ಸ್ಮರಣಾರ್ಥ ವೃತ್ತ, ಐಮಾಸ್ಟ್ ದೀಪ ಉದ್ಘಾಟನೆ

ಕಿನ್ನಿಗೋಳಿ: ಯಾವುದೇ ವ್ಯಕ್ತಿ ಮೃತರಾದ ಮೇಲೆ ಸ್ವಲ್ಪ ದಿನ ಮಾತ್ರ ನೆನಪು ಇರುತ್ತದೆ ಆದರೆ ಕ್ರೀಡಾ ಪಟು ಕಾವ್ಯ ಅವರ ನೆನಪು ನಿರಂತರವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಅವರು ತಮ್ಮ ಅನುದಾನದಲ್ಲಿ ಕಟೀಲು ದೇವರಗುಡ್ಡೆಯಲ್ಲಿ ರಾಷ್ಟ್ರ ಮಟ್ಟ ಕ್ರೀಡಾ ಪಟು ಕಾವ್ಯಾ ಸ್ಮರಣಾರ್ಥ ನಿರ್ಮಾಣಗೊಂಡ ವೃತ್ತ ಮತ್ತು ಐಮಾಸ್ಟ್ ದೀಪದ ಉದ್ಘಾಟನೆ ನೆರವೇರಿಸಿ ಮಾತನಾಡಿ ಕಾವ್ಯ ಕ್ರೀಡಾಪಟುವಾಗಿದ್ದುಕೊಂಡು ಅನೇಕ ಕನಸುಗಳು ಕಂಡಿದ್ದರು ಅದು ಕನಸು ನನಸಾಗಲಿಲ್ಲ ಕೆಲವು ಸಮಯಗಳ ಹಿಂದೆ ೧೦ ಲಕ್ಷ ರೂಪಾಯಿ ಅನುದಾನದಲ್ಲಿ ಈ ಭಾಗದ ರಸ್ತೆಯನ್ನು ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದೇನೆ ಈ ಭಾಗದಲ್ಲಿ ಸರಕಾರದ ಗ್ರಾಮ ವಿಕಾಸ ಯೋಜನೆಯನ್ನು ತಂದು ಅಭಿವೃದ್ದಿಪಡಿಸಲಾಗುವುದು. ಬಡಕುಟುಂಬಗಳನ್ನು ಗುರುತಿಸಿ ಅವರ ಮನೆಗಳಿಗೆ ಸೋಲಾರ್ ದೀಪ ಅಳವಡಿಸಲು ಅನುದಾನ ನೀಡಲಾಗುತ್ತಿದ್ದು ಅಂತಹ ಕುಟುಂಬಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಮುಂಬೈ ತುಳುವಶಕ್ತಿ ಸಂಘಟನೆ ಅಧ್ಯಕ್ಷ ಬೋಳ ರವಿ ಪೂಜಾರಿ ಮಾತನಾಡಿ ಕಾವ್ಯ ನೆನಪು ಸದಾ ನಮ್ಮಲ್ಲಿದೆ ತುಳುವ ಶಕ್ತಿ ಸಂಘಟನೆ ಮೂಲಕ ಕಾವ್ಯಳ ಸಾವಿಗೆ ನ್ಯಾಯ ಒದಗಿಸಲು ಹೋರಾಟ ನಡೆಸುತ್ತಿದ್ದೇವೆ, ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.
ಹೈಮಾಸ್ಟ್ ದೀಪವನ್ನು ಊರಿನ ಹಿರಿಯ ನಾಗರಿಕ ಸೇತುಮಾಧವ ಉಡುಪ ಉದ್ಘಾಟಿಸಿದರು.
ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ತಾ. ಪಂ. ಮಾಜಿ ಸದಸ್ಯ ತಿಮ್ಮಪ್ಪ ಕೋಟ್ಯಾನ್, ನ್ಯಾಯವಾದಿ ದಿನಕರ ಶೆಟ್ಟಿ , ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರ ಮನೆ, ಎಕ್ಕಾರು ಗ್ರಾಮ ಪಂಚಾಯಿತಿ ಸದಸ್ಯ ವಿಕ್ರಮ್ ಮಾಡ, ಬಜಪೆ ಗ್ರಾಮ ಪಂಚಾಯಿತಿ ಸದಸ್ಯ ಸಿರಾಜ್, ಸಮಾಜ ಸೇವಕ ರಾಬರ್ಟ್ ರೋಸಾರಿಯೋ, ಕಟೀಲು ಸ್ಪೋರ್ಟ್ಸ್ ಗೇಮ್ಸ್ ಕ್ಲಬ್‌ನ ಕೇಶವ ಕಟೀಲು, ಚಂದ್ರಕಾಂತ್ ನಾಯಕ್ , ಶ್ರೀಪತಿ ಭಟ್, ಬೇಬಿ, ಲೋಕೇಶ್, ರಮ್ಯ, ವೈಷ್ಣವಿ ಮತ್ತಿತರರಿದ್ದರು.
ರಾಬರ್ಟ್ ಪುರ್ಟಾಡೋ ಸ್ವಾಗತಿಸಿದರು. ಅಲೆಕ್ಸ್ ತಾವ್ರೋ ಕಾರ್ಯಕ್ರಮ ನಿರೂಪಿಸಿದರು.

Kinnigoli-13111801

Comments

comments

Comments are closed.

Read previous post:
Mulki-12111803
ಮೂಲ್ಕಿ: 6ನೇ ವರ್ಷ ತುಳುವೆರೆ ತುಡಾರ ಪರ್ಬ

ಮೂಲ್ಕಿ: ಶ್ರೀ ನಾರಾಯಣ ಗುರುಗಳ ತತ್ವ ಆದರ್ಶದಂತೆ ಎಲ್ಲಾ ಸಮಾಜದವರು ಸೇರಿ ನಮ್ಮ ಕರಾವಳಿಯ ಸಂಪ್ರದಾಯದಂತೆ ದೀಪಾವಳಿಯನ್ನು ಆಚರಿಸಿವುದು ಹಾಗೂ ಇದರ ಕ್ರಮಗಳನ್ನು ಯುವ ಸಮಾಜಕ್ಕೆ ತಿಳಿಸುವ...

Close