ಕಿನ್ನಿಗೋಳಿ ಈದ್ ಮಿಲಾದ್ ಸೌಹಾರ್ದ ಸಮಾವೇಶ

ಕಿನ್ನಿಗೋಳಿ: ಕಿನ್ನಿಗೋಳಿ ಪರಿಸರದಲ್ಲಿ ಶಾಂತಿ ಸೌಹಾರ್ದತೆಗೆ ಹೆಚ್ಚಿನ ಒತ್ತು ಕೊಟ್ಟು ಇತರ ಧರ್ಮದ ಹಬ್ಬಕ್ಕೂ ಹೆಚ್ಚಿನ ಮಹತ್ವ ನೀಡಿ ಶಾಂತಿ ಸಹಬಾಳ್ವೆ ಯಿಂದ ಇದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಎಂದು ಕಟೀಲು ದೇವಳ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಬಾಲಕಷ್ಣ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ರಾಜಾಂಗಣ ಸಭಾಭವನದಲ್ಲಿ ಮಂಗಳವಾರ ನಡೆದ ಕಿನ್ನಿಗೋಳಿ ಈದ್ ಮಿಲಾದ್ ಸೌಹಾರ್ದ ಸಮಾವೇಶ ಕಾರ್ಯಕ್ರಮದಲ್ಲಿ ಮಾತಾನಡಿದರು.
ಸಮಿತಿಯ ಅಧ್ಯಕ್ಷ ಟಿ. ಕೆ. ಅಬ್ದುಲ್ ಖಾದರ್ ಅಧ್ಯಕ್ಷತೆವಹಿಸಿದ್ದರು.
ಮಂಜನಾಡಿ ಮನೀರ್ ಅಹಮದ್ ಕಾಮಿಲ್ ಸಖಾಫಿ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಕಲ್ಕೆರೆ ವಿದ್ಯಾಸಂಸ್ಥೆಯ ಪ್ರಾಚಾರ‍್ಯ ಪಿ. ಎ. ಅಬ್ದುಲ್ಲ ಮದನಿ, ಬಹುಭಾಷ ಕವಿ ಹುಸೈನ್ ಕಾಟಿಪಳ್ಳ, ಪುನರೂರು ಮಸೀದಿಯ ಮುಹಮ್ಮದ್ ಬಶೀರ್ ಮದನಿ, ಕಿನ್ನಿಗೋಳಿ ಮಸೀದಿಯ ಖತೀಬರಾದ ಅಬ್ದುಲ್ ಲತೀಫ್ ಸಖಾಫಿ, ತಾಳಿಪಾಡಿ ಮಸೀದಿಯ ಉಮರ್ ಫಾರೂಕ್ ಸಖಾಫಿ, ಪಕ್ಷಿಕೆರೆ ಮಸೀದಿಯ ಅಬ್ದುಲ್ ಕಾದರ್‌ಮದನಿ, ಎಸ್. ಕೋಡಿ ಮಸೀದಿಯ ಕೆ. ಎ. ಇಬ್ರಾಹಿಂ ರಝ್ವಿ, ಕಿನ್ನಿಗೋಳಿ ಮಸೀದಿಯ ಅಧ್ಯಕ್ಷ ಅಬ್ದುಲ್ ರಜಾಕ್, ತಾಳಿಪಾಡಿ ಮಸೀದಿಯ ಅಬ್ದುಲ್‌ರೆಹಮಾನ್, ಪುನರೂರು ಮಸಿದಿಯ ಸಿದ್ದೀಕ್ ಪುನರೂರು, ಎಸ್. ಕೋಡಿ ಮಸೀದಿಯ ಕೆ. ಎ. ಕಾದರ್ ಮತ್ತಿತತರು ಉಪಸ್ಥಿರಿದ್ದರು.
ಕಲ್ಕೆರೆ ವಿದ್ಯಾಸಂಸ್ಥೆಯ ಹಸನ್ ಸಖಾಫಿ ಪ್ರಸ್ತಾವನೆಗೈದರು. ಟಿ. ಕೆ. ಅಬ್ದುಲ್ ಖಾದರ್ ಸ್ವಾಗತಿಸಿದರು. ಟಿ. ಎಚ್ ಮಯ್ಯದ್ದಿ ಕಾರ್ಯಕ್ರಮ ನಿರೂಪಿಸಿದರು.

Kinnigoli-24111801

Comments

comments

Comments are closed.