ಕಟೀಲು ಕನ್ನಡ ರಾಜ್ಯೋತ್ಸವ

ಕಿನ್ನಿಗೋಳಿ : ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಇರಲಿ. ಕನ್ನಡ ಸಾಹಿತ್ಯದ ಓದುವಿಕೆ ನಿರಂತರವಾಗಬೇಕು ಎಂದು ಖ್ಯಾತ ಕವಿ ಬಿ. ಆರ್. ಲಕ್ಷ್ಮಣ ರಾವ್ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸರಸ್ವತೀ ಸದನದಲ್ಲಿ ಕಟೀಲು ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ ಹಾಗೂ ಹಳೆವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವ, ಕನ್ನಡದ ಕವಿಗಳೊಂದಿಗೆ ಸವಿ ಸಮಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಸಣ್ಣವರಿದ್ದಾಗ ಸಾಹಿತ್ಯ ಓದಿ, ಸಾಹಿತಿಗಳನ್ನು ಕಂಡು ಸ್ಪೂರ್ತಿಗೊಂಡು, ಸಣ್ಣಪುಟ್ಟ ಕವನ ಕಥೆ ಬರಹಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸುತ್ತಾ ಬೆಳೆದವರು. ಸಿನಿಮಾ ಗೀತೆಗಳು ಅಲ್ಲದೆ, ಖ್ಯಾತ ಗಾಯಕರು ತನ್ನ ನೂರಾರು ಕವನಗಳನ್ನು ಹಾಡಿದ್ದು, ಸಿಡಿಗಳಾಗಿವೆ. ನೀವೂ ಬರೆಯಲು ಆರಂಭಿಸಿ ಎಂದು ಮಕ್ಕಳಿಗೆ ಪ್ರೇರಣೆ ನೀಡಿದರು.
ಚುಟುಕು ಕವಿ ಎಚ್. ದುಂಡಿರಾಜ್ ಮಾತನಾಡಿ ಬರೆಯಬೇಕೆಂಬ ಪ್ರೇರಣೆ ಬಂದಾಗ ಬರೆಯಿರಿ. ನೀವೂ ಬೆಳೆಯುತ್ತೀರಿ. ಗ್ರಾಮೀಣ ಪ್ರದೇಶದ ಇಂತಹ ಶಾಲೆ, ಮಕ್ಕಳನ್ನು ಕಂಡಾಗ ಕನ್ನಡದ ಬಗ್ಗೆ ಆತಂಕ ಪಡಬೇಕಿಲ್ಲ ಎಂದರು.
ಮತ್ತೋರ್ವ ಕವಯತ್ರಿ ನಂದಿನೀ ಹೆದ್ದುರ‍್ಗ ಮಾತನಾಡಿ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ಸಿಕ್ಕಿದ್ದ ಹಾದಿ ಕಾವ್ಯ, ಅದರಿಂದ ನೆಮ್ಮದಿ ಖುಷಿ ಇದೆ ಎಂದರು.
ಕಟೀಲು ದೇಗುಲದ ಆನುವಂಶಿಕ ಮೊಕ್ತೇಸರ ಸನತ್ ಕುಮಾರ ಶೆಟ್ಟಿ ಪುಸ್ತಕದ ಮರದಿಂದ ಸಾಹಿತಿಗಳ ಕೃತಿಗಳನ್ನು ಆಯ್ದು, ಮಕ್ಕಳಿಗೆ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಸಾಹಿತಿಗಳನ್ನು ಸನ್ಮಾನಿಸಿದರು.
ಸುರ್ ಶೆಟ್ಟಿ ಕೊಡೆತ್ತೂರುಗುತ್ತು, ಲೋಕಯ್ಯ ಸಾಲ್ಯಾನ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶ್ರವಣ್ ಉಡುಪ, ಅವಿನಾಶ್, ವೈಶಾಲಿ ಸಾಹಿತಿಗಳ ಪರಿಚಯ ಮಾಡಿದರು.
ಸಾಹಿತಗಳ ಹೆಸರು ಬರೆಯುವ ಸ್ಪರ್ಧಾ ವಿಜೇತರಿಗೆ ಕವಿಗಳ ಹಸ್ತಾಕ್ಷರ ಸಹಿತದ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. ಪದವೀಪೂರ್ವ ಕಾಲೇಜು ಪ್ರಿನ್ಸಿಪಾಲ್ ವನಿತಾ ಜೋಷಿ ಸ್ವಾಗತಿಸಿದರು. ವೈಸ್ ಪ್ರಿನ್ಸಿಪಾಲ್ ಸೋಮಪ್ಪ ಅಲಂಗಾರು ವಂದಿಸಿದರು. ಉಪನ್ಯಾಸಕಿ ಶೈಲಜಾ ದಿವಾಕರ್, ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿನಿಯರಾದ ಸ್ವಾತಿ, ಚೈತನ್ಯ, ಶ್ರೀವಲ್ಲಿ, ಅಂಕಿತಾ, ವೈಷ್ಣವಿ, ಗ್ರೀಷ್ಮಾ, ಅಭಿಷೇಕ್ ಕವಿಗಳ ಹಾಡುಗಳನ್ನು ಹಾಡಿದರು.

ತಮ್ಮ ಕವನಗಳನ್ನು ಹಾಡಿದ ವಿದ್ಯಾರ್ಥಿನಿಯರಾದ ಸ್ವಾತಿ, ಚೈತನ್ಯ, ಶ್ರೀವಲ್ಲಿ, ಅಂಕಿತಾ, ವೈಷ್ಣವಿ, ಗ್ರೀಷ್ಮಾ ಬಗ್ಗೆ ಮೆಚ್ಚುಗೆಯ ಮಾತಗಳನ್ನಾಡಿದ ಬಿ. ಆರ್. ಲಕ್ಷ್ಮಣ್ ರಾವ್, ಶಿವಮೊಗ್ಗ ಸುಬ್ಬಣ್ಣ ಇದ್ದರೆ ಆನಂದಿಸುತ್ತಿದ್ದರು. ತನ್ನ ನಿರ್ದೇಶನದಲ್ಲಿ ಮಾಡಿದ ಹಾಡನ್ನು ಹಾಡಿರುವುದನ್ನು ಕೇಳಿ. ಅಮ್ಮಾ ನಿನ್ನ ಮಡಿಲಲ್ಲಿ ಹಾಡನ್ನು ಬಿ. ಆರ್. ಛಾಯಾರನ್ನು ಕರೆಸಿ ಕೇಳಿಸುವಷ್ಟು ಚಂದ ಹಾಡಿದ್ದೀರಿ ಎಂದು ಶ್ಲಾಘಿಸಿದಾಗ ವಿದ್ಯಾರ್ಥಿಗಳ ಮುಖದಲ್ಲಿ ಸಂಭ್ರಮ. ಆರನೇ ಕ್ಲಾಸಿನಲ್ಲಿ ಬೇಸಗೆ ಅಂತ ಒಂದು ಪದ್ಯ ಇದೆಯಲ್ಲ ಅಂದಾಗ ಹೌದು ಎಂದು ವಿದ್ಯಾರ್ಥಿಗಳು. ಅದು ಬರೆದವರು ಯಾರು ಎಂದು ಕೇಳಿದಾಗ ಲಕ್ಷ್ಮಣ ರಾವ್ ಎಂದುತ್ತರ ವಿದ್ಯಾರ್ಥಿಗಳಿಂದ. ಅದು ನಾನೇ ಎಂದು ಮತ್ತೆ ಅವರು ಹೇಳಿದಾಗ ಮಕ್ಕಳಿಂದ ಖುಷಿಯ ಕರತಾಡನ.

Kinnigoli-07111809

Comments

comments

Comments are closed.

Read previous post:
Kinnigoli-07111808
ಕೆಮ್ರಾಲ್ ಭೋಜ ರಾವ್

ಕಿನ್ನಿಗೋಳಿ: ಕುಸ್ತಿಪಟುವಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದ ಅಜೇಯ ಹುಲಿ ಭೋಜ ರಾವ್ ( 85 ವರ್ಷ) ಶನಿವಾರ ತಡ ರಾತ್ರಿ ನಿಧನರಾದರು. ಕಿನ್ನಿಗೋಳಿ ಸಮೀಪದ ಕೆಮ್ರಾಲ್ ನಿವಾಸಿಯಾಗಿದ್ದು ಕೆಮ್ರಾಲ್ ಗ್ರಾಮ...

Close