ಕಿರೆಂ ಆರೋಗ್ಯ ತಪಾಸಣಾ ಶಿಬಿರ

ಕಿನ್ನಿಗೋಳಿ: ರೆಮೆದಿ ಅಮ್ಮನವರ ಧರ್ಮ ಕೇಂದ್ರ ಕಿರೆಂ ದಾಮಸ್ಕಟ್ಟೆ, ಭಾರತೀಯ ಕೆಥೋಲಿಕ್ ಯುವ ಸಂಚಲನ ಹಾಗೂ ಕೆಥೋಲಿಕ್ ಸಭಾ ಕಿರೆಂ ಘಟಕ ಇವರ ಮುಂದಾಳತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಫಾದರ್ ಮುಲ್ಲರ್ಸ್ ಆಸ್ಪತ್ರೆ ಮಂಗಳೂರು ಇವರ ವತಿಯಿಂದ ಕಿರೆಂ ಚರ್ಚ್ ಸಭಾ ಭವನದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಭಾನುವಾರ ಕಿರೆಂ ಚರ್ಚ್ ಧರ್ಮ ಗುರು ಫಾ. ವಿಕ್ಟರ್ ಡಿಮೆಲ್ಲೋ ಉದ್ಘಾಟಿಸಿದರು. ಈ ಸಂದರ್ಭ ಕಿರೆಂ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಬರ್ಟನ್ ಸಿಕ್ವೇರ, ಕಾರ್ಯದರ್ಶಿ ಅನಿತಾ ಡಿಸೋಜ, ಎಚ್.ಡಿ.ಎಫ್.ಸಿ ಬ್ಯಾಂಕ್ ಪ್ರಬಂಧಕ ಪ್ರಸನ್ನ ಕುಮಾರ್, ಕ್ಯಾಥೋಲಿಕ್ ಸಭಾ ಕಿರೆಂ ಘಟಕದ ಅನಿತಾ ಪೆರ್ನಾಂಡೀಸ್, ಐಸಿವೈಎಂ ಅಧ್ಯಕ್ಷ ನೈಜಿಲ್ ರೋಡ್ರಿಗಸ್, ಫಾದರ್ ಮುಲ್ಲರ್ಸ್ ಮಾರ್ಕೆಟಿಂಗ್ ಮ್ಯಾನೇಜರ್ ಡಾ. ಮನೋ ಮ್ಯಾಥ್ಯೂ, ಪ್ರಶಾಂತ್ ಆಚಾರ್ಯ, ಸಹಾಯಕ ಧರ್ಮಗುರು ಜಯಪ್ರಕಾಶ್ ಲೋಭೊ, ಸಂತಾನ್ ಡಿಸೋಜ, ಮತ್ತಿತರರು ಉಪಸ್ಥಿತರಿದ್ದರು.

Kinnigoli-07111806

Comments

comments

Comments are closed.

Read previous post:
Kinnigoli-07111805
ಕಿನ್ನಿಗೋಳಿ ಮಾರುಕಟ್ಟೆ : ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ: ಸ್ವಚ್ಚ ಭಾರತ, ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆ. ಗಾಂಜಿಯವರ ಕನಸಿಗೆ ಪೂರಕವಾಗಿ ಪ್ರಧಾನಿಯವರು ಸ್ವಚ್ಚ ಭಾರತಕ್ಕೆ ಕರೆ ನೀಡಿದ್ದಾರೆ. ಎಲ್ಲಾ ಕೆಲಸಗಳನ್ನು ಸರಕಾರ ಮಾಡಲು ಸಾಧ್ಯವಿಲ್ಲ...

Close