ಭಜನಾ ಮಂದಿರ, ಸಭಾಗೃಹಕ್ಕೆ ಶಿಲಾನ್ಯಾಸ

ಕಿನ್ನಿಗೋಳಿ : ಧಾರ್ಮಿಕ ನಂಬಿಕೆಗಳು ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ ಎಂದು ವಿಠೋಬ ಭಜನಾ ಮಂಡಳಿ ಪಂಜ ಕೊಯಿಕುಡೆ ಇದರ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಾಂತರಾಮ ಶೆಟ್ಟಿ ಪಂಜಗುತ್ತು ಹೇಳಿದರು
ಪಂಜ ವಿಠೋಬ ಭಜನಾ ಮಂಡಳಿಯ ನೂತನ ಭಜನಾ ಮಂದಿರ ಮತ್ತು ಸಭಾಗೃಹಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉದ್ಯಮಿ ಬೋಳ ರಘುರಾಮ ಶೆಟ್ಟಿ ಮತ್ತು ಭವಾನಿ ರಘುರಾಮ ಶೆಟ್ಟಿ ದಂಪತಿಗಳು ಶಿಲಾನ್ಯಾಸ ನೆರವೇರಿಸಿದರು.
ಈ ಸಂಧರ್ಭ ಸ್ಥಳ ದಾನಿಗಳಾದ ಅಶೋಕ್ ಶೆಟ್ಟಿ ಪಂಜದ ಗುತ್ತು, ವಸಂತಿ ಶೆಟ್ಟಿ ಪಂಜದ ಗುತ್ತು, ಪಂಜ ನಲ್ಯಗುತ್ತು ಗುತ್ತಿನಾರ್ ಭೋಜ ಶೆಟ್ಟಿ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಲೂಕು ಪಂಚಾಯಿತಿ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಜೀರ್ಣೋದ್ದಾರ ಸಮಿತಿಯ ಗೌರಾವಾಧ್ಯಕ್ಷ ವಿಶ್ವನಾಥ ಶೆಟ್ಟಿ ಪಂಜದ ಗುತ್ತು, ಸದಾನಂದ ಶೆಟ್ಟಿ ಪಂಜ, ಕಾರ್ಯಾಧ್ಯಕ್ಷ ಸುಧಾಕರ ಎಸ್ ಪೂಂಜ ಹೊಸಬೆಟ್ಟು, ಪ್ರಧಾನ ಕಾರ್ಯದರ್ಶಿ ಸತೀಶ್ ಎಂ ಶೆಟ್ಟಿ ಪಂಜ ಬೈಲಗುತ್ತು, ಜೊತೆ ಕಾರ್ಯದರ್ಶಿ ಭರತ್ ಶೆಟ್ಟಿ ಪದ್ಮನಾಭ ಪಂಜ, ಕೋಶಾಕಾರಿ ಸುರೇಶ ಪಂಜ, ಮುಂಬೈ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ನಲ್ಯಗುತ್ತು, ಭಜನಾ ಮಂಡಳಿಯ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಪಂಜದ ಗುತ್ತು, ಚಂದ್ರಹಾಸ ಎಂ ಶೆಟ್ಟಿ, ಪದ್ಮನಾಭ ಪೂಜಾರಿ ಪಂಜ, ಕಾರ್ಯದರ್ಶಿ ಪ್ರಮೋದ್ ಶೆಟ್ಟಿ ಪಂಜ, ಜೊತೆ ಕಾರ್ಯದರ್ಶಿ ಕಾರ್ತಿಕ್ ಪೂಜಾರಿ ಪಂಜ, ಕೋಶಾಕಾರಿ ಭರತ್ ರಾಜ್ ಪಿ ಶೆಟ್ಟಿ ಪಂಜ, ಸಂತೋಷ್ ಶೆಟ್ಟಿ ದುರ್ಗಾಂಭ, ನಾರಾಯಣ ಕೋಟ್ಯಾನ್ ಹರಿಪಾದೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-15111803

Comments

comments

Comments are closed.

Read previous post:
Kinnigoli-15111802
ಪ್ರತಿಭಾ ಪುರಸ್ಕಾರ , ಪ್ರಶಸ್ತಿ ಫಲಕ ವಿತರಣೆ

ಕಿನ್ನಿಗೋಳಿ: ಮಾನವೀಯ ಮೌಲ್ಯಯುಳ್ಳ ಸೇವಾ ಕಾರ್ಯಗಳು ಹಾಗೂ ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳು ಸೇವಾ ಸಂಸ್ಥೆಗಳು ಹಮ್ಮಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಚಂದ್ರ ಶೇಖರ್...

Close