ಪ್ರತಿಭಾ ಪುರಸ್ಕಾರ , ಪ್ರಶಸ್ತಿ ಫಲಕ ವಿತರಣೆ

ಕಿನ್ನಿಗೋಳಿ: ಮಾನವೀಯ ಮೌಲ್ಯಯುಳ್ಳ ಸೇವಾ ಕಾರ್ಯಗಳು ಹಾಗೂ ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳು ಸೇವಾ ಸಂಸ್ಥೆಗಳು ಹಮ್ಮಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಚಂದ್ರ ಶೇಖರ್ ನಾನಿಲ್ ಹೇಳಿದರು.
ಕಿನ್ನಿಗೋಳಿ ಸ್ವಾಗತ್ ಸಭಾಭವನದಲ್ಲಿ ಕಿನ್ನಿಗೋಳಿ ಹಾಗೂ ಕಟೀಲು-ಎಕ್ಕಾರು ಲಯನ್ಸ್ ಮತ್ತು ಲಯನೆಸ್ ಕ್ಲಬ್ ಆಶ್ರಯದಲ್ಲಿ ನಡೆದ ಲಯನ್ಸ್ ಸಮಾವೇಶದಲ್ಲಿ ಮಾತನಾಡಿದರು.
ಈ ಸಂದರ್ಭ ಅಂಚೆ ಇಲಾಖೆಯಲ್ಲಿ 39 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಅಂಚಿನಲ್ಲಿರುವ ಇಲಿಯಾಸ್ ಡಿಸೋಜ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ ಕೃಪಾ ಕಟೀಲು ಅವರನ್ನು ಸನ್ಮಾನಿಸಲಾಯಿತು.
ಪ್ರತಿಭಾನ್ವಿತ ಅನ್ವೇಷಣೆಯಡಿಯಲ್ಲಿ ನೇಹಾ ಕೆ, ಸಹನಾ ದೀಪಾ ಬಿಂದು ಕುಲಾಲ್ ಅವರಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಎಕ್ಕಾರು- ಕಟೀಲು ಲಯನ್ಸ್ ಕ್ಲಬ್ ವತಿಯಿಂದ ಎಕ್ಕಾರು ಅಂಗನವಾಡಿ ಕೇಂದ್ರಕ್ಕೆ ಮಿಕ್ಸಿ ನೀಡಲಾಯಿತು. ಲಯನ್ಸ್ ಜಿಲ್ಲಾ ಪ್ರತಿನಿ ಅಬೂಬಕ್ಕರ್ ಕುಕ್ಕಾಡಿ , ಲಯನ್ಸ್ ಜಿಆರ್‌ಆರ್ ವಿಲಿಯಂ ಮಸ್ಕರೇನಸ್ , ವಲಯ ಅಧ್ಯಕ್ಷರಾದ ಗಣೇಶ್ ಡಿ. ಶೆಟ್ಟಿ, ಉದಯ ಅಮೀನ್ ಮಟ್ಟು , ಕಟೀಲು ಲಯನ್ಸ್ ಕ್ಲಬ್ ಕಾರ್ಯದರ್ಶಿ ಗಂಗಾಧರ , ಕೋಶಾಽಕಾರಿ ಪ್ರಭಾಕರ ಶೆಟ್ಟಿ , ಪ್ರಾಂತೀಯ ರಾಯಬಾರಿ ಮೆಲ್ವಿನ್ ಡಿಸೋಜ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ವೈ. ಯೋಗೀಶ್ ರಾವ್, ಲಯನೆಸ್ ಅಧ್ಯಕ್ಷೆ ಹಿಲ್ಡಾ ಡಿಸೋಜ, ಕಾರ್ಯದರ್ಶಿಗಳಾದ ರೇಶ್ಮಾ ಮಿನೇಜಸ್, ಜೊಸೆಫ್ ಮಿನೇಜಸ್, ಸುರೇಖಾ ನಾಗೇಶ್ ಉಪಸ್ಥಿತರಿದ್ದರು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಡೋನಿ ಮಿನೇಜಸ್ ಸ್ವಾಗತಿಸಿದರು. ವಲೇರಿಯನ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಹಿಲ್ಡಾ ಡಿಸೋಜ ವಂದಿಸಿದರು.
Kinnigoli-15111802

Comments

comments

Comments are closed.

Read previous post:
Kinnigoli-15111801
ನಡುಗೋಡು : ಪ್ರತಿಭಾ ಅನ್ವೇಷಣೆ

ಕಿನ್ನಿಗೋಳಿ: ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ಆಶ್ರಯದಲ್ಲಿ ನಡುಗೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಅನ್ವೇಷಣೆ ಸ್ಪರ್ಧೆ ನಡೆಯಿತು. ರೋಟರಿ ಕ್ಲಬ್ ಅಧ್ಯಕ್ಷ ಕೆ. ಬಿ. ಸುರೇಶ್...

Close