ಐಕಳ : ಪರಿಸರ ಜಾಗೃತಿ ಕಾರ್ಯುಕ್ರಮ

ಕಿನ್ನಿಗೋಳಿ: ಮಾನವ ಸ್ವಾರ್ಥದಿಂದ ಪರಿಸರವನ್ನು ಬೀಕಾಬಿಟ್ಟಿಯಾಗಿ ಉಪಯೋಗಿಸುತ್ತಿರುವುದರಿಂದ ನಮ್ಮ ಮುಂದಿನ ಪೀಳಿಗೆಗೆ ಪರಿಸರ ನಾಶದ ವಿಪತ್ತು ಕಾದಿದೆ ಇದರ ಬಗ್ಗೆ ಜಾಗೃತಿ ಅಗತ್ಯವಿದೆ ಎಂದು ಪೊಂಪೈ ಪದವಿ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಗದೀಶ ಹೊಳ್ಳ ಹೇಳಿದರು.
ಪೊಂಪೈ ಪದವಿ ಕಾಲೇಜಿನಲ್ಲಿ ನಮ್ಮ ಪರಿಸರ ನಮ್ಮ ಹೊಣೆ ಎಂಬ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರ ಧ್ಯೇಯ ವ್ಯಾಕ್ಯದಡಿಯಲ್ಲಿ ಶುಕ್ರವಾರ ಐಕಳ ಪೊಂಪೈ ಕಾಲೇಜಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎನ್ ಎನ್ ಎಸ್ ನ ಅಧಿಕಾರಿ ಡಾ. ವಿಕ್ಟರ್ ವಾಜ್ ಮಾತನಾಡಿ ಪರಿರಸ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಶಾಲಾ ಕಾಲೇಜು ಜೀವನದಲ್ಲಿ ಪಾಠ ಕಲಿತು ಇತರಿರಿಗೂ ಅದನ್ನು ತಲುಪಿಸುವ ಕಾರ್ಯ ಆಗಬೇಕು ಎಂದು ಹೇಳಿದರು.
ಸಹಕಾರ್ಯಕ್ರಮ ಅಧಿಕಾರಿ ಸಿಲ್ವಿಯಾ ಪಾಯಸ್ , ಕಾಲೇಜು ಕಚೇರಿ ಪ್ರಬಂಧಕ ರಾಕೀ ಜಿ. ಲೋಬೋ, ಉಪನ್ಯಾಸಕರಾದ ಅಕ್ಷತಾ ವಿ. ಶೆಟ್ಟಿ , ತಿಲಕ್ ಗೌಡ, ಎನ್‌ಎಸ್‌ಎಸ್ ನಾಯಕ ಶ್ರವಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-28111807

Comments

comments

Comments are closed.

Read previous post:
Kinnigoli-28111806
ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ

ಕಿನ್ನಿಗೋಳಿ: ದ. ಕ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಜನನ ಲಿಂಗಾನುಪಾತದಡಿಯಲ್ಲಿ ತೀರಾ ಕುಸಿದಿದ್ದು 1000 ಗಂಡು ಮಕ್ಕಳಿಗೆ ಕೇವಲ 947 ಹಣ್ಣು ಮಕ್ಕಳು ಮಾತ್ರ ಇದೆ. ಹೆಣ್ಣು ಭ್ರೂಣ...

Close