ಅತ್ತೂರು ಬೈಲು ಗಣಪತಿ ಉಡುಪರ ಶ್ರದ್ದಾಂಜಲಿ ಸಭೆ

ಕಿನ್ನಿಗೋಳಿ: ಅತ್ತೂರು ಬೈಲು ಗಣಪತಿ ಉಡುಪರು ಮೂಲ್ಕಿ ಅರಸು ಮನೆತನದ ರಾಜ ಪುರೋಹಿತರಾಗಿದ್ದು ಅರಮನೆಗೆ ಹತ್ತಿರದ ಸಂಬಂಧ ಹೊಂದಿದ್ದರು ಎಂದು ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು
ಅತ್ತೂರು ಮಾಗಣೆ ವತಿಯಿಂದ ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ರಾಜ ಗೋಪುರದಲ್ಲಿ ಅತ್ತೂರು ಬೈಲು ಗಣಪತಿ ಉಡುಪರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿ ಮೂಲ್ಕಿ ಸೀಮೆ ಅರಮನೆಯಲ್ಲಿನ ಯಾವುದೇ ದಾರ್ಮಿಕ ಕಾರ್ಯಕ್ರಮ ಮಾತ್ರವಲ್ಲದೆ ಸೀಮೆಯ ಅರಸು ಪೀಠದ ಪಟ್ಟಾಭಿಷೇಕಕ್ಕೂ ಬೈಲು ಉಡುಪರ ಅಗತ್ಯತೆ ಇದೆ ಎಂದರು. ಬಪ್ಪನಾಡು ದೇವಳದ ಅನುವಂಶಿಕ ಮೊಕ್ತೇಸರ ಮನೋಹರ್ ಶೆಟ್ಟಿ ಮಾತನಾಡಿ ಬಪ್ಪನಾಡು ದೇವಳಕ್ಕೆ ಗಣಪತಿ ಉಡುಪರು ಹತ್ತಿರದ ಸಂಬಂಧ ಹೊಂದಿದ್ದರು, ಕಳೆದ ಬ್ರಹ್ಮಕಲಶೋತ್ಸವ ಸಂದರ್ಭ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದರು ಎಂದರು. ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಮಾತನಾಡಿ ಕಟೀಲು ದೇವಳದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿಷ್ಟಿತ ಮನೆತನಗಳಲ್ಲಿ ಅತ್ತೂರು ಬೈಲು ಒಂದಾಗಿದ್ದು, ಹೆಚ್ಚಿನ ಕಾರ್ಯಕ್ರಮದಲ್ಲಿ ಗಣಪತಿ ಉಡುಪರು ಪಾಲ್ಗೊಳ್ಳುತ್ತಿದ್ದರು, ದೇವಳದಲ್ಲಿ ನಡೆಯುವ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಅತ್ತೂರು ಉಡುಪರೇ ದಿನ ನಿಗಧಿಪಡಿಸಬೇಕಾದ ಕ್ರಮ ಇದೆ ಎಂದರು.
ಅತ್ತೂರು ಭಂಡಾರ ಮನೆ ಶಂಭು ಮುಕಾಲ್ದಿ ಮಾತನಾಡಿ ಬೈಲು ಉಡುಪರಿಂದ ಅತ್ತೂರಿನ ಹೆಸರು ಪ್ರಸಿದ್ದಿ ಪಡೆದಿದೆ, ಗಣಪತಿ ಉಡುಪರು ಅಪಾರವಾದ ಜ್ಞಾನ ಶಕ್ತಿಯನ್ನು ಹೊಂದಿದ್ದು ಅವರ ಮರಣ ಇಚ್ಚಾ ಮರಣದಂತಾಗಿದೆ ಎಂದರು.
ಈ ಸಂದರ್ಭ ಕಿಲೆಂಜೂರು ಮೂಡುಮನೆ ಜಯರಾಮ ಉಡುಪ ಬಾಲದಿತ್ಯ ಆಳ್ವ, ಕೆ.ವಿ.ಶೆಟ್ಟಿ ದೇವಸ್ಯ, ಪುರುಶೋತ್ತಮ ಶೆಟ್ಟಿ ಕೊಡೆತ್ತೂರು, ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ಚರಣ್ ಶೆಟ್ಟಿ ಕೊಜಪಾಡಿ ಬಾಳಿಕೆ, ಪ್ರಸನ್ನ ಶೆಟ್ಟಿ ಅತ್ತೂರಗುತ್ತು ಗಣಪತಿ ಉಡುಪರ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ಯಾಮರಾಯ ಶೆಟ್ಟಿ ಗೋಳಿದಡಿ, ವಿಶ್ವನಾಥ ಶೆಟ್ಟಿ ಬಾಂಜಾಲಗುತ್ತು, ಶಂಭು ಶೆಟ್ಟಿ, ಗಂಗಾಧರ ಶೆಟ್ಟಿ ಮೂಡ್ರಗುತ್ತು, ಗಿರೀಶ್ ಶೆಟ್ಟಿ ಕುಡ್ತಿಮಾರಗುತ್ತು, ಜಯ ಶೆಟ್ಟಿ ಕೊಜಪಾಡಿಬಾಳಿಕೆ, ಮಹಾಬಲ ಶೆಟ್ಟಿ ಪಡುಮನೆ, ಭೋಜ ಗುತ್ತಿನಾರ್, ಅಶ್ವಿನಿ ಶೆಟ್ಟಿ ನಲ್ಯಗುತ್ತು, ಜಗನಾಥ ಶೆಟ್ಟಿ ಮಮ್ಮೆಟ್ಟು, ಪ್ರವೀಣ್ ಮಾಡ, ಕೊರಗಪ್ಪ ಪೂಜಾರಿ, ಸುರೇಶ್ ಶೆಟ್ಟಿ ದೇವಸ್ಯ, ಗೋವಿಂದ ಪೂಜಾರಿ, ತಾರಾನಾಥ ಶೆಟ್ಟಿ, ರಾಜೇಶ್ ಶೆಟ್ಟಿ ಕೊಡೆತ್ತೂರು, ವಿಜಯ ಎಲ್ ಕೋಟ್ಯಾನ್, ಪೂವಪ್ಪ ಶೆಟ್ಟಿ ಭಂಡಾರ ಮನೆ, ಆನಂದ ಬೆಳ್ಚಡ, ದುರ್ಗಾಪ್ರಸಾದ್ ಶೆಟ್ಟಿ ಬಾಬು ಶೆಟ್ಟಿ ಭಂಡಾರ ಮನೆ, ಜಗನಾಥ ಶೆಟ್ಟಿ ಪಡುಮನೆ, ತಿಮ್ಮಪ್ಪ ಶೆಟ್ಟಿ ಅತ್ತೂರಗುತ್ತು, ರವೀಂದ್ರ ಶೆಟ್ಟಿ ಅಂಗಡಿ ಮನೆ ಅಖಿಲಾಂಡೇಶ್ವರೀ ಮಹಿಳಾ ಮಂಡಳಿಯ ಅಧ್ಯಕ್ಷೆ ಜಯಂತಿ ಶೆಟ್ಟಿ, ಲೀಲಾ ಸುವರ್ಣ, ವನಜ ಬಂಗೇರ, ಲಕ್ಷೀ ಶೆಟ್ಟಿ, ಶಕಿಲಾ ಶೆಟ್ಟಿ, ರವೀಂದ್ರ ಶೆಟ್ಟಿ ಅಂಗಡಿ, ಚಂದ್ರಹಾಸ ಶೆಟ್ಟಿ ರಮೆಶ್ ಕಾಪಿಕಾಡ್, ಮಾಧವ ಶೆಟ್ಟಿಗಾರ್, ವಾಸು ಮಡಿವಾಳ ಮತ್ತಿತರರು ಉಪಸ್ಥಿತರಿದ್ದರು.

Kinnigoli-28111808

Comments

comments

Comments are closed.

Read previous post:
Kinnigoli-28111807
ಐಕಳ : ಪರಿಸರ ಜಾಗೃತಿ ಕಾರ್ಯುಕ್ರಮ

ಕಿನ್ನಿಗೋಳಿ: ಮಾನವ ಸ್ವಾರ್ಥದಿಂದ ಪರಿಸರವನ್ನು ಬೀಕಾಬಿಟ್ಟಿಯಾಗಿ ಉಪಯೋಗಿಸುತ್ತಿರುವುದರಿಂದ ನಮ್ಮ ಮುಂದಿನ ಪೀಳಿಗೆಗೆ ಪರಿಸರ ನಾಶದ ವಿಪತ್ತು ಕಾದಿದೆ ಇದರ ಬಗ್ಗೆ ಜಾಗೃತಿ ಅಗತ್ಯವಿದೆ ಎಂದು ಪೊಂಪೈ ಪದವಿ ಕಾಲೇಜು...

Close