವದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ  ಎಸ್. ಸಂಜೀವ ಬಳೆಗಾರ ಇವರಿಗೆ ಶ್ರೀ ದುರ್ಗಾ ಮಕ್ಕಳ ಮೇಳದ ಪ್ರಶಸ್ತಿ,...

Close