ಕಿನ್ನಿಗೋಳಿ ಮಾರುಕಟ್ಟೆ : ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ: ಸ್ವಚ್ಚ ಭಾರತ, ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆ. ಗಾಂಜಿಯವರ ಕನಸಿಗೆ ಪೂರಕವಾಗಿ ಪ್ರಧಾನಿಯವರು ಸ್ವಚ್ಚ ಭಾರತಕ್ಕೆ ಕರೆ ನೀಡಿದ್ದಾರೆ. ಎಲ್ಲಾ ಕೆಲಸಗಳನ್ನು ಸರಕಾರ ಮಾಡಲು ಸಾಧ್ಯವಿಲ್ಲ ನಾವು ಸರಕಾರದೊಂಡಿಗೆ ಕೈ ಜೋಡಿಸಿದಾಗ ಸಮಾಜದ ಅಭಿವೃದ್ಧಿ ಸುಲಲಿತವಾಗುತ್ತದೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು
ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ಮಂಡಳಿ ಹೈದರಾಬಾದ್ ಮತ್ತು ಮೀನುಗಾರಿಕಾ ಇಲಾಖೆಯ ನೆರವಿನೊಂದಿಗೆ ಕಿನ್ನಿಗೋಳಿಯ ಮೀನು ಮಾರುಕಟ್ಟೆಯಲ್ಲಿ ಸೋಮವಾರ ಆಯೋಜಿಸಲಾದ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೋಳ್ಳೂರು ಮಾತನಾಡಿ ಸ್ವಚ್ಚತೆ ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು ನಮ್ಮ ಪರಿಸರ ಸ್ವಚ್ಚವಾಗಿದ್ದರೆ ದೇಶ ಸ್ವಚ್ಚವಾದದಂತೆ ಎಂದರು.
ಈ ಸಂದರ್ಭ ಸ್ವಚ್ಚತೆಯ ಬಗ್ಗೆ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಕಿನ್ನಿಗೋಳಿ ಮಾರುಕಟ್ಟೆಯ ಎಲ್ಲಾ ಮೀನುಗಾರರಿಗೆ ಸ್ವಚ್ಚತೆಯ ದೃಷ್ಟಿಯಿಂದ ಬಕೆಟ್‌ಗಳನ್ನು ವಿತರಿಸಲಾಯಿತು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ, ಪಂಚಾಯಿತಿ ಅಭಿವೃದ್ದಿ ಅಕಾರಿ ಅರುಣ್ ಪ್ರದೀಪ್ ಡಿಸೋಜ, ಮೀನುಗಾರಿಕಾ ನಿಗಮದ ಪಿ.ಎಂ ಮುದ್ದಣ್ಣ, ಶಿವಪ್ಪ ಮತ್ತಿತರರು ಉಪಸ್ಥಿತರಿದ್ದರು.
ಮೀನುಗಾರಿಕಾ ನಿಗಮದ ವ್ಯವಸ್ಥಾಪಕ ನಿರ್ದೇಶಕ ದೊಡ್ದಮನಿ ಸ್ವಾಗತಿಸಿದರು. ಮುದ್ದಣ್ಣ ಪ್ರಸ್ತಾವನೆಗೈದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-07111805

Comments

comments

Comments are closed.

Read previous post:
Kinnigoli-07111804
ಕಿನ್ನಿಗೋಳಿ ಬಿಷಪ್‌ರಿಗೆ ಸನ್ಮಾನ

ಕಿನ್ನಿಗೋಳಿ: ಶಿಕ್ಷಣದಲ್ಲಿ ಸಾಧನೆ ಮಾಡಿದಾಗ ಸಮಾಜದಲ್ಲಿ ಉನ್ನತ ಸ್ಥಾನ ಮಾನ ಲಭ್ಯ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಪೀಟರ್ ಪಾವ್ಲ್ ಸಲ್ಡಾನ್ಹ ಹೇಳಿದರು. ಕಿನ್ನಿಗೋಳಿ ಚರ್ಚ್ ಸಭಾ...

Close