ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ

ಕಿನ್ನಿಗೋಳಿ: ದ. ಕ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಜನನ ಲಿಂಗಾನುಪಾತದಡಿಯಲ್ಲಿ ತೀರಾ ಕುಸಿದಿದ್ದು 1000 ಗಂಡು ಮಕ್ಕಳಿಗೆ ಕೇವಲ 947 ಹಣ್ಣು ಮಕ್ಕಳು ಮಾತ್ರ ಇದೆ. ಹೆಣ್ಣು ಭ್ರೂಣ ಹತ್ಯೆ ನಿಲ್ಲಬೇಕು ಎಂದು ಅಂಗನವಾಡಿ ಮೇಲ್ವಿಚಾರಕಿ ನಾಗರತ್ನ ಹೇಳಿದರು.
ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಶುಕ್ರವಾರ ನಡೆದ ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ ಎಂಬ ಜಾಗೃತಿ ರಥದ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಶಿಶು ಅಭಿವೃದ್ಧಿ ಅಧಿಕಾರಿ ಶ್ಯಾಮಲ ಶೆಟ್ಟಿ , ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಉಪಾಧ್ಯಕ್ಷೆ ಸುಜಾತಾ ಪೂಜಾರ್ತಿ, ಸದಸ್ಯರಾದ ಸಂತೋಷ್, ಚಂದ್ರಶೇಖರ್, ಯೋಜನೆಯ ಗಿರೀಶ್ ನಾವಡ ಗಣೇಶಪುರ ಹಾಗೂ ಕಿನ್ನಿಗೋಳಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Kinnigoli-28111806

Comments

comments

Comments are closed.

Read previous post:
Kinnigoli-28111805
ಸಸಿಹಿತ್ಲು : ಸಮಿತಿ ಸೂರ್ಯ ಕಾಂಚನ್ ಆಯ್ಕೆ

ಕಿನ್ನಿಗೋಳಿ: ಸಸಿಹಿತ್ಲು ಅಗ್ಗಿದಕಳಿಯ ಅಯ್ಯಪ್ಪ ಸ್ವಾಮಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಸೂರ್ಯ ಕಾಂಚನ್ ಪುನರಾಯ್ಕೆಯಾಗಿದ್ದಾರೆ. ಪದಾಧಿಕಾರಿಗಳು : ಉದಯ .ಬಿ. ಸುವರ್ಣ (ಗೌರವಾಧ್ಯಕ್ಷರು), ಹೇಮಚಂದ್ರ ಗುರುಸ್ವಾಮಿ ಮತ್ತು ಕುಸುಮಾಕರ...

Close