ಕಿನ್ನಿಗೋಳಿ : ಗೂಡುದೀಪ ಸರ್ಧೆ

ಕಿನ್ನಿಗೋಳಿ : ಭಾರತೀಯ ಸಂಸ್ಕ್ರತಿ ಸಂಸ್ಕಾರ ಹಬ್ಬಹರಿದಿನಗಳ ಆಚಾರ ವಿಚಾರಗಳನ್ನು ಯುವ ಜನಾಂಗಕ್ಕೆ ತಿಳಿ ಹೇಳುವ ಕಾರ್ಯ ಹಿರಿಯರು ಹಾಗೂ ಸಂಘ ಸಂಸ್ಥೆಗಳಿಂದಾಗಬೇಕು ಎಂದು ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.
ಯುಗಪುರುಷ ಕಿನ್ನಿಗೋಳಿ, ಲಯನ್ಸ್ ಕ್ಲಬ್ ಕಿನ್ನಿಗೋಳಿ, ಲಯನೆಸ್ ಕ್ಲಬ್ ಕಿನ್ನಿಗೋಳಿ, ಲಯನ್ಸ್ ಕ್ಲಬ್ ಮುಲ್ಕಿ, ಭ್ರಾಮರೀ ಮಹಿಳಾ ಸಮಾಜ (ರಿ.) ಮೆನ್ನಬೆಟ್ಟು – ಕಿನ್ನಿಗೋಳಿ, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಕಿನ್ನಿಗೋಳಿ, ಯಕ್ಷಲಹರಿ (ರಿ.) ಕಿನ್ನಿಗೋಳಿ, ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಮುಲ್ಕಿ ವಲಯ ಹಾಗೂ ವಿಜಯಾ ಕಲಾವಿದರು ಕಿನ್ನಿಗೋಳಿ ಸಂಸ್ಥೆಗಳ ಸಹಯೋಗದೊಂದಿಗೆ ದೀಪಾವಳಿ ಪ್ರಯುಕ್ತ ಬುಧವಾರ ಯುಗಪುರುಷ ಸಭಾಭವನದಲ್ಲಿ ನಡೆದ ಗೂಡುದೀಪ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಡೋನಿ ಮಿನೇಜಸ್, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಸದಾಶಿವ ಹೊಸದುರ್ಗಾ, ಕಾರ್ಯದರ್ಶಿ ರವೀಂದ್ರ ಶೆಟ್ಟಿ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಕೆ. ಬಿ. ಸುರೇಶ್, ಭ್ರಾಮರಿ ಮಹಿಳಾ ಸಮಾಜದ ಅಧ್ಯಕ್ಷೆ ರೇವತಿ ಪುರುಷೋತ್ತಮ್, ಕಾರ್ಯದರ್ಶಿ ಅನುಷಾ ಕರ್ಕೇರಾ, ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಮುಲ್ಕಿ ವಲಯದ ಅಧ್ಯಕ್ಷ ಪ್ರಕಾಶ್ ಕೊಡ್ಮಾನ್, ಯಕ್ಷಲಹರಿಯ ರಘುನಾಥ್ ಕಾಮತ್ ಕೆಂಚನಕೆರೆ, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಉದಯಕುಮಾರ್ ಆಚಾರ್ಯ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲ್, ರಾಜ್ಯ ಪ್ರಶಸ್ತಿ ಪುರಸ್ಕ್ರತ ಶಂಕರ ಮಾಸ್ಟರ್, ನಮನ, ಯಶವಂತ, ಯೋಗೀಶ್ ರಾವ್, ಶ್ವೇತಾ, ಟೈಲರ‍್ಸ್ ಅಸೋಸಿಯೇಶನ್‌ನ ಶಂಕರ ಕೋಟ್ಯಾನ್, ಮಾಧವ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
ವಿಜಯಾ ಕಲಾವಿದರು ಸಂಸ್ಥೆಯ ಶರತ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ವಿಜೇತರ ವಿವರ:
ಸಾಂಪ್ರದಾಯಿಕ ವಿಭಾಗ-
ಪ್ರಥಮ- ಪದ್ಮರಾಜ್ ಕಾವೂರು,
ದ್ವಿತೀಯ- ರಕ್ಷಿತ್ ಕುಮಾರ್,
ತೃತೀಯ ದಕ್ಷತ್ ಕಟೀಲು,

ಆಧುನಿಕ ವಿಭಾಗ:
ಪ್ರಥಮ- ವಿಠಲ ಭಟ್ ಕಾರ್‌ಸ್ಟ್ರೀಟ್,
ದ್ವಿತೀಯ- ಉದಯ ಕುಮಾರ್
ತೃತೀಯ – ಉಮೇಶ್ ಕಾವೂರು

Kinnigoli-10111801

Comments

comments

Comments are closed.

Read previous post:
Kinnigoli-071118013
ಚಂದ್ರಶೇಖರ ನಾನಿಲ್ ಸನ್ಮಾನ

ಕಿನ್ನಿಗೋಳಿ: ಜೀವನದಲ್ಲಿ ನಿರ್ದಿಷ್ಟ ಗುರಿ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಸಮಾಜಮುಖಿ ಕೆಲಸಗಳೇ ಮಾನವ ಧರ್ಮ ಎಂದು ಉದ್ಯಮಿ ಮಹಾಬಲ ಪೂಜಾರಿ ಕಡಂಬೋಡಿ ಹೇಳಿದರು ದಾಮಸ್ಕಟ್ಟೆಯಲ್ಲಿ...

Close