ಶ್ರೀ ದುರ್ಗಾ ಮಕ್ಕಳ ಮೇಳದ ಪ್ರಶಸ್ತಿ

ಕಟೀಲು:  ಶ್ರೀ ದುರ್ಗಾ ಮಕ್ಕಳ ಮೇಳದ ದಶಮ ವಾರ್ಷಿಕ ಕಲಾಪರ್ವದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ  ಎಸ್. ಸಂಜೀವ ಬಳೆಗಾರ ಇವರಿಗೆ ಶ್ರೀ ದುರ್ಗಾ ಮಕ್ಕಳ ಮೇಳದ ಪ್ರಶಸ್ತಿ, ಪಾತಾಳ ವೆಂಕಟರಮಣ ಭಟ್ಟರಿಗೆ ಕಟೀಲು ಸದಾನಂದ ಆಸ್ರಣ್ಣ ಪ್ರಶಸ್ತಿ, ಪೆರುವೋಡಿ ನಾರಾಯಣ ಭಟ್ಟರಿಗೆ ಕಟೀಲು ಕೃಷ್ಣ ಆಸ್ರಣ್ಣ ಪ್ರಶಸ್ತಿ ಹಾಗೂ ದುರ್ಗಾಪ್ರಸಾದ ದಿವಾಣರಿಗೆ ಶ್ರೀನಿಧಿ ಆಸ್ರಣ್ಣ ಪ್ರಶಸ್ತಿ ನೀಡಿ ಸಂಮಾನಿಸಲಾಯಿತು. ಆದಿಚುಂಚನಗಿರಿ ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಶಾಸಕ ಉಮಾನಾಥ ಕೋಟ್ಯಾನ್, ಕಟೀಲು ದೇಗುಲದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಸನತ್ ಕುಮಾರ ಶೆಟ್ಟಿ, ಪ್ರದ್ಯುಮ್ನ ರಾವ್, ಸೌಂದರ್ಯ ರಮೇಶ್, ಗಿರೀಶ್ ಶೆಟ್ಟಿ ಪೆರ್ಮುದೆ, ವಿನೋದ್ ಕುಮಾರ್ ಎಲ್, ಯಾದವ ಕೋಟ್ಯಾನ್, ಎಚ್. ವಿಜಯಕುಮಾರ್, ರಾಘವೇಂದ್ರ ಭಟ್, ಕಸ್ತೂರಿ ಪಂಜ, ಕೃಷ್ಣ ಎನ್. ಪೈ, ಸೋಮಪ್ಪ ಅಲಂಗಾರು, ಸರೋಜಿನಿ, ರಾಮಣ್ಣ ಶೆಟ್ಟಿ, ಆಸ್ರಣ್ಣ ಸಹೋದರರು,  ಚಂದ್ರಶೇಖರ ಗಟ್ಟಿ ಮತ್ತಿತರರಿದ್ದರು.

Kateel-05111801

Comments

comments

Comments are closed.

Read previous post:
Mulki-05111801
ಬಪ್ಪನಾಡು: ಸತ್ಸಂಗ ಕಾರ್ಯಕ್ರಮ

ಮೂಲ್ಕಿ: ಜಗತ್ತಿನಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಬಾಳಬೇಕಾದರೆ ಭಗವಂತನ ಶರಣಾಗತಿಯಿಂದ ಮಾತ್ರ ಸಾಧ್ಯ ಎಂದು ಮಂಗಳೂರು ಚಿನ್ಮಯ ಮಿಷನ್‌ನ ಆಚಾರ್ಯರಾದ ಸ್ವಾಮಿ ಅಪರಾಜಿತಾನಂದ ಹೇಳಿದರು. ಮೂಲ್ಕಿ ಶ್ರೀ ಕ್ಷೇತ್ರ...

Close