ಕಿನ್ನಿಗೋಳಿ ಬಿಷಪ್‌ರಿಗೆ ಸನ್ಮಾನ

ಕಿನ್ನಿಗೋಳಿ: ಶಿಕ್ಷಣದಲ್ಲಿ ಸಾಧನೆ ಮಾಡಿದಾಗ ಸಮಾಜದಲ್ಲಿ ಉನ್ನತ ಸ್ಥಾನ ಮಾನ ಲಭ್ಯ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಪೀಟರ್ ಪಾವ್ಲ್ ಸಲ್ಡಾನ್ಹ ಹೇಳಿದರು.
ಕಿನ್ನಿಗೋಳಿ ಚರ್ಚ್ ಸಭಾ ಭವನದಲ್ಲಿ ಕಿನ್ನಿಗೋಳಿ ವಲಯದ ಚರ್ಚ್‌ಗಳ ವತಿಯಿಂದ ಭಾನುವಾರ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭ ವಿವಿಧ ಕೇಂದ್ರದ ಧರ್ಮಗುರುಗಳು ಹಾಗೂ ಚರ್ಚ್ ಸಮಿತಿಯ ಮುಖ್ಯಸ್ಥರು ಸೇರಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಬಿಷಪರಿಗೆ ನೀಡಿ ಗೌರವಿಸಿದರು.
ಕಿನ್ನಿಗೋಳಿ ವಲಯ ಚರ್ಚ್ ವ್ಯಾಪ್ತಿಯ ಫಾ. ವಿಕ್ಟರ್ ಡಿ’ಮೆಲ್ಲೊ ಕಿರೆಂ ಚರ್ಚ್, ರೊನಾಲ್ಡ್ ಕುಟಿನ್ಹಾ ಕಟೀಲ್ ಚರ್ಚ್, ಫಾ. ಮೈಕಲ್ ಡಿ’ಸಿಲ್ವಾ ಬಳ್ಕುಂಜೆ ಚರ್ಚ್, ಫಾ. ಅಸಿಸ್ಸಿ ರೆಬೆಲ್ಲೊ ನೀರುಡೆ ಚರ್ಚ್, ಫಾ. ಅರುಣ್ ಮೆಂಡೊನ್ಸಾ ನೀರುಡೆ ಚರ್ಚ್, ಪಕ್ಷಿಕೆರೆ ಸಂತ ಜೂದರ ಕೇಂದ್ರದ ಫಾ. ಮೆಲ್ವಿನ್ ನೊರೊನ್ಹಾ, ಫಾ. ಗ್ರೆಗೋರಿ ಸೆರಾವೊ, ನಿಡ್ಡೋಡಿ ಚರ್ಚ್, ಎಸ್‌ವಿಡಿ ರೆಕ್ಟರ್ ಫಾ.ಮರ್ವಿನ್ ನೊರೊನ್ಹಾ, ಕಿನ್ನಿಗೋಳಿ ಚರ್ಚ್‌ನ ಸಹಾಯಕ ಧರ್ಮಗರು ಫಾ.ರೂಪೇಶ್ ತಾವ್ರೊ, ಭಗಿನಿ ಲಿಡಿಯಾ ಕಿನ್ನಿಗೋಳಿ, ಭಗಿನಿ ಕ್ರಿಸ್ಟೆಲ್ಲಾ ಕಿರೆಂ, ಭಗಿನಿ ಎಮ್‌ಜ಼ೆನಿಟಾ ಬಳ್ಕುಂಜೆ, ಭಗಿನಿ ಸೆವೆರಿನ್ ಫೆರ್ನಾಂಡಿಸ್ ನಿಡ್ಡೋಡಿ, ಭಗಿನಿ ಲೂಸಿ ನೀರುಡೆ, ಭಗಿನಿ ಮಾರ್ಗರೇಟ್ ಪಕ್ಷಿಕೆರೆ, ವಿವಿಧ ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶೈಲಾ ಸಿಕ್ವೇರಾ ಕಿನ್ನಿಗೋಳಿ, ಬರ್ಟನ್ ಸಿಕ್ವೇರಾ ಕಿರೆಂ, ನೆಲ್ಸನ್ ಲೋಬೊ ಬಳ್ಕುಂಜೆ, ಫಿಲಿಪ್ ಡಿ’ಸಿಲ್ವಾ ನಿಡ್ಡೋಡಿ, ಫೆಲಿಕ್ಸ್ ಪಿಂಟೊ ನೀರುಡೆ, ಆಂಡ್ರ್ಯೂ ಮಿಸ್ಕಿತ್ ಕಟೀಲ್, ಜ್ಯಾಕ್ಸನ್ ಸಲ್ಡಾನ್ಹ ಪಕ್ಷಿಕೆರೆ ಮತ್ತಿತರರು ಉಪಸ್ಥಿತರಿದ್ದರು.
ಕಿನ್ನಿಗೋಳಿ ಚರ್ಚ್ ಪ್ರಧಾನ ಧರ್ಮಗುರು ರೆ.ಫಾ. ಮಾಥ್ಯು ವಾಸ್ ಸ್ವಾಗತಿಸಿದರು. ಡಾ. ಜೋನ್ ಕ್ಲಾರೆನ್ಸ್ ಮಿರಾಂದ ಕಾರ್ಯಕ್ರಮ ನಿರೂಪಿಸಿದರು.

Kinnigoli-07111804

Comments

comments

Comments are closed.

Read previous post:
Kinnigoli-07111803
ಮೆನ್ನಬೆಟ್ಟು ಆರೋಗ್ಯ ಶಿಬಿರ

ಕಿನ್ನಿಗೋಳಿ: ಆರೋಗ್ಯದ ರಕ್ಷಣೆ ಬಗ್ಗೆ ನಾವೇ ಮುಂಜಾಗ್ರತೆ ವಹಿಸಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಬೇಕು. ಗ್ರಾಮೀಣ ಜನರಿಗಾಗಿ ಸಂಘ ಸಂಸ್ಥೆಗಳು ಇಂತಹ ಶಿಬಿರಗಳನ್ನು ಆಯೋಜಿಸಿದಾಗ ಜನರು ಇದರ ಸದುಪಯೋಗ...

Close