ಕ್ರೀಡಾಸಕ್ತಿಯೊಂದಿಗೆ ಬದುಕಿನ ಸವಾಲುಗಳನ್ನು ಎದುರಿಸಿ

ಕಿನ್ನಿಗೋಳಿ: ಕ್ರೀಡಾಸಕ್ತಿ ಬದುಕಿನ ಕಠಿಣ ಸವಾಲುಗಳನ್ನು ಎದುರಿಸಲು ಪರೋಕ್ಷವಾಗಿ ಕಾರಣವಾಗುತ್ತದೆ. ಮಕ್ಕಳಲ್ಲಿನ ಆತ್ಮಸ್ಥೈರ್ಯ ಹೆಚ್ಚಿಸಲು ಕ್ರೀಡೆ ಪೂರಕ. ಗ್ರಾಮೀಣ ಭಾಗದ ಮಕ್ಕಳಲ್ಲಿ ಮನೋಬಲ ಹೆಚ್ಚಾಗಿರುವ ಕಾರಣ ಅವರಿಗೆ ಅವಕಾಶ ನೀಡುವಂತಹ ವಾತಾವರಣ ನಿರ್ಮಿಸಿರಿ ಎಂದು ಪುತ್ತೂರು ಬಾಡ್ಮಿಂಟನ್ ಅಸೋಸಿಯೇಶನ್ ಕಾರ್ಯದರ್ಶಿ ರಾಜೇಶ್ವರೀ ಆಚಾರ್ಯ ಹೇಳಿದರು.
ಹಳೆಯಂಗಡಿ ಟಾರ್ಪೋಡೆಸ್ ಸ್ಪೋರ್ಟ್ಸ್ ಕ್ಲಬ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭಗೊಂಡ ಬಾಲಕ ಮತ್ತು ಬಾಲಕಿಯರ ಜಿಲ್ಲಾ ಮಟ್ಟದ ಶಟಲ್ ಬಾಡ್ಮಿಂಟನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಬಾಡ್ಮಿಂಟನ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ಅನುಭವವಿರುವ ನಾಗೇಂದ್ರ ಮತ್ತು ನಾಗೇಶ್ ಮಕ್ಕಳಿಗೆ ಸಲಹೆಗಳನ್ನು ನೀಡಿದರು.
ಸ್ಪರ್ಧಾ ಕೂಟದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯಿಂದ ೨೫೮ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಕ್ರೀಡಾ ಪೋಷಕ ಗಣೇಶ್ ಕಾಮತ್ ಮಂಗಳೂರು, ಉದ್ಯಮಿ ನಾಗಭೂಷಣ ರೆಡ್ಡಿ, ಸ್ಪರ್ಧೆಯ ತೀರ್ಪುಗಾರರಾದ ಸಂತೋಷ್, ವಿವೇಕ್ ಉಪಸ್ಥಿತರಿದ್ದರು.
ಟಾರ್ಪೋಡೆಸ್ ಸ್ಪೋಟ್ಸ್ ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Kinnigoli-28111803

Comments

comments

Comments are closed.

Read previous post:
Kinnigoli-28111802
ಮಕ್ಕಳಲ್ಲಿನ ಆಂತರಿಕ ಶಕ್ತಿಯನ್ನು ಜಾಗೃತಿಗೊಳಿಸಿ

ಕಿನ್ನಿಗೋಳಿ: ಮಕ್ಕಳಲ್ಲಿನ ಸುಪ್ತ ಶಕ್ತಿಯನ್ನು ಜಾಗೃತಿಗೊಳಿಸಿ, ಅವರಲ್ಲಿನ ಪ್ರತಿಭೆ ಆಸಕ್ತಿ ಪ್ರಕಾರ ಪ್ರೊತ್ಸಾಹ ತರಬೇತಿ ನೀಡಬೇಕು. ಎಂದು ಮುಂಬಾಯಿ ಕಲಾ ಅಕಾಡೆಮಿಯ ಮುಖ್ಯ ಸಲಹೆಗಾರ ಡಾ. ಸುಧಾಕರ್ ಡಿ....

Close