ವಲಯ ಮಟ್ಟದ ಮಕ್ಕಳ ದಿನಾಚರಣೆ

ಕಿನ್ನಿಗೋಳಿ : ಮಕ್ಕಳ ಬೆಳವಣಿಗೆಯಲ್ಲಿ ರಕ್ಷಕರ ಜೊತೆ ಶಿಕ್ಷಕರ ಪಾತ್ರ ಪ್ರಾಮುಖ್ಯವಾದುದು, ಮಕ್ಕಳಲ್ಲಿ ಶಿಸ್ತು ಮತ್ತು ಸಂಸ್ಕಾರ ಕೊಡುವ ಕೆಲಸ ಮಾಡಬೇಕು, ಸರಿಯಾದ ರೀತಿಯಲ್ಲಿ ಮಕ್ಕಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಕರ್ನಾಟಕ ಸರಕಾರ ದ.ಕ. ಜಿಲ್ಲಾ ಪಂಚಾಯಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ಮಂಗಳೂರು ಗ್ರಾಮಾಂತರ ಹಾಗೂ ಕೆಮ್ರಾಲ್ ಗ್ರಾಮ ಪಂಚಾಯಿತಿಯ ಸಂಯುಕ್ತ ಅಶ್ರಯದಲ್ಲಿ ಶುಕ್ರವಾರ ನಡೆದ ಬಜ್ಪೆ ೧ ವಲಯ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೋಳ್ಳೂರು ಮಾತನಾಡಿ ಪ್ರತೀಯೊಂದು ಮಕ್ಕಳಲ್ಲಿ ಒಂದೊಂದು ರೀತಿಯ ಪ್ರತಿಭೆಗಳು ಇವೆ, ಅದನ್ನು ಹೊರಹಾಕಲು ಸರಿಯಾದ ವೇದಿಕೆಯನ್ನು ಕಲ್ಪಿಸಬೇಕು ಎಂದು ಹೇಲಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಅಂಗನವಾಡಿ ಮಕ್ಕಳಿಗೆ ಮತ್ತು ರಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ಕೆಮ್ರಾಲ್ ಪಂಚಾಯಿತಿ ಪಿ.ಡಿ.ಒ ರಮೇಶ್ ರಾಥೋಡ್, ಪಡುಪಣಂಬೂರು ಪಂಚಾಯಿತಿ ಪಿ.ಡಿ.ಒ ಅನಿತಾ ಕ್ಯಾಥರಿನ್, ಪಡುಪಣಂಬೂರು ಸಹಕಾರಿ ಬ್ಯಾಂಕ್ ಸದಸ್ಯ ಜಯರಾಮ ಆಚಾರ್ಯ, ಸಮಾಜಿಕ ಕಾರ್ಯಕರ್ತ ನಿತಿನ್ ವಾಸ್ ಪಂಚಾಯಿತಿ ಸದಸ್ಯರಾದ ಪುಷ್ಪ ಪ್ರಮೀಳಾ ಶೆಟ್ಟಿ, ಕೇಶವ ಶಿಕ್ಷಕಿಯರಾದ ವಿನೋಧ ಶೆಟ್ಟಿ ಪುಷ್ಪ ಬಂಗೇರ, ಪ್ರತಿಭಾ ಶೆಟ್ಟಿ , ಯಶೋಧ, ಸವಿತಾ, ಹರಿಣಾಕ್ಷಿ, ಶಶಿಕಲಾ ಪುಷ್ಪಲತಾ, ಪ್ರೇಮಲತಾ, ಮೀನಾಕ್ಷಿ, ಫಾತಿಮಾ, ರೋಹತ್, ಸುಮಾ, ಲೀಲಾಕ್ಷಿ, ಯೋಗಿನಿ, ಮೀನಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.
ತಾರಾ ಶೆಟ್ಟಿ ವಂದಿಸಿದರು. ಬಜಪೆ 1 ರ ಅಂಗನವಾಡಿ ಮೇಲ್ವಿಚಾರಕಿ ಅಶ್ವಿನಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-21111801

Comments

comments

Comments are closed.

Read previous post:
Kinnigoli-15111803
ಭಜನಾ ಮಂದಿರ, ಸಭಾಗೃಹಕ್ಕೆ ಶಿಲಾನ್ಯಾಸ

ಕಿನ್ನಿಗೋಳಿ : ಧಾರ್ಮಿಕ ನಂಬಿಕೆಗಳು ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ ಎಂದು ವಿಠೋಬ ಭಜನಾ ಮಂಡಳಿ ಪಂಜ ಕೊಯಿಕುಡೆ ಇದರ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಾಂತರಾಮ ಶೆಟ್ಟಿ ಪಂಜಗುತ್ತು ಹೇಳಿದರು...

Close