ಮುಲ್ಕಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಗೋಪೂಜೆ

ಕಿನ್ನಿಗೋಳಿ: ಗ್ರಾಮೀಣ ಭಾಗದ ಜನರು ಗೋವುಗಳ ಸಾಕಣಿಕೆಯನ್ನು ತಮ್ಮ ಜೀವನದ ಅವಿಬಾಜ್ಯ ಅಂಗವನ್ನಾಗಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಲಿಗೆ ಬೆಂಬಲ ಬೆಲೆ ಫೋಷಿಸಿ ರೈತರು ಹೈನುಗಾರರನ್ನು ಪ್ರೋತ್ಸಾಹಿಸಿದ್ದಾರೆ, ಮಕ್ಕಳ ಅಪೌಷ್ಟಿಕತೆ ನೀಗಲು ಶಾಲೆಗಳಲ್ಲಿ ಹಾಲು ಭಾಗ್ಯವನ್ನು ನೀಡಲಾಯಿತು ಎಂದು ಮಾಜಿ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು
ಮುಲ್ಕಿ ಬ್ಲಾಕ್ ಕಾಂಗ್ರೇಸ್ ಹಾಗೂ ಮಹಿಳಾ ಘಟಕದ ವತಿಯಿಂದ ಪಟ್ಟೆ ಜಾರಂದಾಯ ಭಂಡಾರ ಸಾನದ ಉಜ್ಜು ಪೂಜಾರಿ ಅವರ ಮನೆಯಲ್ಲಿ ಮಂಗಳವಾರ ಗೋಪೂಜೆ ನೆರವೇಸಿ ಮಾತನಾಡಿದರು.
ಈ ಸಂದರ್ಭ ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು, ದ.ಕ. ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ ಪಾಣಾರ್ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯ ವಸಂತ ಬೆರ್ನಾಡ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಐಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಂದರಿ, ಸಾಮಾಜಿಕ ಕಾರ್ಯಕರ್ತೆ ನಂದಾ ಪಾಯಸ್, ನಾರಾಯಣ ಅಂಚನ್, ವಂಸತ್, ಪದ್ಮಿನಿ ವಸಂತ್, ಸುಧಾಕರ ಸಾಲ್ಯಾನ್, ಪಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ವಿನೋದ, ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-071118010

Comments

comments

Comments are closed.

Read previous post:
Kinnigoli-07111809
ಕಟೀಲು ಕನ್ನಡ ರಾಜ್ಯೋತ್ಸವ

ಕಿನ್ನಿಗೋಳಿ : ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಇರಲಿ. ಕನ್ನಡ ಸಾಹಿತ್ಯದ ಓದುವಿಕೆ ನಿರಂತರವಾಗಬೇಕು ಎಂದು ಖ್ಯಾತ ಕವಿ ಬಿ. ಆರ್. ಲಕ್ಷ್ಮಣ ರಾವ್ ಹೇಳಿದರು. ಕಟೀಲು ಶ್ರೀ...

Close