ಮೂಲ್ಕಿ: 6ನೇ ವರ್ಷ ತುಳುವೆರೆ ತುಡಾರ ಪರ್ಬ

ಮೂಲ್ಕಿ: ಶ್ರೀ ನಾರಾಯಣ ಗುರುಗಳ ತತ್ವ ಆದರ್ಶದಂತೆ ಎಲ್ಲಾ ಸಮಾಜದವರು ಸೇರಿ ನಮ್ಮ ಕರಾವಳಿಯ ಸಂಪ್ರದಾಯದಂತೆ ದೀಪಾವಳಿಯನ್ನು ಆಚರಿಸಿವುದು ಹಾಗೂ ಇದರ ಕ್ರಮಗಳನ್ನು ಯುವ ಸಮಾಜಕ್ಕೆ ತಿಳಿಸುವ ಕಾರ್ಯ ಅಭಿನಂದನೀಯ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲ್ ಹೇಳಿದರು.
ಯುವ ವಾಹಿನಿ ಮೂಲ್ಕಿ ಘಟಕದ ವತಿಯಿಂದ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ 16ನೇ ವರ್ಷದ ತುಳುವೆರೆ ತುಡಾರ ಪರ್ಬದಲ್ಲಿ ತುಳಸಿಕಟ್ಟೆಗೆ ದೀಪ ಬೆಳಗಿ ಬಲೆಕಿ ಮರದ ದೊಂದಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೂಲ್ಕಿ ಕೊಸೆಸಾಂ ಅಮ್ಮನವರ ಚರ್ಚು ಧರ್ಮಗುರುಗಳಾದ ಫಾ. ಸಿಲ್ವೆಸ್ಟರ್ ಡಿಕೋಸ್ಟಾ ಮಾತನಾಡಿ, ದೀಪಾವಳಿ ಬೆಳಕಿನ ಹಾಗೂ ಕೊಡುಗೆಗಳ ಹಬ್ಬ,ಧಾರ್ಮಿಕ ಹಬ್ಬಗಳು ನಮ್ಮ ಹೃದಯದ ಕತ್ತಲೆ ದೂರ ಮಾಡುವ ಮೂಲಕ ಸಾಮರಸ್ಯದ ಬೆಳಕನ್ನು ಕಾಣಬೇಕು, ಭಗವಾನ್ ಏಸು ಕ್ರಿಸ್ತರೂ ಇದನ್ನೇ ಸಾರಿದ್ದಾರೆ. ನಾರಾಯಣ ಗುರುಗಳೂ ಇದೇ ತತ್ವವನ್ನು ತಿಳಿಸಿದಾರೆ ಎಂದರು.
ಹಿರಿಯ ವಾಘ್ಮಿ ಕೊಲ್ನಾಡುಗುತ್ತು ವಿದ್ಯಾಧರ ಶೆಟ್ಟಿ ಮಾತನಾಡಿ, ಹಬ್ಬ ಹರಿದಿನಗಳು ನಮ್ಮನ್ನು ಸಂಘಟಿತರನ್ನಾಗಿಸಿ ಸಂತೋಷ ಪಡುವುದರೊಂದಿಗೆ ಸಂತಸ ಹಂಚುವ ಹಬ್ಬಗಳಾಗಿವೆ ನಮ್ಮ ಪೂರ್ವಿಕರು ಬಿಟ್ಟುಹೊಂದ ಈ ಸತ್ ಸಂಪ್ರದಾಯಗಳನ್ನು ಯುವ ಜನತೆಗೆ ತಿಳಿಸಿ ಬೆಳೆಸುವ ಹೊಣೆ ನಮ್ಮದಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷೆ ಕುಶಲ.ಎಸ್.ಕುಕ್ಯಾನ್ ವಹಿಸಿದ್ದರು.
ಈ ಸಂದರ್ಭ ಹಿರಿಯ ಕೃಷಿಕೆ ರಾಜೀವಿ ಮಾಧವ ಬಂಗೇರ ಕೊಕ್ಕರಕಲ್ ರವರನ್ನು ದೀಪಾವಳಿ ಹಬ್ಬದ ಪ್ರಯುಕ್ತ ಸನ್ಮಾಸಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಂದ್ರಶೇಖರ ನಾನಿಲ್ ರವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಅತಿಥಿಗಳಾಗಿ ಕಿರಿಯ ಕಾನೂನು ಅಧಿಕಾರಿ ಮಮ್ತಾಜ್, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪೀನಾಥ ಪಡಂಗ,ಯುವವಾಹಿನಿ ಮೂಲ್ಕಿ ಘಟಕದ ಕಾರ್ಯದರ್ಶಿ ಚರಿಷ್ಮಾ ಶ್ರೀನಿವಾಸ್,ಕೋಶಾಧಿಕಾರಿ ದಿವಾಕರ ಕೋಟ್ಯಾನ್,ಕಾರ್ಯಕ್ರಮ ಸಂಘಟಕರಾದ ಕಮಲಾಕ್ಷ ಬಡಗು ಹಿತ್ಲು, ವೇದಾವತಿ ಜಯಕುಮಾರ್ ಉಪಸ್ಥಿತರಿದ್ದರು.
ಕುಶಲ.ಎಸ್.ಕುಕ್ಯಾನ್ ಸ್ವಾಗತಿಸಿದರು,ಯೋಗೀಶ್ ಕೋಟ್ಯಾನ್ ಪ್ರಸ್ತಾವಿಸಿದರು, ಮೋಹನ್ ಸುವರ್ಣ ಮತ್ತು ರಿತೇಶ್ ಸನ್ಮಾನ ಪತ್ರ ವಾಚಿಸಿದರು. ನರೇಂದ್ರ ಕೆರೆಕಾಡು ಮತ್ತು ಉದಯ ಅಮೀನ್ ಮಟ್ಟು ನಿರೂಪಿಸಿದರು. ಚರಿಷ್ಮಾ ವಂದಿಸಿದರು.
ಫಲಿತಾಂಶ: ರಂಗೋಲಿ ಸ್ಪರ್ದೆ ಪ್ರಥಮ: ಶರತ್ ಅಡ್ವೆ, ದ್ವಿತೀಯ: ರಿತೇಶ್ ಕಂಕನಾಡಿ, ತೃತೀಯ: ಸಹನಾ ಕರ್ಕೇರಾ ಬಂಟ್ವಾಳ.
ಗೂಡುದೀಪ ಸ್ಪರ್ದೆ: ಪ್ರಥಮ ಆದಿತ್ಯ ಭಟ್ ಮಂಗಳೂರು, ದ್ವಿತೀಯ: ವಿಖ್ಯಾತ್ ಭಟ್ ಮಂಗಳೂರು, ತೃತೀಯ: ದೀಕ್ಷಿತ್ ಮತ್ತು ತಂಡ ಯುವವಾಹಿನಿ ಶಕ್ತಿ ನಗರ ಮತ್ತು ಯೋಗೀಶ್ ಯುವವಾಹಿನಿ ಬಜ್ಪೆ.

Mulki-12111803

Comments

comments

Comments are closed.

Read previous post:
Mulki-12111802
ಸಾಂಘಿಕ ಶಕ್ತಿಯಿಂದ ಸಮಾಜ ಬೆಳೆಯಲಿ

ಪಡುಪಣಂಬೂರು: ಸಮಾಜದ ಸಂಘಟನೆಗಳು ಸಾಂಘಿಕ ಶಕ್ತಿಯಿಂದ ಬೆಳೆದು, ಗ್ರಾಮದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಲು ಪ್ರಯತ್ನ ನಡೆಸಬೇಕು, ನಾರಾಯಣಗುರುಗಳ ಆಶಯವನ್ನು ಪಸರಿಸಲು ಗ್ರಾಮೀಣ ಭಾಗದಲ್ಲಿ ಹೆಚ್ಚು ಆಸಕ್ತಿ...

Close