ಮೆನ್ನಬೆಟ್ಟು ಆರೋಗ್ಯ ಶಿಬಿರ

ಕಿನ್ನಿಗೋಳಿ: ಆರೋಗ್ಯದ ರಕ್ಷಣೆ ಬಗ್ಗೆ ನಾವೇ ಮುಂಜಾಗ್ರತೆ ವಹಿಸಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಬೇಕು. ಗ್ರಾಮೀಣ ಜನರಿಗಾಗಿ ಸಂಘ ಸಂಸ್ಥೆಗಳು ಇಂತಹ ಶಿಬಿರಗಳನ್ನು ಆಯೋಜಿಸಿದಾಗ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಹೇಳಿದರು.
ಆಲ್ ಕಾರ್ಗೋ ಲಾಜೆಸ್ಟಿಕ್ ಲಿಮಿಟೆಡ್ ಮಂಗಳೂರು, ಪ್ರಜ್ಞಾ ಸಲಹಾ ಕೇಂದ್ರ ಮಂಗಳೂರು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ, ಬ್ರಾಮರಿ ಮಹಿಳಾ ಸಮಾಜ ಮೆನ್ನಬೆಟ್ಟು ಹಾಗೂ ಕೆಎಂಸಿ ಆಸ್ಪತ್ರೆಅತ್ತಾವರ ಮಂಗಳೂರು ಸಹಯೋಗದೊಂದಿಗೆ ಭಾನುವಾರ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಆಲ್ ಕಾರ್ಗೋ ಲಾಜೆಸ್ಟಿಕ್ ಲಿಮಿಟೆಡ್ ಕಾರ್ಯನಿರ್ವಹಣಾಕಾರಿ ಸವಿಸ್ತಾರ್ ಆಳ್ವ, ಪ್ರಜ್ಞಾ ಸಲಹಾ ಕೇಂದ್ರದ ರೇಶ್ಮಾ, ಬ್ರಾಮರಿ ಮಹಿಳಾ ಸಮಾಜ ಅಧ್ಯಕ್ಷೆ ರೇವತಿ ಪುರುಷೋತ್ತಮ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯರಾದ ದಾಮೋದರ ಶೆಟ್ಟಿ, ಬೇಬಿ, ಲಕ್ಷ್ಮೀ, ಮೀನಾಕ್ಷಿ, ಶಿಬಿರ ಸಂಯೋಜನಾಕಾರಿ ಹರ್ಬಟ್ ಉಪಸ್ಥಿತರಿದ್ದರು.
ನಿರ್ಮಲಾ ಸ್ವಾಗತಿಸಿದರು, ಪ್ರದೀಪ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Kinnigoli-07111803

Comments

comments

Comments are closed.

Read previous post:
Kinnigoli-07111802
ಯಕ್ಷಗಾನ ತರಬೇತಿ ಕಾರ್ಯಗಾರ ಸಮಾರೋಪ

ಕಿನ್ನಿಗೋಳಿ: ಶ್ರೀ ವಿನಾಯಕ ಯಕ್ಷಗಾನ ತಂಡ ಮಕ್ಕಳ ಮೇಳ ಕೆರೆಕಾಡು ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಆಶ್ರಯದಲ್ಲಿ ನಡೆದ ಯಕ್ಷಗಾನ ತರಬೇತಿ ಕಾರ್ಯಗಾರದ ಸಮಾರೋಪ...

Close