ಸಾಂಘಿಕ ಶಕ್ತಿಯಿಂದ ಸಮಾಜ ಬೆಳೆಯಲಿ

ಪಡುಪಣಂಬೂರು: ಸಮಾಜದ ಸಂಘಟನೆಗಳು ಸಾಂಘಿಕ ಶಕ್ತಿಯಿಂದ ಬೆಳೆದು, ಗ್ರಾಮದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಲು ಪ್ರಯತ್ನ ನಡೆಸಬೇಕು, ನಾರಾಯಣಗುರುಗಳ ಆಶಯವನ್ನು ಪಸರಿಸಲು ಗ್ರಾಮೀಣ ಭಾಗದಲ್ಲಿ ಹೆಚ್ಚು ಆಸಕ್ತಿ ಮೂಡುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಎಸ್‌ಕೋಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಕರ್ಕೇರ ಹೇಳಿದರು.
ಕೆರೆಕಾಡು ಶ್ರಿ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ನಡೆದ ಕೆರೆಕಾಡು ಗ್ರಾಮ ಸಮಿತಿಯ ಸಭೆಯಲ್ಲಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಬಿಲ್ಲವ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ಅಜಿತ್‌ಕುಮಾರ್ ಮಾತನಾಡಿ, ಯುವಕರ ಯುವಶಕ್ತಿಯನ್ನು ಹಾಗೂ ಮಹಿಳೆಯರ ಸಾಮರ್ಥ್ಯವನ್ನು ಸಂಘಟನಾತ್ಮಕವಾಗಿ ಬೆಳೆಸಲು ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಹಾಗೂ ಸಾಮಾಜಿಕ ಚಟುವಟಿಕೆಯನ್ನು ಪೋಷಿಸಲು ಗುರು ಮಂದಿರದ ಸಂಕಲ್ಪಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯರಾದ ತಿಮ್ಮಪ್ಪ ಕೋಡಿಕಲ್ ಅವರ ಮಾರ್ಗದರ್ಶನದಲ್ಲಿ ಕೆರೆಕಾಡು ಬಿಲ್ಲವರ ಗ್ರಾಮ ಸಮಿತಿಯನ್ನು ರಚಿಸಲಾಯಿತು.
ಮಹಿಳಾ ಸಂಘಟನೆಯ ಬಬಿತಾ ಜೆ. ಸುವರ್ಣ, ಪ್ರಮೀಳಾ ಡಿ. ಸುವರ್ಣ, ಗ್ರಾಮಸ್ಥರಾದ ಲಕ್ಷ್ಮಣ್ ಸಾಲ್ಯಾನ್ ಪುನರೂರು, ಶಿವಾನಂದ ಆರ್. ಕೋಟ್ಯಾನ್, ಪ್ರವೀಣ್ ಕೋಟ್ಯಾನ್, ರವಿಪ್ರಕಾಶ್ ಕೋಟ್ಯಾನ್, ಹೇಮಚಂದ್ರ ಆರ್. ಕೋಟ್ಯಾನ್, ದಿನೇಶ್ ಕೋಟ್ಯಾನ್, ನರೇಂದ್ರ ಕೆರೆಕಾಡು ಮತ್ತಿತರರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಜಿತ್ ಸ್ವಾಗತಿಸಿದರು, ಅಶೋಕ್ ವಂದಿಸಿದರು.

Mulki-12111802

 

Comments

comments

Comments are closed.

Read previous post:
Mulki-12111801
ಐದನೇ ತಲೆಮಾರು ಕಂಡ ಹಿರಿಯ ಜೀವ

 ಮೂಲ್ಕಿ: ಮೂಲ್ಕಿ ಕಾರ್ನಾಡು ಗ್ರಾಮದ ಕೆ.ಎಸ್ ರಾವ್ ನಗರದ 90 ವರ್ಷ ಪ್ರಾಯದ ಕೃಷ್ಣಮ್ಮ ಸುವರ್ಣರು ಐದನೇ ತಲೆಮಾರು ಕಂಡ ಹಿರಿಯ ಧನ್ಯ ಜೀವಿಯಾಗಿದ್ದಾರೆ. ಅವರ ಮಗಳು ಪುಷ್ಪ...

Close