ಮಹಿಳಾ ದೌರ್ಜನ್ಯದ ಬಗ್ಗೆ ಮಾಹಿತಿ

ಕಿನ್ನಿಗೋಳಿ: ಜೀವನದಲ್ಲಿ ನಮಗೆ ಬರುವ ಸಮಸ್ಯೆಗಳಿಗೆ ನಾವೆ ದಾರಿ ಕಂಡುಕೊಳ್ಳಲು ಸಾದ್ಯ, ನಮ್ಮ ದಿನನಿತ್ಯದ ಬದುಕಿನಲ್ಲಿ ಅನೇಕ ರೀತಿಯಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದೇವೆ, ಜೀವನದಲ್ಲಿ ಬರುವ ದೌರ್ಜನ್ಯಕ್ಕೆ ಕುಡಿತ ಮಾತ್ರ ಕಾರಣವಲ್ಲ, ದೌರ್ಜನ್ಯಗಳು ನಡೆದಾಗ ಅದನ್ನು ಮುಚ್ಚಿ ಕುಳಿತುಕೊಳ್ಳೂದು ಸರಿಯಲ್ಲ ಎಂದು ಕೈಕಂಬ ಭರತ್ ವಿಧಾತ್ರಿಕಲಾವಿದರು ಸಂಸ್ಥೆಯ ಭರತ್ ಎಸ್ ಕರ್ಕೇರ ಹೇಳಿದರು.
ಪಕ್ಷಿಕೆರೆ ಹರಿಪಾದೆ ತಮಿಳು ಕಾಲನಿಯಲ್ಲಿ ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು, ಸಂಜೀವಿನಿ ಸಂಸ್ಥೆ ಮತ್ತು ಕಾನ್ಸೆಟ್ಟಾ ಆಸ್ಪತ್ರೆ ಕಿನ್ನಿಗೋಳಿ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಮಹಿಳಾ ದೌರ್ಜನ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಪ್ರಜ್ಞಾ ಸಲಹಾ ಕೇಂದ್ರದ ಮೇಲ್ವಿಚಾರಕಿ ರೇಶ್ಮಾ ಪ್ರಸ್ತಾವನೆಗೈದರು,
ಕಿನ್ನಿಗೋಳಿ ಕಾನ್ಸೆಟ್ಟಾ ಮತ್ತು ಸಂಜೀವಿ ಸಂಸ್ಥೆಯ ನಿರ್ದೇಶಕಿ ಅಮಿತಾ, ಪ್ರಜ್ಞಾ ಸಲಹಾ ಕೆಂದ್ರದ ಪ್ರದೀಪ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ಸಂಜೀವಿನಿ ಸಂಸ್ಥೆಯ ಪದ್ಮಿನಿ ವಸಂತ್ ಸ್ವಾಗತಿಸಿದರು, ಅಶೋಕ್ ಕಾರ್ಯಕ್ರಮ ನಿರೂಪಿಸಿದರು.

Kinnigoli-21111808

Comments

comments

Comments are closed.

Read previous post:
Kinnigoli-21111807
ನಮ್ಮ ತ್ಯಾಜ್ಯ ನಮ್ಮ ಹೊಣೆ ಜಾಗೃತಿ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವತಿಯಿಂದ ನಮ್ಮ ತ್ಯಾಜ್ಯ ನಮ್ಮ ಹೊಣೆ ಜಾಗೃತಿ ಮೂಡಿಸುವ ಸಮಾಲೋಚನಾ ಸಭೆ ಗುತ್ತಕಾಡು ಕೊರಗ ಸಮುದಾಯ ಭವನದಲ್ಲಿ ಸೋಮವಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ...

Close