ಕಟೀಲು : ಮಾಂಜದಲ್ಲಿ ಗೋಪೂಜೆ

ಕಿನ್ನಿಗೋಳಿ: ಭಾರತದಲ್ಲಿ ಗೋವುಗಳಿಗೆ ವಿಶೇಷ ಮಹತ್ವವಿದೆ. ಗೋವಿನ ಪೂಜೆಯಿಂದ ಸನಾತನ ಸಂಸ್ಕ್ರತಿ ಜಾಗೃತಿಯಾಗುತ್ತದೆ. ಎಂದು ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಮಲ್ಲಿಗೆಯಂಗಡಿ ಸಮೀಪದ ಮಾಂಜ ಗೋಶಾಲೆಯಲ್ಲಿ ಬುಧವಾರ ಕಿನ್ನಿಗೋಳಿಯ ಸಜ್ಜನ ಬಂಧುಗಳ ಸಂಯೋಜನೆಯಲ್ಲಿ ಗೋಪೂಜೆ ಸಂದರ್ಭ ಗೋವುಗಳಿಗೆ ಆರತಿ ಬೆಳಗಿಸಿ ಮಾತನಾಡಿದರು.
ಈ ಸಂದರ್ಭ ಗೋವುಗಳನ್ನು ಉಪಚರಿಸುವ ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಸಂಪ್ರದಾಯ ಪ್ರಕಾರ ಗೋವುಗಳನ್ನು ಪೂಜಿಸಿ ದೋಸೆ, ಅವಲಕ್ಕಿ ಪ್ರಸಾದ ನೀಡಲಾಯಿತು.
ಈ ಸಂದರ್ಭ ಕಟೀಲು ದೇವಳ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ, ಕಟೀಲು ದೇವಳ ಆಡಳಿತ ಮೊಕ್ತೇಸರ ಸನತ್‌ಕುಮಾರ್ ಶೆಟ್ಟಿ, ಸುಧೀರ್ ಶೆಟ್ಟಿ ಕೊಡೆತ್ತೂರು ಗುತ್ತು, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲ್, ದೊಡ್ಡಯ್ಯ ಮೂಲ್ಯ, ಲೋಕಯ್ಯ ಸಾಲಿಯಾನ್, ತಿಮ್ಮಪ್ಪ ಕೋಟ್ಯಾನ್, ಸ್ಟೇನಿ ಪಿಂಟೋ, ಸುಬ್ರಹ್ಮಣ್ಯ ಶಣೈ, ಪ್ರೇಮ್ ರಾಜ್ ಕೊಡೆತ್ತೂರು, ಪ್ರಕಾಶ್ ಆಚಾರ್ಯ ಕಿನ್ನಿಗೋಳಿ, ದೇವದಾಸ್ ಮಲ್ಯ, ರಾಘವೇಂದ್ರ ರಾವ್, ಮಿಥುನ್ ಉಡುಪ ಮತ್ತಿತರರು ಉಪಸ್ಥಿತರಿದ್ದರು.

Kinnigoli-071118011

Comments

comments

Comments are closed.

Read previous post:
Kinnigoli-071118010
ಮುಲ್ಕಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಗೋಪೂಜೆ

ಕಿನ್ನಿಗೋಳಿ: ಗ್ರಾಮೀಣ ಭಾಗದ ಜನರು ಗೋವುಗಳ ಸಾಕಣಿಕೆಯನ್ನು ತಮ್ಮ ಜೀವನದ ಅವಿಬಾಜ್ಯ ಅಂಗವನ್ನಾಗಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಲಿಗೆ ಬೆಂಬಲ ಬೆಲೆ ಫೋಷಿಸಿ ರೈತರು ಹೈನುಗಾರರನ್ನು ಪ್ರೋತ್ಸಾಹಿಸಿದ್ದಾರೆ,...

Close