ಶೌಚಾಲಯ ಬಳಕೆ, ಸ್ವಚ್ಚತೆ ಮತ್ತು ಮಹತ್ವದ ಅರಿವು

ಕಿನ್ನಿಗೋಳಿ: ಸ್ವಚ್ಚತೆ ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು, ಪ್ರತಿಯೊಬ್ಬರು ಸ್ವಚ್ಚತೆಯ ಬಗ್ಗೆ ಗಮನ ಹರಿಸಿದರೆ ಭಾರತದ ಕಲ್ಪನೆ ಸಹಾಕರಗೊಳ್ಳುತ್ತದೆ, ಮಕ್ಕಳಲ್ಲಿ ಇದರ ಬಗ್ಗೆ ಅರಿವು ಮೂಡಿಸಿದರೆ ಉತ್ತಮ ಎಂದು ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಬಂಧಕ ವಿವೇಕಾನಂದ ಹೇಳಿದರು.
ಗುತ್ತಕಾಡಿನಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಸೋಮವಾರ ವಿಶ್ವ ಶೌಚಾಲಯ ದಿನಾಚರಣೆ ಪ್ರಯುಕ್ತ ಶೌಚಾಲಯ ಬಳಕೆಯ ಮಹತ್ವ ಸ್ವಚ್ಚತೆ ಅರಿವು ಮೂಡಿಸುವ ಸಲುವಾಗಿ ನಡೆದ ಜಾಥದಲ್ಲಿ ಮಾತನಾಡಿದರು.
ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ ಜಾಥಾಕ್ಕೆ ಚಾಲನೆ ನೀಡಿದರು. ಗುತ್ತಕಾಡು ಹಿರಿಯ ಪ್ರಾರ್ಥಮಿಕ ಶಾಲೆಯ ವಿಧ್ಯಾರ್ಥಿಗಳು ಜಾಥದಲ್ಲಿ ಪಾಲ್ಗೊಂಡರು.
ಈ ಸಂದರ್ಭ ಕಿನ್ನಿಗೋಳಿ ಪಂಚಾಯಿತಿ ಸದಸ್ಯರಾದ ಸಂತೋಷ್, ವಾಣಿ, ಶಾಮಲಾ ಹೆಗ್ಡೆ, ಗುತ್ತಕಾಡು ಶಾಲಾ ಮುಖ್ಯೋಪದ್ಯಾಯನಿ ರೀಟಾ ಡೇಸಾ, ಅಂಗನವಾಡಿ ಶಿಕ್ಷಕಿ ಶಶಿಕಲಾ, ಪಂಚಾಯಿತಿ ಕಾರ್ಯದರ್ಶಿ ಶ್ರೀಕಾಂತ್ ಸಿಂತಿಗೇರ, ಕೇಶವ ದೇವಾಡಿಗ, ಪ್ರಕಾಶ್ ಕಿನ್ನಿಗೋಳಿ, ಶಶಿಕಾಂತ್, ಕಪಿಲ, ಕಮಲ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಕಿನ್ನಿಗೋಳಿ ಪಂಚಾಯಿತಿ ಪಿಡಿಒ ಅರುಣ್ ಪ್ರದೀಪ್ ಡಿಸೋಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-21111803

Comments

comments

Comments are closed.

Read previous post:
Kinnigoli-21111802
ಮಕ್ಕಳ ಹಕ್ಕು ಗ್ರಾಮ ಸಭೆ

ಕಿನ್ನಿಗೋಳಿ : 2018-19ನೇ ಸಾಲಿನ ಮಕ್ಕಳ ಹಕ್ಕುಗಳ ಗ್ರಾಮ ಸಭೆ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು. ಈ ಸಂದರ್ಭ ಎಸ್.ಸಿ., ಎಸ್.ಟಿ, ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ...

Close