ಕೆಮ್ರಾಲ್ ಭೋಜ ರಾವ್

ಕಿನ್ನಿಗೋಳಿ: ಕುಸ್ತಿಪಟುವಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದ ಅಜೇಯ ಹುಲಿ ಭೋಜ ರಾವ್ ( 85 ವರ್ಷ) ಶನಿವಾರ ತಡ ರಾತ್ರಿ ನಿಧನರಾದರು. ಕಿನ್ನಿಗೋಳಿ ಸಮೀಪದ ಕೆಮ್ರಾಲ್ ನಿವಾಸಿಯಾಗಿದ್ದು ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಅವರು ಮೈಸೂರು ಮತ್ತಿತರ ಕಡೆಗಳಲ್ಲಿ ಅನೇಕ ಕುಸ್ತಿಪಂದ್ಯಾಟಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದರು. ಕುಸ್ತಿ ಪಂದ್ಯಾಟದಲ್ಲಿ ಸೋಲನ್ನೇ ಕಾಣದ್ದ ಇವರಿಗೆ ಅಜೇಯ ಹುಲಿ ಬಿರುದು ನೀಡಲಾಗಿತ್ತು. ಕೃಷಿಕರಾಗಿ, ಸಮಾಜ ಸೇವಕರಾಗಿ ಕೊಯಮತ್ತೂರಿನಲ್ಲಿ ಹೊಟೇಲು ಉದ್ಯಮಿಯಾಗಿ ಪ್ರಸಿದ್ದರಾಗಿದ್ದರು, ಕೊಯಮುತ್ತೂರಿನಲ್ಲಿ ಹೋಟೇಲ್ ಉದ್ಯಮಿಯಾಗಿದ್ದ ಸಂದರ್ಭ ಹಲವು ಅನಾಥ ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಂಡು ಸಾಕಿ ಸಲಹಿ ಅವರಿಗೆ ಮದುವೆಯನ್ನು ಮಾಡಿದ್ದರು, ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದುಕೊಂಡು ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಇವರ ಈ ಸಾಧನೆಗೆ ಅನೇಕ ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ.

Kinnigoli-07111808

Comments

comments

Comments are closed.

Read previous post:
Kinnigoli-07111807
ಗಜಾನನ ಆಚಾರ್ಯ ಆಯ್ಕೆ

ಕಿನ್ನಿಗೋಳಿ: ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ (ರಿ) ಹರಿಪಾದ ಪಕ್ಷಿಕೆರೆ ಇದರ ನೂತನ ಅಧ್ಯಕ್ಷರಾಗಿ ಗಜಾನನ ಆಚಾರ್ಯ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ರವಿಚಂದ್ರ ಹರಿಪಾದೆ ಕಾರ್ಯದರ್ಶಿ ಸನತ್ ಪೂಜಾರಿ ಉಪಕಾರ್ಯದರ್ಶಿ...

Close